ಐತಿಹಾಸಿಕ ಗೆಲುವಿನ ರೂವಾರಿ ರಾಹುಲ್ ಗೆ ಪಂದ್ಯ ಶ್ರೇಷ್ಠ KL Rahul saaksha tv
ದಕ್ಷಿಣ ಆಫ್ರಿಕಾದ ಸೆಂಚುರಿಯನ್ ನಲ್ಲಿ ಟೀಂ ಇಂಡಿಯಾ ಸೂಪರ್ ಗೆಲುವು ದಾಖಲಿಸಿದೆ.
ದಕ್ಷಿಣ ಆಫ್ರಿಕಾ ವಿರುದ್ಧದ ಬಾಕ್ಸಿಂಗ್ ಡೇ ಟೆಸ್ಟ್ ಪಂದ್ಯದಲ್ಲಿ ಕೊಹ್ಲಿ ಸೇನೆ 113 ರನ್ ಗಳ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಶತಕ ಸಿಡಿಸಿ ಮಿಂಚಿದ ಕನ್ನಡಿಗ, ಟೀಂ ಇಂಡಿಯಾದ ಉಪನಾಯಕ ಕೆ.ಎಲ್.ರಾಹುಲ್ ಅವರಿಗೆ ಪಂದ್ಯ ಶ್ರೇಷ್ಠ ಪ್ರಶಸ್ತಿ ದೊರಕಿದೆ.
ಟಾಸ್ ಗೆದ್ದ ಕೊಹ್ಲಿ ಮೊದಲು ಬ್ಯಾಟಿಂಗ್ ಆಯ್ದುಕೊಂಡರು. ನಾಯಕನ ನಿರ್ಧಾರ ಸಮರ್ಥಿಸಿಕೊಳ್ಳುವಂತೆ ಬ್ಯಾಟ್ ಬೀಸಿದ ಉಪನಾಯಕ ಕೆ.ಎಲ್.ರಾಹುಲ್, ಮಯಾಂಕ್ ಜೊತೆ ಕೂಡಿ ಭದ್ರ ಬುನಾದಿ ಹಾಕಿದರು.
ದಕ್ಷಿಣ ಆಫ್ರಿಕಾ ಬೌಲರ್ ಗಳನ್ನು ಕಾಡಿದ ಈ ಜೋಡಿ ಮೊದಲ ವಿಕೆಟ್ ಗೆ ಐತಿಹಾಸಿಕ ಶತಕದ ಜೊತೆಯಾಡಿತು.
ಅಲ್ಲದೇ ಇಬ್ಬರು ಅರ್ಧಶತಕ ಸಿಡಿಸಿ ಮಿಂಚಿದರು. ಈ ವೇಳೆ 60 ರನ್ ಗಳಿಸಿದ್ದ ಮಯಾಂಕ್ ಔಟ್ ಆದರು.
ಆ ಬಳಿಕ ಮತ್ತಷ್ಟು ಜವಾಬ್ದಾರಿಯಾಗಿ ಬ್ಯಾಟ್ ಬೀಸಿದ ರಾಹುಲ್ ಶತಕ ಸಿಡಿಸಿ ಮಿಂಚಿದರು.
ರಾಹುಲ್ ಮೊದಲ ಇನ್ನಿಂಗ್ಸ್ ನಲ್ಲಿ 123 ರನ್ ಗಳಿಸಿದರು. ದ್ವಿತೀಯ ಇನ್ನಿಂಗ್ಸ್ ನಲ್ಲಿ 23 ರನ್ ಗಳಿಸಿ ಔಟ್ ಆದರು.