ಮಡಿಕೇರಿ: ಗೋಹತ್ಯೆ ಹತ್ಯೆ ನಿಷೇಧ ಕಾಯ್ದೆ ವಿರುದ್ಧ ಮಾತನಾಡುವ ವೇಳೆ ಮುಸ್ಲಿಮರು, ಕ್ರೈಸ್ತರಂತೆ ಕೊಡವರು ಗೋವು ಮಾಂಸ ಸೇವನೆ ಮಾಡುತ್ತಾರೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆಂದು ಆರೋಪ ಕೇಳಿ ಬಂದಿದೆ.
ಸಿದ್ದರಾಮಯ್ಯ ನೀಡಿದ್ದಾರೆನ್ನಲಾದ ಹೇಳಿಕೆಗೆ ಕೊಡಗು ಜಿಲ್ಲೆಯಲ್ಲಿ ತೀವ್ರ ಆಕ್ರೋಶ ವ್ಯಕ್ತವಾಗಿದೆ. ಪತ್ರಿಕೆಯೊಂದರಲ್ಲಿ ಗೋಹತ್ಯೆ ಮಸೂದೆ ಕುರಿತು ಸಿದ್ದರಾಮಯ್ಯ ಬಗ್ಗೆ ಪ್ರಕಟವಾದ ಸುದ್ದಿಯಲ್ಲಿ ಮುಸ್ಲಿಮರು, ದಲಿತರು, ಕ್ರೈಸ್ತರು ಒಳಗೊಂಡಂತೆ ಕೊಡವರು ಸಹ ಬೀಫ್ ತಿನ್ನುತ್ತಾರೆ ಎಂದು ವರದಿಯಾಗಿದೆ.
ಗೋವನ್ನು ದೈವಿ ಭಕ್ತಿಯಿಂದ ಕಾಣುವವರಾದ ಕೊಡವರ ಸ್ವಾಭಿಮಾಕ್ಕೆ ಧಕ್ಕೆ ತರುವಂತೆ ಸಿದ್ದರಾಮಯ್ಯ ಮಾತನಾಡಿದ್ದಾರೆ. ಹೇಳಿಕೆಯನ್ನು ಹಿಂಪಡೆದು, ಕೊಡವರ ಕ್ಷಮೆಯಾಚಿಸಬೇಕು ಎಂದು ಬಿಜೆಪಿ ಮತ್ತು ಜೆಡಿಎಸ್ ಆಗ್ರಹಿಸಿವೆ.
ಈ ಸಂಬಂಧ ಸೋಮವಾರ ಜಿಲ್ಲಾಧಿಕಾರಿ ಕಛೇರಿ ಎದುರು, ಬಿಜೆಪಿ ಪ್ರತಿಭಟನೆಗೆ ಕರೆ ನೀಡಿದ್ದು, ಕೊಡವ ಸಮಾಜ ವತಿಯಿಂದ ಭಹಿರಂಗ ಕ್ಷಮೆಯಾಚಿಸಬೇಕು ಎಂದು ಒತ್ತಾಯಿಸಿದ್ದಾರೆ.
ಕೊಡವರಿಗೆ ನೋವಾಗಿದ್ದರೆ ವಿಷಾಧಿಸುತ್ತೇನೆ-ಸಿದ್ದು
ಕೊಡವರೂ ಬೀಫ್ ತಿನ್ನುತ್ತಾರೆ ಎಂಬ ನನ್ನ ಹೇಳಿಕೆ ತಪ್ಪು ಗ್ರಹಿಕೆಯಿಂದ ಮಾಧ್ಯಮಗಳಲ್ಲಿ ವರದಿಯಾಗಿದೆ. ಇದರಿಂದ ಕೊಡವ ಸಮುದಾಯಕ್ಕೆ ನೋವಾಗಿದ್ದರೆ ಈ ಬಗ್ಗೆ ನಾನು ವಿಷಾಧಿಸುತ್ತೇನೆ. ನನ್ನ ನೆರೆಯ ಜಿಲ್ಲೆಯಾದ ಕೊಡಗಿನ ಸಂಸ್ಕøತಿ ಬಗ್ಗೆ ನನಗೆ ಅರಿವಿದೆ. ವಿಶೇಷವಾದ ಗೌರವವೂ ಇದೆ ಎಂದು ಸಿದ್ದರಾಮಯ್ಯ ಟ್ವಿಟರ್ನಲ್ಲಿ ವಿಷಾಧ ವ್ಯಕ್ತಪಡಿಸಿದ್ದಾರೆ.

ಮೈಸೂರಿನಲ್ಲಿ ನಡೆದ ಕಾರ್ಯಕ್ರದಲ್ಲಿ ಬೀಫ್ ಕುರಿತು ನೀಡಿದ್ದ ಹೇಳಿಕೆ ವಿರುದ್ಧ ಕೊಡಗು ಜಿಲ್ಲೆಯ ಕೊಡವ ಸಮುದಾಯದಿಂದ ಆಕ್ರೋಶ ವ್ಯಕ್ತವಾಗಿತ್ತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel








