Kohli- Rohit : ವಿರಾಟ್ – ರೋಹಿತ್ ಕ್ಯಾಪ್ಟನ್ಸಿ ಬಗ್ಗೆ ಚೋಪ್ರಾ ಹೇಳಿದ್ದೇನು ?
ಮೈದಾನದಲ್ಲಿ ವಿರಾಟ್ ಕೊಹ್ಲಿ ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಿದ್ದರು, ಆದ್ರೆ ಅವರ ಸಾರಥ್ಯದಲ್ಲಿ ಟೀಂ ಇಂಡಿಯಾ ಆ ರೀತಿ ಕಾಣಿಸಿಕೊಳ್ಳುತ್ತಿರಲಿಲ್ಲ ಎಂದು ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ಟೀಂ ಇಂಡಿಯಾದ ಮಾಜಿ ಆಟಗಾರ ಆಕಾಶ್ ಚೋಪ್ರಾ ಹೇಳಿದ್ದಾರೆ.
ಟೆಸ್ಟ್ ಕ್ರಿಕೆಟ್ ಕ್ಯಾಪ್ಟನ್ಸಿಯಲ್ಲಿ ತನ್ನದೇಯಾದ ಛಾಪು ಮೂಡಿಸಿದ್ದ ಕೊಹ್ಲಿ, ಸೀಮಿತ ಓವರ್ ಗಳ ಕ್ರಿಕೆಟ್ ನಲ್ಲಿ ಮಾತ್ರ ಅದನ್ನು ಮುಂದುವರೆಸಿಲ್ಲ ಎಂದು ವ್ಯಾಖ್ಯಾನಿಸಿದ್ದಾರೆ. ಆದ್ರೆ ರೋಹಿತ್ ಶರ್ಮಾ ಕೊಹ್ಲಿಯಂತೆ ಅಲ್ಲ.. ಆತನ ನೇತೃತ್ವದಲ್ಲಿ ತಂಡ ಆಕ್ರಮಣಕಾರಿ ಆಡುತ್ತಿದೆ ಎಂದಿದ್ದಾರೆ.
ಇದೇ ವೇಳೆ ಟೀಂ ಇಂಡಿಯಾದ ಕ್ಯಾಪ್ಟನ್ ಗಳ ಮಾತನಾಡಿರುವ ಆಕಾಶ್ ಚೋಪ್ರಾ, ಇದು ಮಾಡಲೇಬೇಕು ಅಂತಾ ವಿರಾಟ್ ಭಾವಿಸಿದರೆ, ಅದನ್ನ ಅವರು ಮಾಡಿಯೇ ತೀರುತ್ತಾರೆ. ಮೈದಾನದಲ್ಲಿ ಅತ್ಯಂತ ಆಕ್ರಮಣಕಾರಿಯಾಗಿ ಕಾಣಿಸಿಕೊಳ್ಳುತ್ತಾರೆ.
ಎದುರಾಳಿ ಯಾರೇ ಆಗಿದ್ದರೂ, ಪರಿಸ್ಥಿತಿ ಹೇಗೇ ಇದ್ದರೂ ಹೆಜ್ಜೆ ಹಿಂದೆ ಇಡದೇ ಮುನ್ನುಗ್ಗುತ್ತಾರೆ. ಆದ್ರೆ ಅವರ ನಾಯಕತ್ವದಲ್ಲಿ ತಂಡದ ಸ್ವಭಾವ ಆ ರೀತಿ ಇರುವುದಿಲ್ಲ. ಕೊಹ್ಲಿ ನಾಯಕತ್ವದಲ್ಲಿ ಟೀಂ ಇಂಡಿಯಾ ಆಕ್ರಮಣಕಾರಿಯಾಗಿ ಕಾಣಿಸಿಕೊಂಡಿಲ್ಲ.

ಇನ್ನು ಟೆಸ್ಟ್ ಕ್ರಿಕೆಟ್ ನಲ್ಲಿ ವಿರಾಟ್ ಕೊಹ್ಲಿ ಕ್ಯಾಪ್ಟನ್ಸಿ ಬಗ್ಗೆ ಮಾತನಾಡುತ್ತಾ, ಕೊಹ್ಲಿ ಐವರು ಬೌಲರ್ ಗಳೊಂದಿಗೆ ಮೈದಾನಕ್ಕೆ ಇಳಿಯುತ್ತಿದ್ದರು. ಅವರು ನಿಬಂಧನೆಗಳಿಗೆ ಹೊಸ ನಿರ್ವಚನೆ ಕೊಟ್ಟಿದ್ದಾರೆ.
ಟೆಸ್ಟ್ ನಲ್ಲಿ ಪ್ರತಿಭಾವಂತ ಕ್ಯಾಪ್ಟನ್ ಎನಿಸಿಕೊಂಡಿದ್ದ ವಿರಾಟ್ ಕೊಹ್ಲಿ ಸೀಮಿತ ಓವರ್ ಗಳಲ್ಲಿ ಆಕ್ರಮಣಕಾರಿ ಸಾರಥಿ ಆಗಲೇ ಇಲ್ಲ ಎಂದು ಚೋಪ್ರಾ ಹೇಳಿದ್ದಾರೆ.
ಆದ್ರೆ ರೋಹಿತ್ ಶರ್ಮಾ ಮಾತ್ರ ಕೊಹ್ಲಿಯಂತೆ ಮೈದಾನದಲ್ಲಿ ಇರೋದಿಲ್ಲ. ಅದೇ ಸಮಯದಲ್ಲಿ ತಂಡದಲ್ಲಿ ಆತ್ಮವಿಶ್ವಾಸವನ್ನು ತುಂಬಿ ಅವರಿಗೆ ಧೈರ್ಯ ತುಂಬುತ್ತಾರೆ. ನಾಯಕನ ಬೆಂಬಲದೊಂದಿಗೆ ಆಟಗಾರರು ಉತ್ತಮ ಪ್ರದರ್ಶನ ನೀಡುತ್ತಾರೆ. ವಿರಾಟ್ ಕೊಹ್ಲಿ ನಾಯಕರಾಗಿ ಅತ್ಯಂತ ಅವಿಸ್ಮರಣೀಯ ಗೆಲುವುಗಳನ್ನು ದಾಖಲಿಸಿದ್ದಾರೆ ಎಂದು ಚೋಪ್ರಾ ಹೇಳಿದ್ದಾರೆ.








