ಆಫ್ರಿಕಾ ಏಕದಿನ ಟೂರ್ನಿಯಿಂದ ` ವಿರಾಟ್’ ಔಟ್.. kohli saaksha tv
ದಕ್ಷಿಣ ಆಪ್ರಿಕಾ ವಿರುದ್ಧ ನಡೆಯಲಿರುವ ಏಕದಿನ ಸರಣಿಯಿಂದ ಕಿಂಗ್ ವಿರಾಟ್ ಕೊಹ್ಲಿ, ಹೊರಗುಳಿದಿದ್ದಾರೆ. ದಕ್ಷಿಣ ಆಫ್ರಿಕಾ ಪ್ರವಾಸಕ್ಕೂ ಮುನ್ನ ಬಿಸಿಸಿಐ ರೋಹಿತ್ ಶರ್ಮಾಗೆ ಏಕದಿನ ನಾಯಕತ್ವದ ಜವಾಬ್ದಾರಿ ವಹಿಸಿದ್ದು, ಟೀಂ ಇಂಡಿಯಾ ಏಕದಿನ ನಾಯಕತ್ವದಿಂದ ಕೊಹ್ಲಿಯನ್ನು ಕೈಬಿಟ್ಟಿದೆ. ಟಿ20 ವಿಶ್ವಕಪ್ ಬಳಿಕ ಟಿ20 ನಾಯಕತ್ವದಿಂದ ಕೆಳಗಿಳಿದಿರುವ ಕೊಹ್ಲಿ, ಏಕದಿನ ಹಾಗೂ ಟೆಸ್ಟ್ ಪಂದ್ಯಗಳಿಗೆ ನಾಯಕತ್ವವನ್ನು ಮುಂದುವರಿಸುವುದಾಗಿ ಹೇಳಿದ್ದರು.
ಆದ್ರೆ ಬಿಸಿಸಿಐ ವಿರಾಟ್ ಆಸೆಗೆ ನೀರೆರಚಿ ರೋಹಿತ್ ಗೆ ಸೀಮಿತ ಓವರ್ ಗಳ ನಾಯಕತ್ವವನ್ನು ವಹಿಸಿತ್ತು. ಬಿಸಿಸಿಐ ನಿರ್ಧಾರದಿಂದ ಬೇಸರಗೊಂಡಿರುವ ವಿರಾಟ್ ಕೊಹ್ಲಿ ಆಫ್ರಿಕಾ ನೆಲದಲ್ಲಿ ನಡೆಯಲಿರುವ ಏಕದಿನ ಸರಣಿಯಿಂದ ದೂರ ಉಳಿಯಲು ಬಯಸಿದ್ದಾರೆ ಎಂದು ವರದಿಯಾಗಿದೆ.
ಆದರೇ ಜನವರಿಯಲ್ಲಿ ತನ್ನ ಮಗಳ ಬರ್ತ್ ಡೇ ಇರುವುದರಿಂದ ವಿರಾಟ್, ತಮ್ಮ ಕುಟುಂಬದೊಂದಿಗೆ ಫ್ಯಾಮಿಲಿ ಟ್ರಿಪ್ ಪ್ಲಾನ್ ಮಾಡಿಕೊಂಡಿದ್ದಾರಂತೆ.
ಜನವರಿ 19 ರಿಂದ ಆಫ್ರಿಕಾ ವಿರುದ್ಧ ಏಕದಿನ ಸರಣಿ ಆರಂಭವಾಗಲಿದೆ. ಅದೇ ಸಮಯದಲ್ಲಿ, ವಿರಾಟ್ ತನ್ನ ಮಗಳ ಬರ್ತ್ ಡೇ ನಿಮಿತ್ತವಾಗಿ ಸರಣಿಯಿಂದ ಹೊರಗುಳಿಯಲಿದ್ದಾರೆ ಎಂದು ಹೇಳಲಾಗುತ್ತಿದೆ. ಅದಲ್ಲದೇ ಈ ವಿಚಾರವಾಗಿ ವಿರಾಟ್ ಕೊಹ್ಲಿ ಬಿಸಿಸಿಐಗೆ ತಿಳಿಸಿದ್ದು, ಆಫ್ರಿಕಾ ವಿರುದ್ಧ ಸರಣಿಯಲ್ಲಿ ತಮ್ಮನ್ನು ಪರಿಗಣಿಸಬೇಡಿ ಎಂದು ಮನವಿ ಮಾಡಿಕೊಂಡಿದ್ದಾರೆ.
ಇನ್ನು ಈ ವಿಚಾರವಾಗಿ ಸೋಶಿಯಲ್ ಮೀಡಿಯಾದಲ್ಲಿ ಭಾರಿ ಚರ್ಚೆ ಶುರುವಾಗಿದೆ. ಯಾಕಂದರೇ ಇಂಜೂರಿ ಸಮಸ್ಯೆಯಿಂದ ಟೆಸ್ಟ್ ಸರಣಿಗೆ ರೋಹಿತ್ ಶರ್ಮಾ ಅಲಭ್ಯರಾಗಿದ್ದಾರೆ. ಇದೀಗ ವಿರಾಟ್ ಕೊಹ್ಲಿ ಏಕದಿನ ಸರಣಿಯಿಂದ ದೂರ ಉಳಿದಿರೋದು ಚರ್ಚೆಗೆ ಗ್ರಾಸವಾಗಿದೆ.