Kolar-ಕೋಲಾರ ಜಿಲ್ಲೆಯ ಶ್ರೀನಿವಾಸಪುರ ತಾಲೂಕಿನ ಶೆಟ್ಟಿಹಳ್ಳಿ ಗ್ರಾಮದ 35 ವರ್ಷದ ಲೋಕೇಶ್ ಎಂಬುವ ವ್ಯಕ್ತಿಯೊಬ್ಬ ನಾಲ್ಕನೆಯ ಮಗು ಸಹ ಹೆಣ್ಣು ಮಗು ಜನಿಸಿರುವುದಕ್ಕೆ ಮನನೊಂದು ಆತ್ಮಹತ್ಯೆ ಮಾಡಿಕೊಂಡ ಘಟನೆ ಬೆಳಕಿಗೆ ಬಂದಿಗೆ.
ಆತ್ಮಹತ್ಯೆ ಮಾಡಿಕೊಂಡಿರುವ ಲೋಕೇಶ್ ಗೆ ಈಗಾಗಲೇ ಮೂರು ಮಕ್ಕಳಿದ್ದು ಮತ್ತೊಂದು ಹೆಣ್ಣು ಮಗುವಿಗೆ ತಂದೆಯಾಗಿದ್ದು ಮನನೊಂದಿದ್ದ ಮೃತ ಲೋಕೇಶ್ ಗಂಡು ಮಗುವಿನ ಆಸೆಗೆ ನಾಲ್ಕನೇ ಮಗು ಮಾಡಿಕೊಂಡಿದ್ದ.
ನಿರೀಕ್ಷೆ ತಪ್ಪಾಗಿ ನಾಲ್ಕನೇ ಮಗುವೂ ಹೆಣ್ಣು ಆಗಿರುವ ಕಾರಣ ಮನೆಯಲ್ಲಿ ಯಾರೂ ಇಲ್ಲದನ್ನು ತಿಳಿದು ತಡರಾತ್ರಿ ಆತ್ಮಹತ್ಯೆ ಮಾಡಿಕೊಂಡಿದ್ದಾನೆ.
ಈ ಹಿಂದೆ ಮೂರನೇ ಮಗು ಜನನವಾದಾಗಲೇ ಆತ್ಮಹತ್ಯೆಗೆ ಪ್ರಯತ್ನ ಪಟ್ಟಿದ್ದ ಆದ್ರೆ ಅದೃಷ್ಟವಶಾತ್ ಮನೆಯವರಿಗೆ ವಿಚಾರ ತಿಳಿದು ಲೋಕೇಶ್ನನ್ನು ಬದುಕಿಸಿದ್ದರು. ಈ ಪ್ರಕರ್ಣ ಶ್ರೀನಿವಾಸಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.