ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಸಲಾಗಿದೆ ಎಂದು ತಿಳಿಯಲು ಬಯಸುವಿರಾ? ಇಲ್ಲಿದೆ ಮಾಹಿತಿ

1 min read
Aadhaar PVC card

ನಿಮ್ಮ ಆಧಾರ್ ಕಾರ್ಡ್ ಎಲ್ಲೆಲ್ಲಿ ಬಳಸಲಾಗಿದೆ ಎಂದು ತಿಳಿಯಲು ಬಯಸುವಿರಾ? ಇಲ್ಲಿದೆ ಮಾಹಿತಿ

ನಿಮ್ಮ ಆಧಾರ್ ಕಾರ್ಡ್ ದುರುಪಯೋಗವಾಗಿದೆಯೇ ಎಂದು ಚಿಂತಿಸುತ್ತಿದ್ದೀರಾ? ನಿಮ್ಮ ಆಧಾರ್ ಕಾರ್ಡ್ ಈ ಮೊದಲು ಎಷ್ಟು ಬಾರಿ ಬಳಸಲಾಗಿದೆ ಎಂದು ತಿಳಿಯಲು ನೀವು ಬಯಸುವಿರಾ? ನಿಮ್ಮ ಉತ್ತರ ಹೌದು ಎಂದಾದರೆ, ಯುಐಡಿಎಐ ವೆಬ್‌ಸೈಟ್‌ನಲ್ಲಿ ಹೋಸ್ಟ್ ಮಾಡಲಾದ ಆಧಾರ್ ದೃಢೀಕರಣ ಹಿಸ್ಟರಿ ಸರ್ವೀಸ್ ಮೂಲಕ, ನೀವು ಈ ಮೊದಲು ಎಷ್ಟು ಬಾರಿ ಬಳಸಿದ್ದೀರಿ ಎಂಬುದನ್ನು ಕಂಡುಹಿಡಿಯಬಹುದು.

ಯಾವುದೇ ಆಧಾರ್ ಕಾರ್ಡ್ ಹೊಂದಿರುವವರು ತಮ್ಮ ಆಧಾರ್ ಸಂಖ್ಯೆ / ವಿಐಡಿ ಬಳಸಿ ಮತ್ತು ವೆಬ್‌ಸೈಟ್‌ನಲ್ಲಿ ನೀಡಿರುವ ಮಾರ್ಗಸೂಚಿಗಳನ್ನು ಅನುಸರಿಸಿ ಯುಐಡಿಎಐ ವೆಬ್‌ಸೈಟ್‌ನಿಂದ ಅವರ ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸಬಹುದು.

ಈ ಸೇವೆಯನ್ನು ಪಡೆಯಲು, ನೋಂದಾಯಿತ ಮೊಬೈಲ್ ಸಂಖ್ಯೆ ಇರುವುದು ಕಡ್ಡಾಯವಾಗಿದೆ. ಆಧಾರ್ ಕಾರ್ಡ್ ಹೊಂದಿರುವವರು ಕಳೆದ 6 ತಿಂಗಳಲ್ಲಿ ಮಾಡಿದ ಎಲ್ಲಾ ದೃಢೀಕರಣ ದಾಖಲೆಗಳ ವಿವರಗಳನ್ನು ವೀಕ್ಷಿಸಬಹುದು. ಆದಾಗ್ಯೂ, ಒಂದು ಸಮಯದಲ್ಲಿ ಗರಿಷ್ಠ 50 ದಾಖಲೆಗಳನ್ನು ವೀಕ್ಷಿಸಬಹುದು.

ಆಧಾರ್ ದೃಢೀಕರಣ ಇತಿಹಾಸದಲ್ಲಿ ಈ ಕೆಳಗಿನ ಮಾಹಿತಿಯನ್ನು ಪಡೆಯಬಹುದು.

ದೃಢೀಕರಣ ವಿಧಾನ
ದೃಢೀಕರಣದ ದಿನಾಂಕ ಮತ್ತು ಸಮಯ.
ಯುಐಡಿಎಐ ರೆಸ್ಪಾನ್ಸ್ ಕೋಡ್
AUA ಹೆಸರು
AUA ಟ್ರಾನ್ಸ್ಆಕ್ಷನ್ ಐಡಿ (ಕೋಡ್‌ನೊಂದಿಗೆ)
ದೃಢೀಕರಣ ರೆಸ್ಪಾನ್ಸ್ (success / failure)
UIDAI ಎರರ್ ಕೋಡ್
Aadhaar change address new PVC Aadhaar card Aadhaar card genuine fake Update information Aadhaar Cards Beware Government warns people
ನಿಮ್ಮ ಆಧಾರ್ ಕಾರ್ಡ್ ಅನ್ನು ಹೇಗೆ ಮತ್ತು ಯಾವಾಗ ಬಳಸಲಾಗಿದೆ ಎಂದು ಹೇಗೆ ತಿಳಿಯುವುದು?

ಆಧಾರ್ ದೃಢೀಕರಣ ಇತಿಹಾಸವನ್ನು ಪರಿಶೀಲಿಸುವ ಪ್ರಕ್ರಿಯೆ.

ಹಂತ 1: UIDAI ನ ಅಧಿಕೃತ ವೆಬ್‌ಸೈಟ್ಗೆ‌ (uidai.gov.in ) ಭೇಟಿ ಕೊಡಿ
ಹಂತ 2: ನನ್ನ ಆಧಾರ್ ಆಯ್ಕೆಯನ್ನು ಕ್ಲಿಕ್ ಮಾಡಿ
ಹಂತ 3: ನನ್ನ ಆಧಾರ್ ಡ್ರಾಪ್‌ಡೌನ್‌ನಲ್ಲಿ ಆಧಾರ್ ಸೇವೆಗಳನ್ನು ಪರಿಶೀಲಿಸಿ. ಅಲ್ಲಿ ನೀವು ‘ಆಧಾರ್ ದೃಢೀಕರಣ ಇತಿಹಾಸ’ ಅನ್ನು ಕಾಣಬಹುದು
ಹಂತ 4: ಈಗ, ‘ಆಧಾರ್ ದೃಢೀಕರಣ ಇತಿಹಾಸ’ ಕ್ಲಿಕ್ ಮಾಡಿ.
ಹಂತ 5: ನಿಮ್ಮ 12 ಅಂಕಿಯ ಆಧಾರ್ ಸಂಖ್ಯೆ ಮತ್ತು ಭದ್ರತಾ ಕೋಡ್ ಅನ್ನು ನಮೂದಿಸಿ.
ಹಂತ 6: ಈಗ, ನಿಮ್ಮ ನೋಂದಾಯಿತ ಮೊಬೈಲ್ ಸಂಖ್ಯೆಗೆ ಒಟಿಪಿ ಕಳುಹಿಸಲಾಗುತ್ತದೆ. ಆ ಒಟಿಪಿಯನ್ನು ನಮೂದಿಸಿ.
ಹಂತ 7: ಇಲ್ಲಿ ನೀವು ಪರಿಶೀಲನೆ ಮಾಡಬೇಕಾದ ದಿನಾಂಕ ಆಯ್ಕೆ ಮಾಡಿ
ಹಂತ 8: ನಂತರ ಆಧಾರ್ ಬಳಕೆಗೆ ಸಂಬಂಧಿಸಿದ ಎಲ್ಲಾ ಮಾಹಿತಿಯನ್ನು ಸಲ್ಲಿಸಿ.
ಇಲ್ಲಿ ನೀವು ಗರಿಷ್ಠ ಕಳೆದ 6 ತಿಂಗಳಲ್ಲಿ ಬಳಸಿದ ಮಾಹಿತಿ ಮತ್ತು ಗರಿಷ್ಠ 50 ಮಾಹಿತಿಯನ್ನು ಮಾತ್ರ ಪಡೆಯಬಹುದು. ಹಂತ 9: ಈಗ ನಿಮ್ಮ ರಿಜಿಸ್ಟರ್ ಮೊಬೈಲ್ ನಂಬರಿಗೆ ಬಂದಿರುವ ಒಟಿಪಿಯನ್ನು ನಮೂದಿಸಿ
ಹಂತ 10: ಈಗ ‘ಸಬ್ಮಿಟ್’ ಬಟನ್ ಕ್ಲಿಕ್ ಮಾಡಿರಿ.
ಹಂತ 11: ಈಗ ಪರದೆಯಲ್ಲಿ ಆಧಾರ್ ಕಾರ್ಡ್ ಯಾವಾಗ ಬಳಸಲಾಗಿದೆ ಎಂಬ ಮಾಹಿತಿ ಬರುತ್ತದೆ. ‌
ಹಂತ 12: ಈ ಮಾಹಿತಿಯನ್ನು ಪರಿಶೀಲನೆ ಮಾಡಿ. ನಿಮಗೆ ತಿಳಿಯದ ಕಡೆ ನಿಮ್ಮ ಆಧಾರ್ ಮಾಹಿತಿ ಇದ್ದರೆ ನೀವು ಪೊಲೀಸರಿಗೆ ಈ ಬಗ್ಗೆ ದೂರು ನೀಡಬಹುದು

 

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd