K L Rahul | ರಾಹುಲ್ ಹೆಲಿಕ್ಯಾಪ್ಟರ್ ಶಾಟ್.. ವಿಡಿಯೋ ವೈರಲ್
ಆಸ್ಟ್ರೇಲಿಯಾ ವಿರುದ್ಧ ನಡೆದ ವಾರ್ಮ್ ಅಪ್ ಮ್ಯಾಚ್ ನಲ್ಲಿ ಟೀಂ ಇಂಡಿಯಾ ಆರು ರನ್ ಗಳಿಂದ ಗೆಲುವು ಸಾಧಿಸಿದೆ.
ಈ ಪಂದ್ಯದಲ್ಲಿ ಟೀಂ ಇಂಡಿಯಾದ ಬ್ಯಾಟರ್ ಕೆ.ಎಲ್.ರಾಹುಲ್ ಅದ್ಭುತವಾದ ಇನ್ನಿಂಗ್ಸ್ ಆಡಿದರು.
ಕೇವಲ 33 ಎಸೆತಗಳನ್ನು ಎದುರಿಸಿದ ರಾಹುಲ್ ಆರು ಬೌಂಡರಿ, ಮೂರು ಸಿಕ್ಸರ್ ಗಳೊಂದಿಗೆ 57 ರನ್ ಗಳಿಸಿದರು.

ಈ ಮ್ಯಾಚ್ ನಲ್ಲಿ ರಾಹುಲ್, ಧೋನಿಯನ್ನ ನೆನಪಿಸುತ್ತಾ ಅದ್ಭುತವಾದ ಹೆಲಿಕ್ಯಾಪ್ಟರ್ ಶಾಟ್ ಆಡಿದರು.
ಭಾರತ ಇನ್ನಿಂಗ್ಸ್ ನ ಐದನೇ ಓವರ್ ನಲ್ಲಿ ಕಮ್ಮಿನ್ಸ್ ಬೌಲಿಂಗ್ ನಲ್ಲಿ ರಾಹುಲ್ ಹೆಲಿಕ್ಯಾಪ್ಟರ್ ಶಾಟ್ ಆಡಿದರು.
ಇದಕ್ಕೆ ಸಂಬಂಧಿಸಿದ ವಿಡಿಯೋ ಸೋಶಿಯಲ್ ಮಿಡಿಯಾದಲ್ಲಿ ವೈರಲ್ ಆಗುತ್ತಿದೆ.