ಕೊರೋನಾ ಮೂರನೇ ಅಲೆ – ಮಕ್ಕಳಲ್ಲಿ ಕಾಣಿಸುವ ರೋಗಲಕ್ಷಣಗಳು

1 min read
Corona virus in children

ಕೊರೋನಾ ಮೂರನೇ ಅಲೆ – ಮಕ್ಕಳಲ್ಲಿ ಕಾಣಿಸುವ ರೋಗಲಕ್ಷಣಗಳು

ದೇಶದಲ್ಲಿ ತೀವ್ರವಾಗಿ ಹರಡಿದ್ದ ಕೊರೋನಾ ವೈರಸ್‌ನ ಎರಡನೇ ಅಲೆಯು ಇದೀಗ ನಿಯಂತ್ರಣಕ್ಕೆ ಬರುತ್ತಿದೆ. ಈ ನಡುವೆ ಎರಡನೇ ಅಲೆಯಿಂದ ಲಕ್ಷಾಂತರ ಜನರು ಸೋಂಕಿಗೆ ಒಳಗಾಗಿದ್ದರು ಮತ್ತು, ಸಾವಿರಾರು ಜನರು ತಮ್ಮ ಪ್ರಾಣವನ್ನು ಕಳೆದುಕೊಂಡಿದ್ದರು.
ಈಗ ಪರಿಸ್ಥಿತಿ ಬಹುತೇಕ ಸಾಮಾನ್ಯವಾಗಿದ್ದು, ಲಾಕ್‌ಡೌನ್ ಅನ್ನು ದೇಶಾದ್ಯಂತ ಸಡಿಲಿಕೆ ಮಾಡಲಾಗುತ್ತಿದೆ. ಆದರೆ ನೆನಪಿಡಬೇಕಾದ ವಿಷಯವೆಂದರೆ ಕೊರೋನಾ ಇನ್ನೂ ಸಂಪೂರ್ಣವಾಗಿ ತೊಲಗಿಲ್ಲ. ಈಗಾಗಲೇ ಕೊರೋನದ ಮೂರನೇ ತರಂಗದ ಬಗ್ಗೆ ವೈದ್ಯರು ವಿಜ್ಞಾನಿಗಳು ಎಚ್ಚರಿಸಿದ್ದಾರೆ.
Saakshatv healthtips covid19 children

ಮುಂಬರುವ ಕೊರೋನಾ ಅಲೆಯು ಮಕ್ಕಳಿಗೆ ಹೆಚ್ಚು ಅಪಾಯಕಾರಿ ಎಂದು ನಂಬಲಾಗಿದೆ. ಅಂತಹ ಪರಿಸ್ಥಿತಿಯಲ್ಲಿ, ಕೊರೋನದ ಮೂರನೇ ಅಲೆಯಿಂದ ಮಕ್ಕಳನ್ನು ಹೇಗೆ ಸುರಕ್ಷಿತವಾಗಿರಿಸಿಕೊಳ್ಳಬೇಕು ಎಂಬುದನ್ನು ಅರ್ಥಮಾಡಿಕೊಳ್ಳುವುದು ಬಹಳ ಮುಖ್ಯ. ಆದ್ದರಿಂದ ಮಗು ಕೊರೋನಾ ಸೋಂಕಿತವಾಗಿದೆಯೇ ಅಥವಾ ಇಲ್ಲವೇ ಎಂಬುದನ್ನು ಅರ್ಥಮಾಡಿಕೊಳ್ಳಲು ಕೆಲವು ರೋಗಲಕ್ಷಣಗಳ ಬಗ್ಗೆ ತಿಳಿಯೋಣ.

8 ವರ್ಷಕ್ಕಿಂತ ಮೇಲ್ಪಟ್ಟ ಮಕ್ಕಳಿಗೆ ರುಚಿ ಅಥವಾ ವಾಸನೆ ಗೊತ್ತಾಗದೆ ಇರಬಹುದು
ಜ್ವರ
ಸುಸ್ತು
ದೇಹದಲ್ಲಿ ದೌರ್ಬಲ್ಯ
ಅತಿಸಾರ
ಉಸಿರಾಟದ ತೊಂದರೆ
ವಾಂತಿ
ಶೀತ
ತಲೆನೋವು
ಇಷ್ಟು ಮಾತ್ರವಲ್ಲ, ಮಕ್ಕಳಲ್ಲಿ ಮಲ್ಟಿಸಿಸ್ಟಮ್ ಇನ್ಫ್ಲಮೇಟರಿ ಸಿಂಡ್ರೋಮ್ ಕೂಡ ಕಾಣಿಸಿಕೊಳ್ಳಬಹುದು. ಇದರಲ್ಲಿ ಕುತ್ತಿಗೆ ನೋವು, ಜ್ವರ, ಕೆಂಪು ಕಣ್ಣು, ವಾಂತಿ ಅಥವಾ ಅತಿಸಾರ, ಒಡೆದ ತುಟಿ ಇತ್ಯಾದಿ ಲಕ್ಷಣಗಳು ಕಾಣಿಸಿಕೊಂಡ ಕೂಡಲೇ ಎಚ್ಚರಿಕೆ ‌ವಹಿಸಬೇಕು.

ಅಂತಹ ರೋಗಲಕ್ಷಣಗಳು ಮಕ್ಕಳಲ್ಲಿ ಕಂಡುಬಂದರೆ, ಮಕ್ಕಳೊಂದಿಗೆ ಮನೆಯ ಇತರ ಸದಸ್ಯರು ಸಹ ತಮ್ಮನ್ನು ಪರೀಕ್ಷಿಸಿಕೊಳ್ಳಬೇಕು. ಜೊತೆಗೆ, ವರದಿ ಬರುವವರೆಗೆ ಎಲ್ಲರೂ ಬೇರೆ ಬೇರೆ ಕೋಣೆಗಳಲ್ಲಿ ಪ್ರತ್ಯೇಕವಾಗಿರಬೇಕು. ಮಕ್ಕಳಿಗೆ ಮಾಸ್ಕ್ ಇತ್ಯಾದಿಗಳನ್ನು ಧರಿಸಲು ಹೇಳಬೇಕು.
wearing masks

ಎಚ್ಚರಿಕೆ – ದೇಶದಲ್ಲಿ ಕೊರೋನಾ ಸೋಂಕಿನ ಹಾವಳಿ ಕಡಿಮೆಯಾಗಿದ್ದರೂ ಸಂಪೂರ್ಣವಾಗಿ ನಿಂತಿಲ್ಲ. ಆದ್ದರಿಂದ ಪ್ರತಿಯೊಬ್ಬರೂ ಕಡ್ಡಾಯವಾಗಿ ಮಾಸ್ಕ್ ಧರಿಸಿ, ಸಾಮಾಜಿಕ ಅಂತರ ಕಾಯ್ದುಕೊಳ್ಳಿ ಮತ್ತು ಕೊರೋನಾ ಮುನ್ನೆಚ್ಚರಿಕೆ ಕ್ರಮಗಳನ್ನು ಪಾಲಿಸಿ. ಜೊತೆಗೆ ವ್ಯಾಕ್ಸಿನೇಷನ್‌ ಪಡೆಯುವುದನ್ನು ಮರೆಯದಿರಿ. ಇದು ‌ಸಾಕ್ಷಾಟಿವಿ ಕಳಕಳಿ.

#coronainfection

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd