ಧೈರ್ಯಂ ಸರ್ವತ್ರ ಸಾಧನಂ ಎಂದು ತೋರಿಸಿದ ನಾಗರ
ಕೊಡಗು : ಈಗಿನ ಯುವ ಜನತೆ ಸಣ್ಣ ಸಣ್ಣ ಕಷ್ಟಗಳಿಗೂ ಹೆದರುತ್ತಾರೆ. ಕಷ್ಟಕ್ಕೆ ಹೆದರಿ ಓಡಿ ಹೋಗುವವರೇ ಹೆಚ್ಚಿರುತ್ತಾರೆ. ಆದ್ರೆ ಪ್ರಾಣಿಗಳು ಆಗಿರುವುದಿಲ್ಲ. ಎಂತಹದ್ದೆ ತೊಂದರೆ ಬರಲಿ ಎದುರು ನಿಂತು ಹೋರಾಡುತ್ತವೆ.
ಈ ಹೋರಾಟದಲ್ಲಿ ಸೋಲು – ಗೆಲುವನ್ನ ಪಕ್ಕಕ್ಕೆ ಇಟ್ಟರೇ ಕೊನೆಪಕ್ಷ ಅವು ಪ್ರತಿರೋಧನವನ್ನಾದರೂ ತೋರಿಸುತ್ತವೆ.

ಇದಕ್ಕೆ ತಾಜಾ ಉದಾಹರಣೆ ಕುಶಾಲನಗರ ತಾಲೂಕಿನ ಹಕ್ಕೇ ಗ್ರಾಮದಲ್ಲಿ ನಡೆದಿದೆ. ನಾಯಿಗಳ ಗುಂಪೊಂದು ಹಾವನ್ನು ಕಂಡು ಮುಗ್ಗಿಬಿದ್ದಿವೆ.
ಈ ವೇಳೆ ನಾಗರ ಹೆಡೆಬಿಚ್ಚಿ ಶ್ವಾನದ ಗುಂಪನ್ನು ಎದುರಿಸಿದೆ. ನಾಗರನ ಧೈರ್ಯಕ್ಕೆ ಬೆಚ್ಚಿ ಬಿದ್ದ ನಾಯಿಗಳು ಹಿಂದಕ್ಕೆ ಸರಿದಿವೆ.
ಸದ್ಯ ಈ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗುತ್ತಿದೆ. kodagu-The cobra scolded the pack of dogs saaksha tv