ಗದಗ: ಕೋಡಿಮಠದ ಸ್ವಾಮೀಜಿ ಭಯಾನಕ ಭವಿಷ್ಯ ನುಡಿದಿದ್ದಾರೆ. ಈ ವರ್ಷದಲ್ಲಿ ಜಗತ್ತಿಗೆ ಉತ್ತಮ ದಿನಗಳಿಲ್ಲ. ಈ ವರ್ಷ ಅಣು ಬಾಂಬ್ ಸ್ಪೋಟಗೊಳ್ಳುವ ಸಾಧ್ಯತೆ ಇದೆ. ಅಲ್ಲದೇ, ಯುದ್ಧದ ಭೀತಿ ಇದೆ ಎಂದು ಹೇಳಿದ್ದಾರೆ.
ಇಲ್ಲಿನ ಭಕ್ತರ ಮನೆಯೊಂದಕ್ಕೆ ತೆರಳಿದ ಸಂದರ್ಭದಲ್ಲಿ ಮಾತನಾಡಿದ ಅವರು, ಅತೀ ದೊಡ್ಡ ಸಂತರೊಬ್ಬರು ಕೊಲೆಯಾಗಬಹುದು. ಒಂದೆರಡು ಪ್ರಧಾನಿಗಳ ಸಾವು ಆಗಲಿವೆ. ಅಸ್ಥಿರತೆ ಇದೆ, ಯುದ್ಧದ ಭೀತಿ ಇದೆ. ಅಣುಬಾಂಬ್ ಸ್ಪೋಟದಿಂದ ಹಾನಿಯಾಗುವ ಸಾಧ್ಯತೆ ಇದೆ. ರೋಗ ರುಜಿನಗಳು ಹೆಚ್ಚಾಗಲಿವೆ ಎಂದು ಹೇಳಿದ್ದಾರೆ.
ಹಿಂದೂಗಳು ಒಂದಾದರೆ ಒಳ್ಳೆಯದಾಗುತ್ತದೆ. ಭಾರತೀಯರು ಒಗ್ಗಟ್ಟಾದರೆ ಎಲ್ಲರಿಗೂ ಒಳ್ಳೆಯದಾಗುತ್ತದೆ ಎಂದು ಹೇಳಿದ್ದಾರೆ.