ಹಾಸ್ಯ ನಟ ಕೋಮಲ್ ಹಾಗೂ ಮಜಾ ಟಾಕೀಸ್ ಖ್ಯಾತಿಯ ರಾಜಶೇಖರ್ ಕಾಂಬಿನೇಷನ್ ನಲ್ಲಿ ಹೊಸ ಸಿನಿಮಾ ಮೂಡಿಬರುತ್ತಿರುವುದು ಹೊಸ ವಿಚಾರವೇನಲ್ಲ. ಆದರೆ ಈ ಸಿನಿಮಾ ಪ್ರಮೋಷನ್ ಇದೀಗ ಎಲ್ಲರ ಗಮನ ಸೆಳೆಯುತ್ತಿದೆ. ಹೌದು ಈ ಸಿನಿಮಾ ಇದೀಗ ಟೈಟಲ್ ವಿಚಾರದಲ್ಲಿ ಸಿಕ್ಕಾಪಟ್ಟೆ ಸದ್ದು ಮಾಡ್ತಿದೆ. ಕೋಮಲ್ ಅವರ ಮುಂದಿನ ಚಿತ್ರದ ಬಗ್ಗೆ ಘಟಾನುಘಟಿ ರಾಜಕಾರಣಿಗಳೇ ಪ್ರಚಾರ ಮಾಡಿದ್ದಾರೆ.
‘ಅಯೋಗ್ಯ’ ಚಿತ್ರದ ನಿರ್ಮಾಪಕ ಟಿಆರ್ ಚಂದ್ರಶೇಖರ್ ಬಂಡವಾಳ ಹೂಡುತ್ತಿರುವ ಈ ಸಿನಿಮಾದ ಬಗ್ಗೆ ಪಿಎಂ ನರೇಂದ್ರ ಮೋದಿ, ಕರ್ನಾಟಕ ಸಿಎಂ ಯಡಿಯೂರಪ್ಪ, ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಎಚ್ಡಿ ಕುಮಾರಸ್ವಾಮಿ ಮಾಹಿತಿ ನೀಡಿದ್ದಾರೆ. ಇದೇನಪ್ಪಾ.. ಇದು ನಿಜಾನಾ.. ಅಂತ ಆಶ್ಚರ್ಯ ಆಗೋದು ಸಹಜ.
ಹೌದು ಕೋಮಲ್ ಮುಂದಿನ ಸಿನಿಮಾ ಹೆಸರನ್ನ ಅಕ್ಟೋಬರ್ 30ರಂದು ಅನಾವರಣ ಮಾಡಲಾಗುವುದು ಎಂದು ಮೋದಿ ಸೇರಿದಂತೆ ಕರ್ನಾಟಕ ಘಟಾನುಘಟಿ ರಾಜಕಾರಣಿಗಳು ಹೇಳಿದ್ದಾರೆ. ಅದ್ಹೇಗೆ ಸಾಧ್ಯ ಅಂತೀರಾ…! ನೀವೇ ನೋಡಿ.
ನರೇಂದ್ರ ಮೋದಿ, ಸಿಎಂ ಯಡಿಯೂರಪ್ಪ, ಮಾಜಿ ಸಿಎಂ ಸಿದ್ದರಾಮಯ್ಯ ಹಾಗೂ ಮಾಜಿ ಸಿಎಂ ಎಚ್ಡಿ ಕುಮಾರಸ್ವಾಮಿ ಅವರಂತೆ ಪಾತ್ರಧಾರಿಗಳನ್ನು ಬಳಸಿಕೊಂಡು ”ಅಕ್ಟೋಬರ್ 30ರಂದು ಟೈಟಲ್ ತಿಳಿಸಲಾಗುವುದು” ಎಂದು ಚಿತ್ರತಂಡ ಪ್ರಚಾರ ಮಾಡಿದೆ. ಚಿತ್ರತಂಡದ ಈ ಹೊಸ ಪ್ರಯತ್ನ ಸಿನಿಪ್ರಿಯರ ಗಮನ ಸೆಳೆದಿದೆ. ಈ ಚಿತ್ರಕ್ಕೆ ಆಕ್ಷನ್ ಹೇಳುತ್ತಿರುವ ರಾಜಶೇಖರ್ ಅವರಿಗೆ ಇದು ಚೊಚ್ಚಲ ಸಿನಿಮಾವಾಗಿದೆ. ಇನ್ನೂ ಇವರು ಈಗಾಗಲೇ ಕಾಮಿಡಿ ಶೋ ‘ಮಜಾ ಟಾಕೀಸ್’ ಹಾಗೂ ದರ್ಶನ್ ನಟನೆಯ ‘ರಾಬರ್ಟ್’ ಚಿತ್ರಕ್ಕೆ ಸಂಭಾಷಣೆ ಬರೆದಿದ್ದಾರೆ.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel