Virat Kohli | ನಿಮಿಷಗಳ ಅಂತರದಲ್ಲಿ ಎರಡು ಅದ್ಭುತಗಳು.. that is Virat
ಆಸ್ಟ್ರೇಲಿಯಾ ಜೊತೆ ನಡೆದ ವಾರ್ಮ್ ಅಪ್ ಮ್ಯಾಚ್ ನಲ್ಲಿ ಟೀಂ ಇಂಡಿಯಾದ ರನ್ ಮಿಷನ್ ವಿರಾಟ್ ಕೊಹ್ಲಿ ಸ್ಟನ್ನಿಂಗ್ ಫೀಲ್ಡಿಂಗ್ ಮಾಡಿ ಎಲ್ಲರ ಉಬ್ಬೇರಿಸಿದ್ದಾರೆ.
ಕೊಹ್ಲಿ ಹೊಡೆದ ಡೈರೆಕ್ಟ್ ಥ್ರೋ ಗೆ ಟಿಮ್ ಡೆವಿಡ್ ರನ್ ಔಟ್ ಆದರು. ಆಸೀಸ್ ನ ಇನ್ನಿಂಗ್ಸ್ 19 ನೇ ಓವರ್ ನಲ್ಲಿ ಹರ್ಷಲ್ ಪಟೇಲ್ ಎಸೆದ ಎರಡನೇ ಎಸೆತದಲ್ಲಿ ಜೋಷ್ ಇಂಗ್ಲಿಸ್ ಅನ್ ಸೈಡ್ ಕಡೆ ಆಡಿದರು.
ಆ ಮೂಲಕ ಕ್ವಿಕ್ ಸಿಂಗಲ್ ಗಾಗಿ ಇಂಗ್ಲಿಸ್ ಪ್ರಯತ್ನಿಸಿದ್ದು, ಟಿಮ್ ಡೇವಿಡ್ ಇದಕ್ಕೆ ಸ್ಪಂದಿಸಿದರು.
ಆದ್ರೆ ಅಲ್ಲೇ ಇದ್ದ ಕೊಹ್ಲಿ ತಮ್ಮ ಫಿಲ್ಡಿಂಗ್ ಮ್ಯಾಜಿಕ್ ತೋರಿಸಿಕೊಟ್ಟರು.
ಚಿರತೆಯಂತೆ ಬಂದು ಚೆಂಡನ್ನು ಹಿಡಿದ ವಿರಾಟ್ ಕೊಹ್ಲಿ ಬುಲೆಟ್ ವೇಗದಲ್ಲಿ ಥ್ರೋ ಮಾಡಿದ್ರು.
ಡೇವಿಡ್ ಕ್ರೀಸ್ ಗೆ ಬರೋದಕ್ಕೂ ಮೊದಲೇ ಚೆಂಡು ವಿಕೆಟ್ ಗಳಿಗೆ ತಾಕಿತು.

ಇದರಿಂದ ಡೇವಿಡ್ ರನೌಟ್ ಆಗಿ ಪೆವಿಲಿಯನ್ ಸೇರಿಕೊಂಡರು.
ಇದಕ್ಕೆ ಸಂಬಂಧ ವಿಡಿಯೋ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿದೆ.
ಆ ನಂತರ ಆಸೀಸ್ ನ 20ನೇ ಓವರ್ ನಲ್ಲಿ ವಿರಾಟ್ ಕೊಹ್ಲಿ ಹಿಡಿದ ಸಿಂಗಲ್ ಹ್ಯಾಂಡೆಡ್ ಕ್ಯಾಚ್ ಕೂಡ ಎಲ್ಲರ ಗಮನ ಸೆಳೆಯಿತು.
ಆಸೀಸ್ ಇನ್ನಿಂಗ್ಸ್ ನ ಕೊನೆಯ ಓವರ್ ನಲ್ಲಿ ಫುಲ್ ಟಾಸ್ ಎಸೆತವನ್ನು ಕಮಿನ್ಸ್ ಲಾಂಗಾನ್ ಕಡೆ ಆಡಿದ್ರು.
ಎಲ್ಲರೂ ಅದು ಸಿಕ್ಸರ್ ಎಂದು ಭಾವಿಸಿದ್ರು. ಆದ್ರೆ ವಿರಾಟ್ ಕೊಹ್ಲಿ ಸ್ಪೈಡರ್ ಮ್ಯಾನ್ ನಂತೆ ಕ್ಯಾಚ್ ಹಿಡಿದರು.
ಇದರಿಂದ ಕಮ್ಮಿನ್ಸ್ ಮಾತ್ರವಲ್ಲದೇ ಮೈದಾನದಲ್ಲಿ ನೆರೆದಿದ್ದ ಹಾಗೂ ಟಿವಿಯಲ್ಲಿ ಮ್ಯಾಚ್ ನೋಡುತ್ತಿದ್ದ ಎಲ್ಲರೂ ಅಬ್ಬಾ ಎಂಥಾ ಕ್ಯಾಚ್.. ಅದು ವಿರಾಟ್ ಕೊಹ್ಲಿ ಅಂದ್ರೆ.. ಎಂದು ಹೊಗಳಿದರು.