ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ : ಕೋಡಿಮಠ ಶ್ರೀ ಭವಿಷ್ಯ
ಕೋಲಾರ : ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ ಆಗಲಿದೆ ಎಂದು ಕೋಡಿಮಠದ ಡಾ ಶಿವಾನಂದ ಶಿವಯೋಗಿ ಸ್ವಾಮೀಜಿ ಭವಿಷ್ಯ ನುಡಿದ್ದಾರೆ.
ಕೋಲಾರದಲ್ಲಿ ಸುದ್ದಿಗಾರರೊಂದಿಗೆ ಮಾನತಾಡಿದ ಅವರು, ಕೆರೆ ಕಟ್ಟೆಗಳು ತುಂಬಿ ಜಲಗಂಡಾಂತರ ಇನ್ನೂ ಇದೆ.
ನೂತನ ಮುಖ್ಯಮಂತ್ರಿ ಕುರಿತು ಏನನ್ನೂ ಈಗಲೇ ಹೇಳುವುದಿಲ್ಲ. ಕಾರ್ತಿಕ ಮಾಸ ಕಳೆದ ನಂತರ ಹೇಳುತ್ತೇನೆ.
ಸಂಕ್ರಾಂತಿ ಒಳಗೆ ರಾಷ್ಟ್ರಮಟ್ಟದಲ್ಲಿ ದೊಡ್ಡ ಅವಘಡ ಆಗಲಿದೆ ಎಂದು ಹೇಳಿದರು.
ಇದೇ ವೇಳೆ ಸದ್ಯ ರಾಜಕೀಯ ಬೆಳವಣಿಗೆಗಳ ಬಗ್ಗೆ ಮಾತನಾಡಿ, ನಾವು ಯಡಿಯೂರಪ್ಪ ಅವರನ್ನು ಉಳಿಸಿ ಅಂತ ಹೇಳಲಿಲ್ಲ.
ಬದಲಾಗಿ ಸ್ವಾಮೀಜಿಗಳು ಬೀದಿಗೆ ಬಂದಾಗ, ಕೆಂದ್ರದ ನಾಯಕರು ಬಂದು ಗುರುಗಳಿಗೆ ಆಶ್ವಾಸನೆ ಕೊಡಬಹುದಿತ್ತು.
ಆದರೆ ಮಠಾಧೀಶರಿಗೆ ಅಗೌರವ ತೋರಿದ್ದಾರೆ. ಮಠಾಧೀಶರು, ನಾಯಕರು ಬೀದಿಗೆ ಬಂದು ಹೋರಾಟ ಮಾಡಿದ್ದರು.
ಆದರೆ ಮಠಾಧೀಶರನ್ನು ನಡೆಸಿಕೊಂಡಿರುವ ರೀತಿ ಸರಿಯಿಲ್ಲ ಎಂದು ಬೇಸರ ವ್ಯಕ್ತಪಡಿಸಿದರು.