ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಸಲಾಗಿದೆ ಎಂದು ತಿಳಿಯಲು ಬಯಸುವಿರಾ? ಇಲ್ಲಿದೆ ಮಾಹಿತಿ
ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಿದೆಯೇ ಎಂದು ಚಿಂತಿಸುತ್ತಿದ್ದೀರಾ? ನಿಮ್ಮ ಆಧಾರ್ ಕಾರ್ಡ್ ಈ ಮೊದಲು ಎಷ್ಟು ಬಾರಿ ಬಳಸಲಾಗಿದೆ ಎಂದು ತಿಳಿಯಲು ನೀವು ಬಯಸುವಿರಾ? ನಿಮ್ಮ ಉತ್ತರ ಹೌದು ಎಂದಾದರೆ, ಯುಐಡಿಎಐ ವೆಬ್‌ಸೈಟ್‌ನಲ್ಲಿ ಹೋಸ್ಟ್ ಮಾಡಲಾದ ಆಧಾರ್ ದೃಢೀಕರಣ ಹಿಸ್ಟರಿ ಸರ್ವೀಸ್ ಮೂಲಕ, ನೀವು ಈ ಮೊದಲು ಎಷ್ಟು ಬಾರಿ ಬಳಸಿದ್ದೀರಿ ಎಂಬುದನ್ನು ಕಂಡುಹಿಡಿಯಬಹುದು.
ಯಾವುದೇ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆ / ವಿಐಡಿ ಬಳಸಿ ಮತ್ತು ವೆಬ್‌ಸೈಟ್‌ನಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಯುಐಡಿಎಐ ವೆಬ್‌ಸೈಟ್‌ನಿಂದ ಅವರ ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸಬಹುದು.
ಈ ಸೇವೆಯನ್ನು ಪಡೆಯಲು, ನೋಂದಾಯಿತ ಮೊಬೈಲ್ ಸಂಖ್ಯೆ ಇರುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಕಳೆದ 6 ತಿಂಗಳಲ್ಲಿ ಮಾಡಿದ ಎಲ್ಲಾ ದೃಢೀಕರಣ ದಾಖಲೆಗಳ ವಿವರಗಳನ್ನು ವೀಕ್ಷಿಸಬಹುದು. ಆದಾಗ್ಯೂ, ಒಂದು ಸಮಯದಲ್ಲಿ ಗರಿಷ್ಠ 50 ದಾಖಲೆಗಳನ್ನು ವೀಕ್ಷಿಸಬಹುದು.
ಆಧಾರ್ ದೃಢೀಕರಣ ಇತಿಹಾಸದಲ್ಲಿ ಈ ಕೆಳಗಿನ ಮಾಹಿತಿಯನ್ನು ಪಡೆಯಬಹುದು.
ದೃಢೀಕರಣ ವಿಧಾನ
ದೃಢೀಕರಣದ ದಿನಾಂಕ ಮತ್ತು ಸಮಯ.
ಯುಐಡಿಎಐ ರೆಸ್ಪಾನ್ಸ್ ಕೋಡ್
AUA ಹೆಸರು
AUA ಟ್ರಾನ್ಸ್ಆಕ್ಷನ್ ಐಡಿ (ಕೋಡ್‌ನೊಂದಿಗೆ)
ದೃಢೀಕರಣ ರೆಸ್ಪಾನ್ಸ್ (success / failure)
UIDAI ಎರರ್ ಕೋಡ್
ನಿಮ್ಮ ಆಧಾರ್ ಕಾರ್ಡ್ ಅನ್ನು ಹೇಗೆ ಮತ್ತು ಯಾವಾಗ ಬಳಸಲಾಗಿದೆ ಎಂದು ಹೇಗೆ ತಿಳಿಯುವುದು?
ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸುವ ಪ್ರಕ್ರಿಯೆ.
ಹಂತ 1: UIDAI ನ ಅಧಿಕೃತ ವೆಬ್‌ಸೈಟ್ಗೆ (uidai.gov.in ) ಭೇಟಿ ಕೊಡಿ
ಹಂತ 2: ನನ್ನ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3: ನನ್ನ ಆಧಾರ್ ಡ್ರಾಪ್‌ಡೌನ್‌ನಲ್ಲಿ ಆಧಾರ್ ಸೇವೆಗಳನ್ನು ಪರಿಶೀಲಿಸಿ. ಅಲ್ಲಿ ನೀವು ‘ಆಧಾರ್ ದೃಢೀಕರಣ ಇತಿಹಾಸ’ ಅನ್ನು ಕಾಣಬಹುದು
ಹಂತ 4: ಈಗ, ‘ಆಧಾರ್ ದೃಢೀಕರಣ ಇತಿಹಾಸ’ ಕ್ಲಿಕ್ ಮಾಡಿ.
ಹಂತ 5: ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ.
ಹಂತ 6: ಈಗ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಆ ಒಟಿಪಿಯನ್ನು ನಮೂದಿಸಿ.
ಹಂತ 7: ಇಲ್ಲಿ ನೀವು ಪರಿಶೀಲನೆ ಮಾಡಬೇಕಾದ ದಿನಾಂಕ ಆಯ್ಕೆ ಮಾಡಿ
ಹಂತ 8: ನಂತರ ಆಧಾರ್ ಬಳಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಲ್ಲಿಸಿ.
ಇಲ್ಲಿ ನೀವು ಗರಿಷ್ಠ ಕಳೆದ 6 ತಿಂಗಳಲ್ಲಿ ಬಳಸಿದ ಮಾಹಿತಿ ಮತ್ತು ಗರಿಷ್ಠ 50 ಮಾಹಿತಿಯನ್ನು ಮಾತ್ರ ಪಡೆಯಬಹುದು. ಹಂತ 9: ಈಗ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರಿಗೆ ಬಂದಿರುವ ಒಟಿಪಿಯನ್ನು ನಮೂದಿಸಿ
ಹಂತ 10: ಈಗ ‘ಸಬ್ಮಿಟ್’ ಬಟನ್ ಕ್ಲಿಕ್ ಮಾಡಿರಿ.
ಹಂತ 11: ಈಗ ಪರದೆಯಲ್ಲಿ ಆಧಾರ್ ಕಾರ್ಡ್ ಯಾವಾಗ ಬಳಸಲಾಗಿದೆ ಎಂಬ ಮಾಹಿತಿ ಬರುತ್ತದೆ.
ಹಂತ 12: ಈ ಮಾಹಿತಿಯನ್ನು ಪರಿಶೀಲನೆ ಮಾಡಿ. ನಿಮಗೆ ತಿಳಿಯದ ಕಡೆ ನಿಮ್ಮ ಆಧಾರ್ ಮಾಹಿತಿ ಇದ್ದರೆ ನೀವು ಪೊಲೀಸರಿಗೆ ಈ ಬಗ್ಗೆ ದೂರು ನೀಡಬಹುದು
ಬಿಳಿ ರಕ್ತ ಕಣಗಳನ್ನು ಹೆಚ್ಚಿಸುವ ನೈಸರ್ಗಿಕ ಆಹಾರಗಳು https://t.co/JshI31kFR4
— Saaksha TV (@SaakshaTv) February 24, 2021
ಮಗುವಿಗೆ/ನವಜಾತ ಶಿಶುವಿಗೆ ಆಧಾರ್ ಕಾರ್ಡ್ ನೋಂದಣಿ ಮಾಡಲು ಈ ಹಂತಗಳನ್ನು ಅನುಸರಿಸಿ https://t.co/DQLtIpEZl0
— Saaksha TV (@SaakshaTv) February 24, 2021
ಕಡಲೆಕಾಯಿ/ನೆಲಗಡಲೆ/ಶೇಂಗಾ ಚಿಕ್ಕಿ ಮಾಡುವ ಸುಲಭ ವಿಧಾನ https://t.co/4XKj4biGrS
— Saaksha TV (@SaakshaTv) February 22, 2021