ಏ.3 ರಿಂದ ಕೊಡಗು ಚಾಂಪಿಯನ್ಸ್ ಲೀಗ್ ಆರಂಭ
ಕೊಡಗು : ಏಪ್ರಿಲ್ 03 ರಿಂದ ಕೊಡಗು ಚಾಂಪಿಯನ್ಸ್ ಲೀಗ್ ನ ಐದನೇ ಆವೃತ್ತಿಯ ಪಂದ್ಯಾವಳಿ ಆರಂಭವಾಗಲಿದೆ.
ಸಿದ್ದಾಪುರದ ಸಿಟಿ ಬಾಯ್ಸ್ ಯುವಕ ಸಂಘ ಕಳೆದ ನಾಲ್ಕು ವರ್ಷಗಳಿಂದ ಕೊಡಗು ಚಾಂಪಿಯನ್ಸ್ ಲೀಗ್ ಎಂಬ ಐ.ಪಿ.ಎಲ್ ಮಾದರಿಯ ಪಂದ್ಯಾಟವನ್ನು ನಡೆಸಿಕೊಂಡು ಬರುತ್ತಿದೆ.
ಈ ಟೂರ್ನಿಯಲ್ಲಿ ಕ್ರಿಯೇಟಿವ್ ಕ್ರಿಕೆಟರ್ಸ್ ಮಡಿಕೇರಿ, ರಾಯಲ್ಸ್ ವಿರಾಜಪೇಟೆ, ಟೀಂ ಕೊಂಬನ್ ಸಿದ್ದಾಪುರ, ಥೋಮಸ್, ಕೂಲ್ ಸಿದ್ದಾಪುರ, ರಾಂಬೋ ಕ್ರಿಕೆಟರ್ಸ್ ನೆಲ್ಯಹುದಿಕೇರಿ,
ಸ್ಫೋಟ್ರ್ಸ್ ವೋಲ್ಡ್ ಮಡಿಕೇರಿ, ಡಾಟ್ ಡೊಮಿನೇಟರ್ಸ್ ದುಬಾರೆ, ರೆಡ್ ಬ್ಯಾಕ್ ಸ್ಪೈಡರ್ಸ್ ಮಡಿಕೇರಿ, ಎಕೆ ಫ್ರೆಂಡ್ಸ್ ಹುಂಡಿ , ವೈ.ಬಿ.ಸಿ ನೆಲ್ಯಹುದಿಕೇರಿ,
ನ್ಯೂ ಕೂರ್ಗ್ ಸ್ಟಾರ್ ನಲ್ವತ್ತೇಕ್ರೆ, ಫ್ರೆಂಡ್ಸ್ ಕ್ರಿಕೆಟರ್ಸ್ ನೆಲ್ಯಹುದಿಕೇರಿ ತಂಡಗಳು ಪಾಲ್ಗೊಳ್ಳುತ್ತಿದೆ.