ಬೆಳಗಾವಿಯಲ್ಲಿ ಇಂದು ರೈತರ ಕಹಳೆ | mahapanchayath
ಬೆಳಗಾವಿ : ಗಡಿ ಜಿಲ್ಲೆ ಬೆಳಗಾವಿಯಲ್ಲಿ ಇಂದು ರೈತರ ಕಹಳೆ ಮೊಳಗಳಿದ್ದು, ಜಿಲ್ಲೆಯಲ್ಲಿ ಇಂದು 3 ನೇ ರೈತ ಮಹಾ ಪಂಚಾಯತ ನಡೆಯಲಿದೆ.
ಕೇಂದ್ರ ಮತ್ತು ರಾಜ್ಯ ಸರ್ಕಾರದ ರೈತ ವಿರೋಧ ಮಸೂದೆ ರದ್ದು ಪಡಿಸಲು ಒತ್ತಾಯಿಸಿ ರೈತ ಮಹಾ ಪಂಚಾಯತ ನಡೆಯಲಿದೆ.
ಈ ರೈತ ಮಹಾ ಪಂಚಾಯತ್ ಕಾರ್ಯಕ್ರಮ ನಗರದ ಸಿಪಿಎಡ್ ಮೈದಾನದಲ್ಲಿ ಹಮ್ಮಿಕೊಳ್ಳಲಾಗಿದೆ.
ಈ ರೈತ ಸಮಾವೇಶದಲ್ಲಿ ಬೆಳಗಾವಿ ವಿಭಾಗ ಮಟ್ಟದ ಜಿಲ್ಲೆಯ ರೈತರು, ಬೆಳಗಾವಿ, ಧಾರವಾಡ, ವಿಜಯಪುರ, ಬಾಗಲಕೋಟೆ, ಗದಗ, ಕಾರವಾರ ಜಿಲ್ಲೆ ರೈತರು ಭಾಗಿಯಾಗಲಿದ್ದಾರೆ.
ಮಧ್ಯಾಹ್ನ 1 ಗಂಟೆಗೆ ಸಮಾವೇಶ ಆರಂಭವಾಗಲಿದ್ದು, ಚೆನ್ನಮ್ಮ ವೃತ್ತದಿಂದ ಕುಂಭಮೇಳ ಮೂಲಕ ರೈತ ಮುಖಂಡ ರಾಕೇಶ್ ಠಿಕಾಯತ ಯುದ್ಧವೀರ ಸಿಂಗ್,
ಮಾಜಿ ಕೇಂದ್ರ ಸಚಿವ ಬಾಬಾಗೌಡ ಪಾಟೀಲ, ಚಿಕ್ಕು ನಂಜುಂಡಸ್ವಾಮಿ, ಕೆ.ಟಿ.ಗಂಗಾಧರ, ಕುರುಬೂರ ಶಾಂತಕುಮಾರ ಪ್ರಮುಖ ರೈತ ಮುಖಂಡರು ಕಾರ್ಯಕ್ರಮದಲ್ಲಿ ಭಾಗಿಯಾಗಲಿದ್ದಾರೆ.
