Shankar Nag
ಶಂಕರ್ ನಾಗ್… ಕಂಚಿನ ಕಂಠ, ವಿಭಿನ್ನವಾಗಿ ನಡೆಯುವ ಶೈಲಿ, ಆಕರ್ಷಕ ನೋಟಗಳಿಂದ ಗಮನ ಸೆಳೆದಿದ್ದ ನಟ. ಅತ್ಯಂತ ಕಡಿಮೆ ಸಮಯದಲ್ಲೇ ಅಪಾರ ಸಾಧನೆ ಮಾಡಿ, ಕೀರ್ತಿ ಗಳಿಸಿ ಜನಮಾನಸದಲ್ಲಿ ಈ ಶತಮಾನದವರೆಗೂ ವಿರಾಜಮಾನರಾಗಿರುವ ದಿ ಲೆಜೆಂಡ್.. ಶಂಕರನಾಗ್ ಕನ್ನಡ ಚಿತ್ರರಂಗದ ದಂತಕಥೆ. 35 ವರ್ಷಗಳ ಚಿಕ್ಕದಾದ ಬದುಕಿನಲ್ಲಿ ಸಾಧನೆಯ ಶಿಖರಕ್ಕೇರಿ ಜನರ ಮನಸಲ್ಲಿ ಇಂದಿಗೂ ಅಚ್ಚಳಿಯದೇ ಉಳಿದುಬಿಟ್ಟಿರುವ ನಮ್ಮ ‘ಕರಾಟೆ ಕಿಂಗ್’ ಗೆ ಇಂದು ಹುಟ್ಟುಹಬ್ಬದ ಸಂಭ್ರಮ.
ತಮ್ಮ ಚಿಕ್ಕ ಬದುಕಿನಲ್ಲಿ ಜೀವನವಿಡೀ ಜನರು ಮರೆಯಲಾರದಂತಹ ಕಾರ್ಯ ಮಾಡಿದ ನಮ್ಮ ಶಂಕ್ರಣ್ಣ ಅವರು ಅತ್ಯಂತ ಚಿಕ್ಕ ವಯಸ್ಸಿನಲ್ಲೇ ಇಹಲೋಕ ತ್ಯಜಿಸಿದ್ದರು. 1990 ಸೆಪ್ಟಂಬರ್ 30 ರ ಬೆಳಗ್ಗೆ ಜೋಕುಮಾರಸ್ವಾಮಿ ಚಿತ್ರದ ಶೂಟಿಂಗ್‌ಗಾಗಿ ಪತ್ನಿ ಮತ್ತು ಮಗಳು ಕಾವ್ಯ ಜೊತೆ ಕಾರಿನಲ್ಲಿ ಹೋಗುವಾಗ ದಾವಣಗೆರೆ ಹೊರ ವಲಯದ ಬಳಿ ಅಪಘಾತಕ್ಕೀಡಾಗಿ ನಿಧನರಾದರು. ಇಂತಹ ಮೇರು ನಟನನ್ನ ಕಳೆದುಕೊಂಡ ಸ್ಯಾಂಡಲ್ ವುಡ್ ಗೆ ತುಂಬಲಾರದ ನಷ್ಟ ಉಂಟಾಗಿತ್ತು. ಕೋಟ್ಯಾಂತರ ಅಭಿಮಾನಿಗಳಲ್ಲಿ ದುಃಖ ಹೆಪ್ಪಗಟ್ಟಿತ್ತು. ಇಂದಿಗೂ ಶಂಕರಣ್ಣ ತಮ್ಮ ಸಿನಿಮಾಗಳ ಮೂಲಕ , ಅಭಿಮಾನಿಗಳ ಸಮಾಜಮುಖಿ ಕೆಲಸಗಳ ಮೂಲಕ ಜೀವಂತವಾಗಿದ್ದಾರೆ.
ಡಾರ್ಲಿಂಗ್ ಕೃಷ್ಣ ಜೊತೆ ‘ಪಂಚತಂತ್ರ’ ಸುಂದರಿ, ಇನ್ನೂ ಇಬ್ಬರು ನಾಯಕಿಯರು..?
ಶಂಕರ್ ನಾಗ್ ಅವರು 1954ರಲ್ಲಿ ಹೊನ್ನಾವರ ಸಮೀಪದ ಮಲ್ಲಾಪುರದಲ್ಲಿ ಸಾರಸ್ವತ ಬ್ರಾಹ್ಮಣ ಕುಟುಂಬದಲ್ಲಿ ಜನಿಸಿದರು. 1978 ರ ಸಮಯದಲ್ಲಿ ಗಿರೀಶ್ ಕಾರ್ನಾಡ್ ಅವರ ‘ಒಂದಾನೊಂದು ಕಾಲದಲ್ಲಿ’ ಚಿತ್ರದ ಮೂಲಕ ಕನ್ನಡ ಸಿನಿಮಾರಂಗಕ್ಕೆ ಶಂಕರ್ ನಾಗ್ ಅವರು ಪಾದಾರ್ಪಣೆ ಮಾಡಿದ್ದರು. ಈ ಚಿತ್ರದ ಮೂಲಕ ಕನ್ನಡಿಗರ ಮನಸ್ಸಿಗೆ ಹತ್ತಿರವಾದರು. ಈ ಸಿನಿಮಾಗಾಗಿ ಶಂಕರ್ ನಾಗ್ ಅವರಿಗೆ ರಾಷ್ಟ್ರ ಪ್ರಶಸ್ತಿ ಒಲಿದುಬಂದಿತ್ತು. ಹೀಗೆ 1978 ರಿಂದ ಸತತ ಹನ್ನೆರೆಡು ವರ್ಷಗಳ ಅತ್ಯಂತ ಕಡಿಮೆ ಸಮಯದಲ್ಲಿ ಕನ್ನಡದ ಸುಮಾರು 20ಕ್ಕೂ ಹೆಚ್ಚು ಚಿತ್ರಗಳಲ್ಲಿ ನಟಿಸಿದ್ದಾರೆ ಶಂಕರ್ ನಾಗ್. ಇದರ ಜೊತೆಗೆ ಸಹೋದರ ಅನಂತ್ ನಾಗ್ ಅವರ ಜೊತೆಗೂಡಿ ಸಿನಿಮಾಗಳ ನಿರ್ಮಾಣ ಮಾಡುವ ಮೂಲಕ ನಿರ್ಮಾಪಕರಾಗಿಯೂ ಗುರುತಿಸಿಕೊಂಡವರು.
ಅನಂತ್ ನಾಗ್ ಅವರ “ಮಿಂಚಿನ ಓಟ”ಕ್ಕೆ ಆಕ್ಷನ್ ಕಟ್ ಹೆಳುವ ಮೂಲಕ ನಿರ್ದೇಶಕರಾಗಿಯೂ ಖ್ಯಾತಿ ಪಡೆದ “ಆಟೋರಾಜ” ಹಿಂದಿಯಲ್ಲೂ ಕೆಲಸ ಮಾಡಿದ್ದಾರೆ. ‘ಲಾಲಚ್’ ಚಿತ್ರವನ್ನು ನಿರ್ದೇಶಿಸಿದ್ದಾರೆ. ಇದಾದ ಬಳಿಕ ‘ಹೊಸ ತೀರ್ಪು’, ‘ನೋಡಿ ಸ್ವಾಮಿ ನಾವಿರೋದೆ ಹೀಗೆ’, ಯಂತಹ ಸೂಪರ್ ಹಿಟ್ ಸಿನಿಮಾಗಳ ಡೈರೆಕ್ಷನ್ ಮೂಲಕ ಜನರ ಹಾಟ್ ಫೇವರೇಟ್ ನಟ ಕಮ್ ಡೈರೆಕ್ಟರ್ ಆದ “ಸಾಂಗ್ಲಿಯಾನ” 1984 ರಲ್ಲಿ ರಾಷ್ಟ್ರಪ್ರಶಸ್ತಿ ವಿಜೇತ ಚಿತ್ರ ‘ಆಕ್ಸಿಡೆಂಟ್’ ನಿರ್ದೇಶಿಸಿದರು.
ಮೆಗಾಸ್ಟಾರ್ ಚಿರಂಜೀವಿಗೆ ಕೊರೊನಾ ಪಾಸಿಟಿವ್ : ಆತಂಕದಲ್ಲಿ ಟಾಲಿವುಡ್
ಇನ್ನೂ ವರನಟ ಡಾ. ರಾಜ್ ಕುಮಾರ್ ಅಭಿನಯದ ಸೂಪರ್ ಹಿಟ್ ಸಿನಿಮಾ ‘ಒಂದು ಮುತ್ತಿನ ಕಥೆ’ ಗೂ ಶಂಕ್ರಣ್ಣ ಅವರೇ ಆಕ್ಷನ್ ಕಟ್ ಹೇಳಿದ್ದರು. ಇನ್ನೂ ಶಂಕರ್ ನಾಗ್ ಅವರು ಆಟೋ ರಾಜ, ಹದ್ದಿನ ಕಣ್ಣು, ಗೀತಾ, ಬೆಂಕಿ ಚೆಂಡು, ಗೆದ್ದ ಮಗ, ನೋಡಿಸ್ವಾಮಿ ನಾವು ಇರೋದೆ ಹೀಗೆ, ಸಾಂಗ್ಲಿಯಾನದಂತಹ ಕನ್ನಡದ ಅನೇಕ ಹಿಟ್ ಸಿನಿಮಾಗಳಲ್ಲಿ ನಟಿಸಿದ್ದಾರೆ. ಈ ಸಿನಿಮಾಗಳಲ್ಲಿ ಶಂಕರ್ ನಾಗ್ ನಟನಾ ಛಾಪು ಈವರೆಗೂ ಅಭಿಮಾನಿಗಳಲ್ಲಿ ಅಚ್ಚಳಿಯದೆ ಉಳಿದುಬಿಟ್ಟಿದೆ.
ಇಂತಹ ಮರೆಯಲಾರದ ಮಾಣಿಕ್ಯನಿಗೆ ಇಂದು ಹುಟ್ಟುಹಬ್ಬ. ಇಂದು ಇಡೀ ರಾಜ್ಯಾದ್ಯಂತ ಶಂಕರಣ್ಣನ ಅಭಿಮಾನಿಗಳು, ಆಟೋ ಸ್ಟ್ಯಾಂಡ್ ಗಳಲ್ಲಿ ಬಸ್ ಸ್ಟಾಪ್ ಗಳಲ್ಲಿ, ನಾನಾ ಕಡೆಗಳಲ್ಲಿ ಶಂಕರಣ್ಣನ ಹಬ್ಬ ಆಚರಣೆ ಮಾಡುತ್ತಿದ್ದಾರೆ. ಸಾಮಾಜಿಕ ಜಾಲತಾಣಗಳಲ್ಲಿ ಶಂಕರ್ ನಾಗ್ ಅವರ ಜನ್ಮದಿನಕ್ಕೆ ವಿಶ್ ಮಾಡ್ತಿದ್ದಾರೆ. ಇತ್ತ ತಾರೆಯರು, ರಾಜಕಾರಣಿಗಳು ಸಹ ಶಂಕರ್ ನಾಗ್ ಅವರನ್ನ ನೆನೆದು ಟ್ವೀಟ್ ಗಳನ್ನ ಮಾಡ್ತಿದ್ದಾರೆ. ನಟ ಕಿಚ್ಚ ಸುದೀಪ್ , ರಕ್ಷಿತ್ ಶೆಟ್ಟಿ , ಸಚಿವ ಶ್ರೀರಾಮುಲು, ನಿರ್ದೇಶಕ ಸಂತೋಶ್ ಆನಂದ್ ರಾಮ್, ಸಚಿವ ಜಗದೀಶ್ ಶೆಟ್ಟರ್, ಸಿಟಿ ರವಿ, ಸಚಿವ ಬಿಸಿ ಪಾಟೀಲ್ ಹೀಗೆ ಅನೇಕ ಗಣ್ಯರು ಶುಭಕೋರಿದ್ದಾರೆ.
Shankar Nag
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel