KKR vs GT match | ಕೆಕೆಆರ್ ವರ್ಸಸ್ ಗುಜರಾತ್ ಫೈಟ್ ಯಾರು ಬಲಿಷ್ಠ..?
15ನೇ ಆವೃತ್ತಿಯ ಇಂಡಿಯನ್ ಪ್ರಿಮಿಯರ್ ಲೀಗ್ ನ 35ನೇ ಪಂದ್ಯದಲ್ಲಿ ಕೊಲ್ಕತ್ತಾ ನೈಟ್ ರೈಡರ್ಸ್ ಮತ್ತು ಗುಜರಾತ್ ಟೈಟಾನ್ಸ್ ತಂಡಗಳು ಮುಖಾಮುಖಿಯಾಗಲಿವೆ. ಮುಂಬೈನ ಡಿ ವೈ ಪಾಟೀಲ್ ಮೈದಾನದಲ್ಲಿ ಮಧ್ಯಹ್ನಾ 3 : 30ಕ್ಕೆ ಪಂದ್ಯ ನಡೆಯಲಿದೆ.
ಕೊಲ್ಕತ್ತಾ ನೈಟ್ ರೈಡರ್ಸ್ ತಂಡ ಸದ್ಯ ಅಂಕಪಟ್ಟಿಯಲ್ಲಿ ಏಳನೇ ಸ್ಥಾನದಲ್ಲಿದೆ. ಗುಜರಾತ್ ಟೈಟಾನ್ಸ್ ತಂಡ ಎರಡನೇ ಸ್ಥಾನದಲ್ಲಿದೆ.
ಶ್ರೇಯಸ್ ಐಯ್ಯರ್ ನಾಯಕತ್ವದಲ್ಲಿ ಕೆಕೆಆರ್ ತಂಡ ಈ ಆವೃತ್ತಿಯಲ್ಲಿ ಏಳು ಪಂದ್ಯಗಳನ್ನಾಡಿದೆ. ಈ ಪೈಕಿ ಮೂರು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ, ನಾಲ್ಕು ಪಂದ್ಯಗಳಲ್ಲಿ ಸೋಲು ಕಂಡಿದೆ. ಹಾರ್ದಿಕ್ ಪಾಂಡ್ಯ ನೇತೃತ್ವದ ಗುಜರಾತ್ ಟೈಟಾನ್ಸ್ ತಂಡ ಈ ಸೀಸನ್ ನಲ್ಲಿ ಆರು ಪಂದ್ಯಗಳನ್ನಾಡಿದ್ದು, ಐದು ಪಂದ್ಯಗಳಲ್ಲಿ ಗೆಲುವು ಸಾಧಿಸಿದೆ.
ಕೆಕೆಆರ್ ತಂಡ ಕಳೆದ ಪಂದ್ಯದಲ್ಲಿ ರಾಜಸ್ಥಾನ್ ರಾಯಲ್ಸ್ ವಿರುದ್ಧ ಏಳು ರನ್ ಗಳಿಂದ ಸೋಲು ಕಂಡಿದೆ. ಈ ಪಂದ್ಯದಲ್ಲಿ ಆರೋನ್ ಪಿಂಚ್ 58 ರನ್, ಶ್ರೇಯಸ್ ಅಯ್ಯರ್ 85 ರನ್ ಗಳಿಸಿದ್ದರು.
ಗುಜರಾತ್ ಟೈಟಾನ್ಸ್ ತಂಡ ಕಳೆದ ಪಂದ್ಯದಲ್ಲಿ ಚೆನ್ನೈ ಸೂಪರ್ ಕಿಂಗ್ಸ್ ವಿರುದ್ಧ ಮುಖಾಮುಖಿಯಾಗಿತ್ತು. ಈ ಪಂದ್ಯದಲ್ಲಿ ಗುಜರಾತ್ ತಂಡ 3 ವಿಕೆಟ್ ಗಳಿಂದ ಗೆಲುವು ಸಾಧಿಸಿದೆ. ಈ ಪಂದ್ಯದಲ್ಲಿ ಡೇವಿಡ್ ಮಿಲ್ಲರ್ 94 ರನ್, ರಶೀದ್ ಖಾನ್ 40 ರನ್ ಗಳಿಸಿದರು.
ಕೆಕೆಆರ್ ತಂಡದಲ್ಲಿ ಆತ್ಮವಿಶ್ವಾಸ ಚೆನ್ನಾಗಿಲ್ಲ. ವರುಣ್ ಚಕ್ರವರ್ತಿ ಮಿಸ್ಟ್ರಿ ಕಳೆದು ಹೋಗಿರುವುದು ಬೌಲಿಂಗ್ ನಲ್ಲಿ ಹೊಡೆತ ಕೊಟ್ಟಿದೆ. 5ನೇ ಬೌಲರ್ ಕೊರತೆ ಕೆಕೆಆರ್ ತಂಡವನ್ನು ಕಾಡುತ್ತಿದೆ. ಉಮೇಶ್ ಯಾದವ್ ಆರಂಭದಲ್ಲಿ ತೋರಿದ್ದ ಕಂಟ್ರೋಲ್ ತೋರಿಸುತ್ತಿಲ್ಲ. ಬ್ಯಾಟಿಂಗ್ನಲ್ಲಿ ವೆಂಕಟೇಶ್ ಅಯ್ಯರ್ ವೈಫಲ್ಯ ಹೊಡೆತ ಕೊಟ್ಟಿದೆ. ಆದರೆ ಆ್ಯರೋನ್ ಫಿಂಚ್. ನಾಯಕ ಶ್ರೇಯಸ್ ಅಯ್ಯರ್, ನಿತೀಶ್ ರಾಣಾ ಮತ್ತು ಆ್ಯಂಡ್ರೆ ರಸೆಲ್ ಸ್ಪೋಟಕ ಟಚ್ ನಲ್ಲಿದ್ದಾರೆ.
ಬೌಲಿಂಗ್ ನಲ್ಲಿ ಸುನೀಲ್ ನರೈನ್ ಮತ್ತು ಪ್ಯಾಟ್ ಕಮಿನ್ಸ್ ಉತ್ತಮ ಆಟ ಆಡಬೇಕು. ಉಮೇಶ್ ಲಯ ಕಂಡುಕೊಳ್ಳಬೇಕು. ಶಿವಂ ಮಾವಿ, ರಸೆಲ್ ಮತ್ತು ವರುಣ್ ಚಕ್ರವರ್ತಿ ರನ್ ಕಡಿಮೆ ಕೊಡಲೇಬೇಕಿದೆ.
ಪ್ಲೇಯಿಂಗ್ ಇಲೆವೆನ್ :
ಕೋಲ್ಕತ್ತಾ ನೈಟ್ ರೈಡರ್ಸ್: ವೆಂಕಟೇಶ್ ಅಯ್ಯರ್, ಆರನ್ ಫಿಂಚ್, ಶ್ರೇಯಸ್ ಅಯ್ಯರ್ (ಸಿ), ಸುನಿಲ್ ನರೈನ್, ನಿತೀಶ್ ರಾಣಾ, ಶೆಲ್ಡನ್ ಜಾಕ್ಸನ್ (ವಿಕೆ), ಆಂಡ್ರೆ ರಸೆಲ್, ಪ್ಯಾಟ್ ಕಮಿನ್ಸ್, ಶಿವಂ ಮಾವಿ, ಉಮೇಶ್ ಯಾದವ್, ವರುಣ್ ಚಕ್ರವರ್ತಿ
ಗುಜರಾತ್ ಅದ್ಭುತ ಫಾರ್ಮ್ನಲ್ಲಿದ್ದರೂ ಚಿಂದೆ ಇದೆ. ಶುಭ್ಮನ್ ಗಿಲ್ ಸ್ಥಿರ ಆಟ ಆಡಿಲ್ಲ. ವಿಜಯ್ ಶಂಕರ್ ಕೊಡುಗೆಯನ್ನು ತ್ರಿಡಿ ನಲ್ಲಿ ಹುಡುಕಬೇಕು. ಮ್ಯಾಥ್ಯೂವೇಡ್ ಆಡಬೇಕೋ ಬೇಡ್ವೋ ಅನ್ನುವ ಗೊಂದಲವೂ ಇದೆ. ಆದರೆ ನಾಯಕ ಹಾರ್ದಿಕ್ ಪಾಂಡ್ಯಾ ಫಿಟ್ ಆಗಿರುವುದು ಸಂತೋಷದ ಸುದ್ದಿ. ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್ ಮತ್ತು ರಾಹುಲ್ ತೆವಾಟಿಯಾ ಆಟ ತಂಡದ ವಿಶ್ವಾಸ ಹೆಚ್ಚಿಸಿದೆ. ಬೌಲಿಂಗ್ನಲ್ಲಿ ಗುಜರಾತ್ಗೆ ಅಂತಹ ತೊಂದರೆ ಕಾಣುತ್ತಿಲ್ಲ. ಮೊಹಮ್ಮದ್ ಶಮಿ, ಲೊಕಿ ಫರ್ಗ್ಯೂಸನ್, ಹಾರ್ದಿಕ್ ಪಾಂಡ್ಯಾ ಮತ್ತು ಯಶ್ ದಯಾಳ್ ಉತ್ತಮ ಲಯದಲ್ಲಿದ್ದಾರೆ. ರಶೀದ್ ಖಾನ್ ವಿಕೆಟ್ ಬೇಟೆಯಲ್ಲಿ ಇಲ್ಲದಿದ್ದರೂ ರನ್ ಕೊಡುತ್ತಿಲ್ಲ.
ಪ್ಲೇಯಿಂಗ್ ಇಲೆವೆನ್ : ಶುಭಮನ್ ಗಿಲ್, ವೃದ್ಧಿಮಾನ್ ಸಹಾ (WK), ಹಾರ್ದಿಕ್ ಪಾಂಡ್ಯ (c), ಡೇವಿಡ್ ಮಿಲ್ಲರ್, ಅಭಿನವ್ ಮನೋಹರ್, ರಾಹುಲ್ ತೆವಾಟಿಯಾ, ರಶೀದ್ ಖಾನ್, ಮೊಹಮ್ಮದ್ ಶಮಿ, ಲಾಕಿ ಫರ್ಗುಸನ್, ಅಲ್ಜಾರಿ ಜೋಸೆಫ್, ಯಶ್ ದಯಾಲ್
KKR vs GT Dream11 Prediction IPL 2022