ಮಾಜಿ ಮಹಿಳಾ ಕ್ರಿಕೆಟರ್ ತಾಯಿಯ ಚಿಕಿತ್ಸೆಗೆ ವಿರಾಟ್ ಸಹಾಯ
ಬೆಂಗಳೂರು : ಕೊರೊನಾ ಸಂಕಷ್ಟದಲ್ಲಿರುವ ಅನೇಕ ಮಂದಿಗೆ ಟೀಂ ಇಂಡಿಯಾದ ನಾಯಕ ವಿರಾಟ್ ಕೊಹ್ಲಿ ತಮ್ಮ ಕೈಯಲ್ಲಾದ ಸಹಾಯ ಮಾಡುತ್ತಿದ್ದಾರೆ.
ಅದರಂತೆ ಇದೀಗ ಮಾಜಿ ಮಹಿಳಾ ಕ್ರಿಕೆಟರ್ ಒಬ್ಬರ ತಾಯಿಯ ಚಿಕಿತ್ಸೆಗೆ ವಿರಾಟ್ ಸಹಾಯ ಅಸ್ತ ಚಾಚಿದ್ದಾರೆ.
ಹೌದು..! ಭಾರತ ಮಹಿಳಾ ತಂಡದ ಪರ ಒಂದು ಟೆಸ್ಟ್, 4 ಏಕದಿನ ಮತ್ತು 6 ಟಿ20 ಪಂದ್ಯಗಳನ್ನಾಡಿರುವ ಕೆಎಸ್ ಶ್ರಾವಂತಿ ನಾಯ್ಡು ಅವರ ತಾಯಿ ಎಸ್ ಕೆ ಸುಮನ್ ಅವರು ಕೊರೊನಾ ಸೋಂನಿಂದ ಬಳಲುತ್ತಿದ್ದರು.
ಈ ಹಿನ್ನೆಲೆಯಲ್ಲಿ ಶ್ರಾವಂತಿ ಅವರು, ಸಹಾಯ ಮಾಡುವಂತೆ ಬಿಸಿಸಿಐ ಮತ್ತು ಹೈದರಾಬಾದ್ ಕ್ರಿಕೆಟ್ ಸಂಸ್ಥೆಯನ್ನು ಮನವಿ ಮಾಡಿದ್ದರು.
ಇದಕ್ಕೆ ಸ್ಪಂದಿಸಿದ್ದ ವಿರಾಟ್ ಕೊಹ್ಲಿ ಶ್ರಾವಂತಿ ಅವರ ತಾಯಿಯ ಚಿಕಿತ್ಸೆಗಾಗಿ 6.77 ಲಕ್ಷ ರೂ. ಧನಸಹಾಯ ಮಾಡಿದ್ದಾರೆ.
ಅಂದಹಾಗೆ ವಿರಾಟ್ ಕೊಹ್ಲಿ ಮತ್ತು ಪತ್ನಿ ಅನುಷ್ಕಾ ಶರ್ಮಾ ದಂಪತಿ ಭಾರತದಲ್ಲಿ ಕೊರೊನಾ ವೈರಸ್ ವಿರುದ್ಧದ ಹೋರಾಟ ಸಲುವಾಗಿ ದತ್ತಿ ಸಂಗ್ರಹ ಮಾಡುತ್ತಿದ್ದಾರೆ.