ಅಹಮದಾಬಾದ್: ಕಿಂಗ್ ಕೊಹ್ಲಿ (Virat Kohli) ಐಪಿಎಲ್ ನಲ್ಲಿ ಮತ್ತೊಂದು ಹೊಸ ಇತಿಹಾಸ ಸೃಷ್ಟಿಸಿದ್ದಾರೆ.
ಐಪಿಎಲ್ ನಲ್ಲಿ 8 ಸಾವಿರ ರನ್ ಪೂರೈಸಿದ ಏಕೈಕ ಆಟಗಾರ ಎಂಬ ದಾಖಲೆಯನ್ನು ವಿರಾಟ್ ಕೊಹ್ಲಿ ತಮ್ಮದಾಗಿಸಿಕೊಂಡಿದ್ದಾರೆ. ವಿರಾಟ್ ಕೊಹ್ಲಿ ಇಲ್ಲಿಯವರೆಗೆ ಐಪಿಎಲ್ ನಲ್ಲಿ 252 ಪಂದ್ಯಗಳನ್ನಾಡಿದ್ದು, ಈ ಪಂದ್ಯಗಳಲ್ಲಿ ಒಟ್ಟು 8 ಸಾವಿರಕ್ಕೂ ಅಧಿಕ ರನ್ ಗಳಿಸಿದ್ದಾರೆ. ಐಪಿಎಲ್ ನಲ್ಲಿ ಕಿಂಗ್ ಕೊಹ್ಲಿ ಒಟ್ಟು 8 ಶತಕ ಮತ್ತು 55 ಅರ್ಧ ಶತಕ ಸಿಡಿಸಿದ್ದಾರೆ.
ಪ್ರಸಕ್ತ ಸಾಲಿನ ಆವೃತ್ತಿಯಲ್ಲಿ ಕೂಡ 15 ಪಂದ್ಯಗಳಿಂದ 741 ರನ್ ಗಳಿಸಿದ್ದಾರೆ. ಇದರಲ್ಲಿ 1 ಶತಕ, 5 ಅರ್ಧ ಶತಕ ಇವೆ. ಅಲ್ಲದೇ, ಈ ಬಾರಿಯ ಆವೃತ್ತಿಯಲ್ಲಿ ಕೂಡ ಅತೀ ಹೆಚ್ಚು ರನ್ ಗಳಿಸಿದ ಆಟಗಾರ ಕೊಹ್ಲಿ ಆಗಿದ್ದಾರೆ. ಆರೆಂಜ್ ಕ್ಯಾಪ್ ಧರಿಸಿದ್ದಾರೆ.
ಪಂಜಾಬ್ ಕಿಂಗ್ಸ್ನ ನಾಯಕ ಶಿಖರ್ ಧವನ್ (Shikar Dhawan) ಅತಿ ಹೆಚ್ಚು ರನ್ ಗಳಿಸಿದ್ದ ಆಟಗಾರರ ಪಟ್ಟಿಯಲ್ಲಿ ಎರಡನೇ ಸ್ಥಾನದಲ್ಲಿದ್ದಾರೆ. ಧವನ್ 222 ಪಂದ್ಯಗಳಿಂದ 6,769 ರನ್ ಗಳಿಸಿದ್ದಾರೆ. ರೋಹಿತ್ ಶರ್ಮಾ (Rohit Sharma) 257 ಪಂದ್ಯಗಳಿಂದ 6,628 ರನ್ ಗಳಿಸಿದ್ದಾರೆ.