ಇನ್ನಷ್ಟು ಸುಂದರವಾಗಿ ಕಾಣುವ ದುರಾಸೆಗೆ ಬಿದ್ದ ನಟಿ ಈಗ ಹೇಗಾಗಿದ್ದಾರೆ ನೋಡಿ..!
ಚೆನ್ನೈ : ತಾರೆಯರೂ ಅದ್ರಲ್ಲೂ ವಿಶೇಷವಾಗಿ ನಟಿಯರು ಆಗಾಗ ಪ್ಲಾಸ್ಟಿಕ್ ಸರ್ಜರಿ ಬ್ಯೂಟಿ ಥೆರಿಫಿಗಳನ್ನ ಮಾಡಿಸಿಕೊಂಡು ಮತ್ತಷ್ಟು ಸುಂದರವಾಗಿ ಕಾಣುವ ಪ್ರಯತ್ನ ಮಾಡ್ತಾರೆ. ಆದ್ರೆ ಕೆಲವೊಮ್ಮೆ ಅದ್ರಿಂದಾಗಿ ಮುಖವನ್ನ ಹಾಳು ಮಾಡಿಕೊಂಡಿರುವವರನ್ನೂ ನೋಡಿದ್ದೇವೆ.
ಅಂತೆಯೇ ಇತ್ತೀಚೆಗೆ ಕಾಲಿವುಡ್ ನಟಿ ರೈಜಾ ವಿಲ್ಸನ್ ಅವರು ಮುಖದ ಚಿಕಿತ್ಸೆಗಾಗಿ ಚರ್ಮರೋಗ ಚಿಕಿತ್ಸಾಲಯೊಂದಕ್ಕೆ ಭೇಟಿ ನೀಡಿದ್ದಾರಂತೆ. ಅಲ್ಲಿ ಅವರಿಗೆ ಅಗತ್ಯವಿಲ್ಲದ ಚಿಕಿತ್ಸೆಯೊಂದನ್ನು ಮಾಡಿಕೊಳ್ಳಲು ಒತ್ತಾಯಿಸಿದ್ದಾರಂತೆ. ಇದನ್ನ ಮಾಡಿಸಿಕೊಂಡ ನಟಿಯ ಮುಖ ತುಂಬಾನೆ ವಿಕಾರವಾಗಿದ್ದು, ಯಾರೂ ಕೂಡ ಕಂಡುಹಿಡಿಯೋಕೆ ಸಾಧ್ಯವಿಲ್ಲ ಎನ್ನುವಷ್ಟರ ಮಟ್ಟಿಗೆ ಮುಖ ಹಾಳಾಗಿಹೋಗಿದೆ.
ಈ ಬಗ್ಗೆ ನಟಿ ತಮ್ಮ ಇನ್ ಸ್ಟಾಗ್ರಾಂನಲ್ಲಿ ಈ ಆಘಾತಕಾರಿ ಮಾಹಿತಿಯನ್ನ ಬಹಿರಂಗಪಡಿಸಿದ್ದರು. ಜೊತೆಗೆ ಫೋಟೋ ಕೂಡ ಹಂಚಿಕೊಂಡಿದ್ದರು. ಈ ಫೋಟೋ ನೋಡಿ ನೆಟ್ಟಿಗರು ಶಾಕ್ ಆಗಿದ್ದರು. ಅಷ್ಟೇ ಅಲ್ಲದೇ ಇಂತಹ ಚಿಕಿತ್ಸೆ ನೀಡಿದ ವ್ಯಕ್ತಿ ನಟಿಯನ್ನು ಭೇಟಿ ಮಾಡದೆ ತಲೆಮರೆಸಿಕೊಳ್ಳುತ್ತಿದ್ದಾರೆಂದು ಅವರು ಆರೋಪಿಸಿದ್ದಾರೆ.