Viratkohli Advice- ವಿರಾಟ್ ಸಲಹೆ.. ರಾಹುಲ್ ಮಿಂಚು
ಟಿ 20 ವರ್ಲ್ಡ್ ಕಪ್ 2022 ಗ್ರೂಪ್ 2ರ ಭಾಗವಾಗಿ ಬಾಂಗ್ಲಾದೇಶ ವಿರುದ್ಧ ನಡೆದ ಪಂದ್ಯದಲ್ಲಿ ಟೀಂ ಇಂಡಿಯಾ ಐದು ರನ್ ಗಳಿಂದ ಗೆಲುವು ಸಾಧಿಸಿದೆ.
ಇದರೊಂದಿಗೆ ಟೀಂ ಇಂಡಿಯಾದ ಸೆಮೀಸ್ ಹಾದಿ ಸುಗಮವಾಗದಂತೆ ಕಾಣುತ್ತಿದೆ.
ಕೊನೆಯ ನಿಮಿಷದವರೆಗೂ ಸಾಕಷ್ಟು ರೋಚಕವಾಗಿದ್ದ ಪಂದ್ಯದಲ್ಲಿ ಕೊನೆಯ ಎಸೆತದಲ್ಲಿ ಟೀಂ ಇಂಡಿಯಾ ಜಯ ಸಾಧಿಸಿದೆ.
ಈ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್ ಮಾಡಿದ ಟೀಂ ಇಂಡಿಯಾ ಪರ ಆರಂಭಿಕ ಕೆ.ಎಲ್ ರಾಹುಲ್ 32 ಎಸೆತಗಳಲ್ಲಿ 50 ರನ್, ವಿರಾಟ್ ಕೊಹ್ಲಿ 44 ಎಸೆತಗಳಲ್ಲಿ 64 ರನ್ ಗಳಿಸಿ ಮಿಂಚಿದ್ರೆ ಬೌಲಿಂಗ್ ನಲ್ಲಿ ಟೀಂ ಇಂಡಿಯಾ ವೇಗಿಗಳ ಸಾಂಘೀಕ ಪ್ರದರ್ಶನದಿಂದ ಭಾರತ ಗೆಲುವು ಕಂಡಿತು.
ಈ ನಡುವೆ ಈ ಮ್ಯಾಚ್ ನಲ್ಲಿ ಮಿಂಚಿನ ಅರ್ಧಶತಕದೊಂದಿಗೆ ಮಿಂಚಿದ ಕೆ.ಎಲ್.ರಾಹುಲ್ ಗೆ ಸಂಬಂಧಿಸಿದ ಒಂದು ವಿಷಯ ಸದ್ಯ ಸೋಶಿಯಲ್ ಮೀಡಿಯಾದಲ್ಲಿ ಹಾಟ್ ಟಾಪಿಕ್ ಆಗಿದೆ.
ಈ ಮ್ಯಾಚ್ ಗೂ ಮೊದಲು ಕೆ.ಎಲ್.ರಾಹುಲ್ ಒತ್ತಡದಲ್ಲಿ ಇದ್ದದ್ದು ಎಲ್ಲರಿಗೂ ಗೊತ್ತಿರುವ ವಿಚಾರವೇ, ಹೀಗಾಗಿ ಈ ಒತ್ತಡವನ್ನು ನಿಭಾಯಿಸುವ ಬಗ್ಗೆ ರಾಹುಲ್ ಕಿಂಗ್ ಕೊಹ್ಲಿ ಬಳಿ ಸಲಹೆಗಳನ್ನು ಪಡೆದುಕೊಂಡಿದ್ದಾರೆ.
ಪ್ರಾಕ್ಟೀಸ್ ಸೆಷನ್ ವೇಳೆ ರಾಹುಲ್ – ವಿರಾಟ್ ಕೊಹ್ಲಿ ಜೊತೆ ಸುದೀರ್ಘ ಚರ್ಚೆಯಲ್ಲಿ ಇದ್ದದ್ದು ಕ್ಯಾಮೆರಾಗಳು ಸೆರೆ ಹಿಡಿದಿವೆ.
ಬ್ಯಾಕ್ ಟು ಬ್ಯಾಕ್ ವೈಫಲ್ಯ ಅನುಭವಿಸುತ್ತಿದ್ದ ರಾಹುಲ್, ಕೊಹ್ಲಿ ಬಳಿ ಸಲಹೆಗಳನ್ನು ತೆಗೆದುಕೊಳ್ಳುತ್ತಿದ್ದ ಫೋಟೋಗಳು ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ.
ಕೊಹ್ಲಿ ಮತ್ತು ರಾಹುಲ್ ಸುಮಾರು 20 ನಿಮಿಷಗಳ ಕಾಲ ಮಾತನಾಡಿಕೊಂಡಿದ್ದು, ನಂತರ ರಾಹುಲ್ ಬ್ಯಾಟಿಂಗ್ ಪ್ರಾಕ್ಟೀಸ್ ಗೆ ಹೋದರು.
ಆಗ ವಿರಾಟ್ ಅಲ್ಲಿಗೂ ಹೋಗಿ ಫುಟ್ ವರ್ಕ್ ಬಗ್ಗೆ ಸಲಹೆಗಳನ್ನು ನೀಡಿದರು. ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ಟ್ರೆಂಡಿಂಗ್ ಆಗಿದೆ.
ಕೊಹ್ಲಿ ಸಲಹೆ ನೀಡಿದ, ರಾಹುಲ್ ಫಾರ್ಮ್ ಗೆ ಬಂದ ಎಂದು ಕ್ರಿಕೆಟ್ ಅಭಿಮಾನಿಗಳು ಸೋಶಿಯಲ್ ಮೀಡಿಯಾದಲ್ಲಿ ಕಮೆಂಟ್ ಗಳನ್ನು ಮಾಡುತ್ತಿದ್ದಾರೆ.
ಒಟ್ಟಾರೆ ಬಾಂಗ್ಲಾ ವಿರುದ್ಧದ ಪಂದ್ಯದಲ್ಲಿ ಕೆ.ಎಲ್.ರಾಹುಲ್ ತಮ್ಮ ನೈಜ ಆಟಕ್ಕೆ ಮರಳಿದ್ದು, ಟೀಂ ಇಂಡಿಯಾಗೆ ಖುಷಿಯ ಸಂಗತಿಯಾಗಿದೆ.