ಟಿ-20 ವಿಶ್ವಕಪ್ | ಅಸಲಿಯಾಟ ಆರಂಭಕ್ಕೂ ಮುನ್ನ ಎಲ್ಲೆಲ್ಲೂ `ರಾಹುಲ್ ನಾಮಸ್ಮರಣೆ’
ಬೆಂಗಳೂರು : ಇಷ್ಟು ದಿನ ವಾರ್ಮ್ ಅಪ್ ಮ್ಯಾಚ್.. ಅರ್ಹತಾ ಸುತ್ತಿನ ಪಂದ್ಯ ಎಂದು ಟ್ರೈಲರ್ ನೋಡಿದ್ದ ಕ್ರಿಕೆಟ್ ಅಭಿಮಾನಿಗಳಿಗೆ ಅಕ್ಟೋಬರ್ 24 ರಿಂದ ಆರಂಭವಾಗುವ ಕ್ರಿಕೆಟ್ ಮದಗಜಗಳ ಕಾಳಗ ಅಸಲಿ ಕಿಕ್ ನೀಡಲಿದೆ.
ಈ ಮಧ್ಯೆ ಕನ್ನಡಿಗ ಕೆ.ಎಲ್.ರಾಹುಲ್ ಹವಾ ಜೋರಾಗಿದೆ. ಎಲ್ಲೆಲ್ಲೂ ಟೀಂ ಇಂಡಿಯಾದ ರಾಕಿಂಗ್ ಸ್ಟಾರ್ ಕೆ.ಎಲ್.ರಾಹುಲ್ ನಾಮಸ್ಮರಣೆಯಾಗುತ್ತಿದೆ. ಕ್ರಿಕೆಟ್ ಲೋಕದ ದಿಗ್ಗಜರು ಕನ್ನಡಿಗನನ್ನು ಹಾಡಿಹೊಗಳುತ್ತಿದ್ದಾರೆ.
ಅಲ್ಲದೇ ಈ ಬಾರಿ ಟಿ-20 ವಿಶ್ವಕಪ್ ಟೂರ್ನಿಯಲ್ಲಿ ಕೆ.ಎಲ್ ಎದುರಾಳಿ ತಂಡಗಳಿಗೆ ದುಸ್ವಪ್ನವಾಗಲಿದ್ದಾರೆ ಎಂದು ಅಭಿಪ್ರಾಯಪಡುತ್ತಿದ್ದಾರೆ.
ಅದರಲ್ಲೂ ಆಸ್ಟ್ರೇಲಿಯಾದ ಮಾಜಿ ಕ್ರಿಕೆಟಿಗ ಬ್ರೆಟ್ ಲೀ ಕೆ.ಎಲ್. ರಾಹುಲ್ ಟೂರ್ನಿಯಲ್ಲಿ ಹೆಚ್ಚು ರನ್ ಗಳಿಸಬಹುದು ಎಂದಿದ್ದಾರೆ.
ಇನ್ನೊಬ್ಬ ಆಸೀಸ್ ಮಾಜಿ ಆಟಗಾರ ಮ್ಯಾಥ್ಯೂ ಹೇಡನ್ ಕೂಡ ರಾಹುಲ್ ಬ್ಯಾಟಿಂಗ್ ಗೆ ಮಾರು ಹೋಗಿದ್ದು, ಪಾಕಿಸ್ತಾನ ಸೇರಿದಂತೆ ಎಲ್ಲಾ ತಂಡಗಳಿಗೆ ಕೆ.ಎಲ್.ರಾಹುಲ್ ಸವಾಲ್ ಆಗಲಿದ್ದಾರೆ ಎಂದಿದ್ದಾರೆ.
ಒಟ್ಟಾರೆ ಸದ್ಯ ಕೆ.ಎಲ್ ರಾಹುಲ್ ರೆಡ್ ಹಾರ್ಸ್ ಫಾರ್ಮ್ ನಲ್ಲಿದ್ದು, ಎದುರಾಳಿ ಬೌಲರ್ ಗಳ ಬೆವರಿಳಿಸುತ್ತಿದ್ದಾರೆ.
ಇತ್ತೀಚಿಗೆ ನಡೆದ ಐಪಿಎಲ್ ನಲ್ಲಿ ಅಬ್ಬರಿಸಿದ್ದ ಕೆ.ಎಲ್. ವಿಶ್ವಕಪ್ ವಾರ್ಮ್ ಪಂದ್ಯಗಳಲ್ಲೂ ಘರ್ಜಿಸಿದ್ದರು.