ಕೆಎಂಎಫ್ ಸಂಸ್ಥೆಯ ಆಡಳಿತ ಮಂಡಳಿಗೆ ವಿರುದ್ದ ನೌಕರರು ಮತ್ತು ಅಧಿಕಾರಿಗಳು ಪ್ರಾರಂಭಿಸಿರುವ ಸಮರ ಇದೀಗ ತೀವ್ರಗೊಂಡಿದೆ. ನೌಕರರು, ಏಳನೇ ವೇತನ ಆಯೋಗದ ಶಿಫಾರಸಿನ ಪ್ರಕಾರ ವೇತನ ಹೆಚ್ಚಳ ಮಾಡುವಂತೆ ಕಂಪನಿಯನ್ನು ಒತ್ತಾಯಿಸಿದ್ದಾರೆ. ಆದ್ರೆ ಕೆಎಂಎಫ್ ಆಡಳಿತ ಮಂಡಳಿ, ಈಗಿನ ಆರ್ಥಿಕ ಹೊರೆ ಕಾರಣವನ್ನು ಉಲ್ಲೇಖಿಸಿ ಈ ಬೇಡಿಕೆಯನ್ನು ಪರಿಗಣಿಸಿಲ್ಲ.
ನೌಕರರ ಬೇಡಿಕೆಗೆ ಸ್ಪಂದನೆ ನೀಡದೆ ನಿರ್ಲಕ್ಷ್ಯ ತೋರಿಸಿರುವ ಕಾರಣ, ಸಿಬ್ಬಂದಿ ಮತ್ತು ಅಧಿಕಾರಿಗಳು ಈ ವಿಷಯವನ್ನು ಗಂಭೀರವಾಗಿ ತೆಗೆದುಕೊಂಡಿದ್ದಾರೆ. ಇವರ ಬೇಡಿಕೆಯನ್ನು ಪಾಲಿಸದ ಹಿನ್ನಲೆಯಲ್ಲಿ, ಅವರು ಹಾಲು ಮತ್ತು ಮೊಸರಿನ ಪೂರೈಕೆಯನ್ನು ಸ್ಥಗಿತಗೊಳಿಸುವ ಮೂಲಕ ಮುಷ್ಕರ ನಡೆಸಲು ನಿರ್ಧರಿಸಿದ್ದಾರೆ.
ಫೆಬ್ರವರಿ 1ರಿಂದ ಮುಷ್ಕರ:
ಮುಷ್ಕರವು ಫೆಬ್ರವರಿ 1ರಿಂದ ಆರಂಭವಾಗಲಿದ್ದು, ಆ ದಿನದಿಂದ ನಂದಿನಿ ಹಾಲು ಮತ್ತು ಮೊಸರು ರಾಜ್ಯಾದ್ಯಂತ ಲಭ್ಯವಾಗೋದು ಡೌಟ್. ಇದು ಹಾಲು ಪೂರೈಕೆ ಮೇಲೆ ದೊಡ್ಡ ಪರಿಣಾಮ ಬೀರುವ ಸಾಧ್ಯತೆಯಿದೆ. ಈ ಬಿಕ್ಕಟ್ಟಿನಿಂದ ದೈನಂದಿನ ಹಾಲು ಬಳಕೆಯಾಗಿ ಕುಟುಂಬಗಳಿಗೆ ತೊಂದರೆ ಉಂಟಾಗುವ ಸಾಧ್ಯತೆ ಇದೆ. ನಂದಿನಿ ಹಾಲು ಹಾಗೂ ಮೊಸರನ್ನು ನಂಬಿಕೊಂಡಿರುವ ಲಕ್ಷಾಂತರ ಗ್ರಾಹಕರು ಸಮಸ್ಯೆ ಅನುಭವಿಸಬೇಕಾದ ಪರಿಸ್ಥಿತಿ ನಿರ್ಮಾಣವಾಗಬಹುದು.
ಮುಷ್ಕರದ ಅವಧಿ:
ಮುಷ್ಕರ ಎಷ್ಟು ದಿನ ಮುಂದುವರಿಯುತ್ತದೆ ಎಂಬುದರ ಬಗ್ಗೆ ಈವರೆಗೆ ಸ್ಪಷ್ಟತೆಯಿಲ್ಲ. ನೌಕರರು ಮತ್ತು ಆಡಳಿತ ಮಂಡಳಿಯ ನಡುವೆ ಏನಾದರೂ ಮಾತುಕತೆಯ ಮೂಲಕ ಬಿಕ್ಕಟ್ಟು ಪರಿಹಾರವಾಗುವ ನಿರೀಕ್ಷೆ ಇದೆ.
ಮುಷ್ಕರದಿಂದಾಗಿ ನಂದಿನಿ ಹಾಲು ಮತ್ತು ಮೊಸರಿನ ಲಭ್ಯತೆಯ ಮೇಲೆ ಹೊಡೆತ ಬೀಳುವ ಸಾಧ್ಯತೆ ಇರುವುದರಿಂದ ಗ್ರಾಹಕರು, ಹಾಲು ಮತ್ತು ಮೊಸರಿನ ಅಗತ್ಯಗಳನ್ನು ಪೂರೈಸಿಕೊಳ್ಳಲು ಪರ್ಯಾಯ ವ್ಯವಸ್ಥೆ ಮಾಡಿಕೊಳ್ಳುವುದು ಸೂಕ್ತ.








