Politicians
ಇಂದು ಶಂಕರ್ ನಾಗ್ ಅವರ ಹುಟ್ಟುಹಬ್ಬ.. ಈ ಹಿನ್ನೆಲೆ ಸ್ಯಾಂಡಲ್ ವುಡ್ ತಾರೆಯರು ಹಾಗೂ ರಾಜಕೀಯ ಗಣ್ಯರು ಶಂಕರ್ ನಾಗ್ ಅವರ ಕೊಡುಗೆಗಳನ್ನ ಸ್ಮರಿಸಿದ್ದಾರೆ.
‘ಆಟೋರಾಜ’ ನ ಅಮೋಘ ಕೊಡುಗೆಗಳನ್ನು ಸ್ಮರಿಸೋಣ’ – ಡಿಸಿಎಂ ಅಶ್ವತ್ಥ್ ನಾರಾಯಣ್
ಡಿಸಿಎಂ ಡಾ. ಅಶ್ವತ್ಥನಾರಾಯಣ ಅವರು ಸಹ ಟ್ವೀಟ್ ಮಾಡಿದ್ದು, “ಮಾಲ್ಗುಡಿ ಡೇಸ್ ನ ‘ವೆಂಕಟೇಶ್’, ಅಭಿಮಾನಿಗಳ ಪಾಲಿನ ನೆಚ್ಚಿನ ‘ಆಟೋರಾಜ’ ಕನ್ನಡ ಚಿತ್ರರಂಗದ ದಂತಕಥೆ ಶಂಕರ್ ನಾಗ್ ಅವರ ಜನ್ಮದಿನವಾದ ಇಂದು ಅವರ ಅಮೋಘ ಕೊಡುಗೆಗಳನ್ನು ಸ್ಮರಿಸೋಣ” ಎಂದಿದ್ದಾರೆ.
‘ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ’- ನಟ ಹಾಗೂ ರಾಜಕಾರಣಿ ಬಿ ಸಿ ಪಾಟೀಲ್
‘ಕೌರವ’ ರಾಗಿ ಗುರುತಿಸಿಕೊಂಡಿರುವ ಸಚಿವ ಬಿ ಸಿ ಪಾಟೀಲ್ ಅವರು ಸಹ ಶಂಕರ್ ನಾಗ್ ಅವರನ್ನ ಸ್ಮರಿಸಿದ್ದಾರೆ. “ಕನ್ನಡ ಚಿತ್ರರಂಗದ ಪ್ರತಿಭಾನ್ವಿತ ನಟ, ನಿರ್ದೇಶಕ, ಬರಹಗಾರ, ರಂಗಕರ್ಮಿ ಹಾಗೂ ಕೋಟ್ಯಂತರ ಸಿನಿರಸಿಕರ ಹೃದಯದಲ್ಲಿ ಚಿರಸ್ಥಾಯಿಯಾಗಿ ಉಳಿದ ದಿವಂಗತ ಶ್ರೀ ಶಂಕರನಾಗ್ ಅವರ ಜನ್ಮದಿನದಂದು ನನ್ನ ಗೌರವಪೂರ್ಣ ನಮನಗಳು” ಎಂದು ಟ್ವೀಟ್ ಮಾಡಿದ್ದಾರೆ.
‘ಮರೆಯದ ಮಾಣಿಕ್ಯ’ ಶಂಕರಣ್ಣನ ನೆನೆದ ಸಿನಿಮಾ ತಾರೆಯರು..!
‘ಶಂಕರ್ ನಾಗ್ ಅವರ ಸಾಧನೆಗಳನ್ನು ನೆನೆಯೋಣ’ – ಸಿ ಟಿ ರವಿ
ಬಿಜೆಪಿ ರಾಷ್ಟ್ರೀಯ ಪ್ರಧಾನ ಕಾರ್ಯದರ್ಶಿ ಸಿ ಟಿ ರವಿ ಅವರು ಸಹ ಟ್ವೀಟ್ ಮಾಡುವ ಮೂಲಕ “ತನ್ನ ವಿನೂತನ ಚಿಂತನೆಗಳಿಂದ, ಅದ್ಭುತ ನಟನೆಯಿಂದ, ಕ್ರಿಯಾಶೀಲತೆಯಿಂದ ಚಿತ್ರರಂಗಕ್ಕೆ ಹೊಸ ರೂಪ ನೀಡಿ ಇಂದು ನಮ್ಮೊಂದಿಗೆ ನೆನಪಾಗಿ ಉಳಿದಿರುವ ಮೇರು ನಟ ದಿವಂಗತ ಶಂಕರ್ ನಾಗ್ ಅವರ ಜನ್ಮದಿನದಂದು ಅವರ ಸಾಧನೆಗಳನ್ನು ನೆನೆಯೋಣ” ಎಂದಿದ್ದಾರೆ.
‘ಕನ್ನಡ ಚಲನಚಿತ್ರರಂಗದ ಮೇರುನಟ’
“ಕನ್ನಡ ಚಲನಚಿತ್ರರಂಗದ ಮೇರುನಟ, ನಿರ್ದೇಶಕ ದಿವಂಗತ ಶ್ರೀ ಶಂಕರ್ ನಾಗ್ ಅವರ ಜನ್ಮದಿನದಂದು ಗೌರವ ನಮನಗಳು” ಎಂದು ಸಚಿವ ಜಗದೀಶ್ ಶೆಟ್ಟರ್ ಅವರು ಟ್ವೀಟ್ ಮಾಡಿದ್ದಾರೆ.
‘ಶಂಕ್ರಣ್ಣನ ಸೃಜನಶೀಲತೆ ಯುವ ಪೀಳಿಗಿಗೆ ಪ್ರೇರಣೆ’ : ಸಂಸದ ಬಿ ವೈ ರಾಘವೇಂದ್ರ
ಸಂಸದ ಬಿ ವೈ ರಾಘವೇಂದ್ರ ಅವರು ಟ್ವೀಟ್ ಮಾಡಿದ್ದು, “ ಕನ್ನಡ ಚಿತ್ರರಂಗದ ಅಪ್ರಿತಿಮ ಪ್ರತಿಭಾವಂತ ನಟ, ನಿರ್ದೇಶಕ, ನಿರ್ಮಾಪಕ, ಶ್ರೀ ಶಂಕರ್ ನಾಗ್ ಅವರ ಜನ್ಮದಿನದಂದು ಅವರನ್ನು ಸ್ಮರಿಸೋಣ. ಶಂಕರ್ ನಾಗು ಅವರು ಸದಾ ಹೊಸತನವನ್ನ ಪ್ರಯೋಗಿಸುತ್ತಾ , ಕನ್ನಡ ಚಿತ್ರರಂಗದಲ್ಲಿ ಹೊಸ ಅಲೆಯನ್ನ ಸೃಷ್ಟಿಸಿದ ಒಬ್ಬ ಕ್ರಿಯಾಶೀಲ ವ್ಯಕ್ತಿ. ಅವರ ಸೃಜನಶೀಲತೆ ಹಾಗೂ ಕಲ್ಪನಾ ಶಕ್ತಿ ಯುವ ಪೀಳಿಗಿಗೆ ಸದಾ ಪ್ರೇರಣೆ” ಎಂದು ಶಂಕ್ರಣನನ್ನ ಸ್ಮರಿಸಿದ್ದಾರೆ.
ಕನ್ನಡದ ಮರೆಯದ ಮಾಣಿಕ್ಯ ಶಂಕರಣ್ಣ: ‘ಸಾಂಗ್ಲಿಯಾನ’ನ ನೆನೆದ ಕರುನಾಡು..!
‘ಕನ್ನಡ ಚಿತ್ರರಂಗದ ಮೇರು ನಟ’ -ಶಿವಕುಮಾರ್ ಉದಾಸಿ
“ಕನ್ನಡ ಚಿತ್ರರಂಗದ ಮೇರು ನಟ , ಪ್ರತಿಭಾನ್ವಿತ ನಿರ್ದೇಶಕ, ಬರಹಗಾರ ಹಾಗೂ ನಾಡಿನ ಜನಮಾನಸದಲ್ಲಿ ಸದಾ ನೆಲೆಸಿರುವ ಧೀಮಂತ ವ್ಯಕ್ತಿತ್ವ ದಿ. ಶ್ರೀ ಶಂಕರನಾಗ್ ಅವರ ಜನ್ಮದಿನದಂದು ನನ್ನ ಗೌರವ ನಮನಗಳು” ಎಂದು ಶಿವಕುಮಾರ್ ಉದಾಸಿ ಅವರು ಟ್ವೀಟ್ ಮಾಡಿದ್ದಾರೆ.
Politicians
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel