KL Rahul : 5ನೇ ಕ್ರಮಾಂಕದಲ್ಲಿ ಮತ್ತೆ ಮಿಂಚಿದ ಕನ್ನಡಿಗ ಕೆಎಲ್ ರಾಹುಲ್
ಆಸ್ಟ್ರೇಲಿಯಾ ವಿರುದ್ಧದ ಮೊದಲ ಏಕದಿನ ಪಂದ್ಯದಲ್ಲಿ ಅತ್ಯುತ್ತಮ ಬ್ಯಾಟಿಂಗ್ ಪ್ರದರ್ಶಿಸಿದ ಕನ್ನಡಿಗ ಕೆಎಲ್ ರಾಹುಲ್, ಆ ಮೂಲಕ ಟೀಂ ಇಂಡಿಯಾದ ಗೆಲುವಿನ ಹೀರೋ ಆಗಿ ಮಿಂಚಿದರು.
ಮುಂಬೈನ ವಾಂಖೆಡೆಯಲ್ಲಿ ನಡೆದ ಮೊದಲ ಪಂದ್ಯದಲ್ಲಿ ರಾಹುಲ್, ಭರ್ಜರಿ ಬ್ಯಾಟಿಂಗ್ ಪ್ರದರ್ಶಿಸಿದರು. ಆಸ್ಟ್ರೇಲಿಯಾ ನೀಡಿದ 189 ರನ್‌ಗಳ ಟಾರ್ಗೆಟ್ ಚೇಸ್ ಮಾಡುವಲ್ಲಿ ಭಾರತದ ಪ್ರಮುಖ ಬ್ಯಾಟರ್‌ಗಳು ವೈಫಲ್ಯರಾದರು.
ಈ ಹಂತದಲ್ಲಿ ಕಣಕ್ಕಿಳಿದ ರಾಹುಲ್, 75* ರನ್, 91 ಬಾಲ್, 7 ಬೌಂಡರಿ, 1 ಸಿಕ್ಸ್) ಮೂಲಕ ತಂಡವನ್ನ ಗೆಲುವಿನ ದಡ ಸೇರಿಸಿ ತಂಡದ ಆಪತ್ಭಾಂಧವ ಎನಿಸಿದರು.
ಪ್ರಮುಖವಾಗಿ ಕನ್ನಡಿಗ ಕೆಎಲ್ ರಾಹುಲ್, 5ನೇ ಕ್ರಮಾಂಕದಲ್ಲಿ ಮತ್ತೆ ತಮ್ಮ ಸಾಮರ್ಥ್ಯ ಪ್ರದರ್ಶಿಸಿದರು. ವಿಶೇಷವಾಗಿ ತಮ್ಮ ಇನ್ನಿಂಗ್ಸ್‌ನಲ್ಲಿ ನಾಯಕ ಹಾರ್ದಿಕ್ ಪಾಂಡ್ಯ ಹಾಗೂ ರವೀಂದ್ರ ಜಡೇಜಾ ಅವರುಗಳ ಜೊತೆಗೆ ಮಹತ್ವದ ಜೊತೆಯಾಟವಾಡಿದ ರಾಹುಲ್, 3 ಪಂದ್ಯಗಳ ODI ಸರಣಿಯಲ್ಲಿ ಭಾರತಕ್ಕೆ 1-0 ಮುನ್ನಡೆ ತಂದುಕೊಟ್ಟರು.
ಈ ಹಿಂದೆಯೂ ಹಲವು ಪಂದ್ಯಗಳಲ್ಲಿ 5ನೇ ಕ್ರಮಾಂಕದಲ್ಲಿ ಆಡಿರುವ ರಾಹುಲ್, ಉತ್ತಮ ಪ್ರದರ್ಶನ ನೀಡಿದ್ದಾರೆ. ಏಕದಿನ ಕ್ರಿಕೆಟ್‌ನಲ್ಲಿ ಈವರೆಗೆ 5ನೇ ಕ್ರಮಾಂಕದಲ್ಲಿ 17 ಇನ್ನಿಂಗ್ಸ್ ಆಡಿರುವ ರಾಹುಲ್, 56.38ರ ಬ್ಯಾಟಿಂಗ್ ಸರಾಸರಿಯಲ್ಲಿ 733 ರನ್ ಕಲೆಹಾಕಿದ್ದಾರೆ. ರಾಹುಲ್ ಅವರ ಈ ಪ್ರದರ್ಶನದಲ್ಲಿ ಒಟ್ಟು 7 ಅರ್ಧಶತಕಗಳು ಸಹ ಒಳಗೊಂಡಿದೆ.
KL Rahul : Kannadiga KL Rahul shined again at number 5