ADVERTISEMENT
Wednesday, February 11, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಏಪ್ಯಾದ ಟಾಪ್ 3 ಹಾಟೆಸ್ಟ್ ಆಪ್ ಗಳಲ್ಲಿ ಕೂ Koo

Mahesh M Dhandu by Mahesh M Dhandu
November 18, 2021
in Newsbeat, TECHNOLOGY, ತಂತ್ರಜ್ಞಾನ
Koo saaksha tv
Share on FacebookShare on TwitterShare on WhatsappShare on Telegram

Koo(ಕೂ) ಅಪ್ಲಿಕೇಶನ್ – ಭಾರತದ ಬಹುಭಾಷಾ ಮೈಕ್ರೋ-ಬ್ಲಾಗಿಂಗ್ ವೇದಿಕೆ – ಆಂಪ್ಲಿಟ್ಯೂಡ್ ರಚಿಸಿದಂತಹ ಉತ್ಪನ್ನ ವರದಿ 2021 ರ ಅನ್ವಯ ಏಷ್ಯಾ ಪೆಸಿಫಿಕ್ (APAC) ಪ್ರದೇಶದ ಭವಿಷ್ಯದ ಜನಪ್ರಿಯ 5 ಉತ್ಪನ್ನಗಳಲ್ಲಿ ಸ್ಥಾನ ಪಡೆದಿದೆ.

ಬಳಕೆದಾರರು ತಮ್ಮ ಮಾತೃಭಾಷೆಯಲ್ಲಿ ಮನದಾಳವನ್ನು ವ್ಯಕ್ತಪಡಿಸಲು ಅನುವು ಮಾಡಿಕೊಡುವ ವಿಶಿಷ್ಟ ವೇದಿಕೆ Koo (ಕೂ), ಇದು APAC, US ಮತ್ತು EMEA ಪ್ರದೇಶದಾದ್ಯಂತ ಆಂಪ್ಲಿಟ್ಯೂಡ್‌ನ ಮೊದಲ ಆವೃತ್ತಿಯ ಪ್ರತಿಷ್ಠಿತ ವರದಿಯಲ್ಲಿ ಸ್ಥಾನ ಪಡೆದ ಏಕೈಕ ಸಾಮಾಜಿಕ ಮಾಧ್ಯಮವಾಗಿದೆ.

Related posts

To get good marks in exams, chant this one-line mantra in the ears of your children every day

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.

February 11, 2026
ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ಕುರಿತು ಸ್ಪೀಕರ್ ಏನು ಹೇಳಿದರು?

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ಕುರಿತು ಸ್ಪೀಕರ್ ಏನು ಹೇಳಿದರು?

February 11, 2026

ಭಾರತದಿಂದ ಉಲ್ಲೇಖಿಸಲ್ಪಟ್ಟ ಕೇವಲ ಎರಡು ಬ್ರಾಂಡ್‌ಗಳಲ್ಲಿ ಕೂ ಕೂಡ ಒಂದಾಗಿದೆ (CoinDCX ಇನ್ನೊಂದು).

ಆಂಪ್ಲಿಟ್ಯೂಡ್‌ನ ಬಿಹೇವಿಯರಲ್ ಗ್ರಾಫ್‌ ಮಾಹಿತಿಯು ನಮ್ಮ ಡಿಜಿಟಲ್ ಜೀವನವನ್ನು ರೂಪಿಸುವ ಪ್ರಪಂಚದ ಅತ್ಯಂತ ಉದಯೋನ್ಮುಖ ಡಿಜಿಟಲ್ ಉತ್ಪನ್ನಗಳನ್ನು ಪ್ರದರ್ಶಿಸುತ್ತದೆ.

ಈ ವರದಿಯು “ಸಾಮಾಜಿಕ ಮಾಧ್ಯಮ ವೇದಿಕೆಯ Koo(ಕೂ) ಆ್ಯಪ್ ತನ್ನ ಭಾರತೀಯ ಬಳಕೆದಾರರ ವಿಶಿಷ್ಟತೆಯನ್ನು ಗುರುತಿಸಿ ವಿವರಿಸಿದೆ.

Koo(ಕೂ) “1 ಬಿಲಿಯನ್‌ಗಿಂತಲೂ ಹೆಚ್ಚು ಬಳಕೆದಾರರು ಆಯ್ಕೆ ಮಾಡಿಕೊಂಡ ಆದ್ಯತೆಯ ಸಾಮಾಜಿಕ ಮಾಧ್ಯಮ ವೇದಿಕೆಯಾಗಿ ಕೂ ಪ್ರಬಲವಾಗಿ ಬೆಳೆದಿದೆ.

Koo saaksha tv

ಜನರು ತಮ್ಮದೇ ಸ್ಥಳೀಯ ಭಾಷೆಗಳಲ್ಲಿಅಭಿಪ್ರಾಯ ವ್ಯಕ್ತಪಡಿಸಲು ಅವಕಾಶ ಮಾಡಿಕೊಡುವ ಮೇಡ್-ಇನ್-ಇಂಡಿಯಾ ಪ್ಲಾಟ್‌ಫಾರ್ಮ್‌ ಕೂ (Koo), ಅಪ್ಲಿಕೇಶನ್ ಮಾರ್ಚ್ 2020 ರಲ್ಲಿ ಪ್ರಾರಂಭವಾಯಿತು.

ನಂತರದ 20 ತಿಂಗಳ ಅಲ್ಪಾವಧಿಯಲ್ಲಿ 15 ಮಿಲಿಯನ್ ಬಳಕೆದಾರರನ್ನು ಗಳಿಸಿಕೊಂಡಿದ್ದಲ್ಲದೇಮತ್ತು 9 ಭಾರತೀಯ ಭಾಷೆಗಳಲ್ಲಿ ಸೇವೆಯನ್ನು ಒದಗಿಸುತ್ತಿದೆ.

ಬಲಿಷ್ಠ ತಂತ್ರಜ್ಞಾನ, ಅನುವಾದದ ಅವಕಾಶ ಮುಂತಾದ ವಿಶಿಷ್ಟ ಆಪ್ಶನ್‌ಗಳನ್ನು ಬಳಕೆದಾರರಿಗೆ ಒದಗಿಸಿದ್ದು, ಮುಂದಿನ ಒಂದು ವರ್ಷದಲ್ಲಿ Koo (ಕೂ) 100 ಮಿಲಿಯನ್ ಡೌನ್‌ಲೋಡ್‌ಗಳನ್ನು ದಾಟುವ ನಿರೀಕ್ಷೆಯಿದೆ.

2021 ರ ಉತ್ಪನ್ನ ವರದಿಗೆ ಪ್ರತಿಕ್ರಿಯಿಸಿದ Koo(ಕೂ) ಸಹ-ಸಂಸ್ಥಾಪಕ ಮತ್ತು ಸಿಇಒ, ಅಪ್ರಮೇಯ ರಾಧಾಕೃಷ್ಣ: “ಈ ಗೌರವಾನ್ವಿತ ಜಾಗತಿಕ ವರದಿಯಲ್ಲಿ Koo(ಕೂ) ಅಪ್ಲಿಕೇಶನ್ ಗುರುತಿಸಲ್ಪಟ್ಟು APAC ನ ಟಾಪ್ 5 ರ ಹಾಟೆಸ್ಟ್ ಡಿಜಿಟಲ್ ಉತ್ಪನ್ನಗಳಲ್ಲಿ Koo(ಕೂ) ಒಂದಾಗಿರುವುದು ಹೆಮ್ಮೆಯ ವಿಷಯ. ನಾವು ಭಾರತದಿಂದ ಮತ್ತು APAC, EMEA ಮತ್ತು US ನಾದ್ಯಂತ ಗುರುತಿಸಲ್ಪಟ್ಟ ಏಕೈಕ ಸಾಮಾಜಿಕ ಮಾಧ್ಯಮ ಆಗಿದ್ದೇವೆ. ಭಾರತದಿಂದ, ವಿಶ್ವಕ್ಕಾಗಿ ನಿರ್ಮಿಸಲಾಗುತ್ತಿರುವ ಬ್ರ್ಯಾಂಡ್‌ ಆದ ನಮಗೆ ಇದೊಂದು ಗಮನಾರ್ಹ ಸಾಧನೆಯಾಗಿದೆ. ಆಂಪ್ಲಿಟ್ಯೂಡ್‌ನ ಈ ವರದಿಯು ಡಿಜಿಟಲ್ ಜಗತ್ತಿನಲ್ಲಿ ಭಾಷಾ ಅಡೆತಡೆಗಳನ್ನು ಅಳಿಸಲು, ಸಂಸ್ಕೃತಿ ಮತ್ತು ಭಾಷಾ ವೈವಿಧ್ಯತೆಯ ನಡುವೆಯೂ ಜನರು ಪರಸ್ಪರ ಸಂಪರ್ಕಿಸಲು ಇನ್ನಷ್ಟು ಶ್ರಮಿಸುವಂತೆ ನಮ್ಮನ್ನು ಪ್ರೇರೇಪಿಸುತ್ತದೆ.

ಆಂಪ್ಲಿಟ್ಯೂಡ್ ಎಂಬುದು ಕ್ಯಾಲಿಫೋರ್ನಿಯಾ ಮೂಲದ ಉತ್ಪನ್ನ ವಿಶ್ಲೇಷಣೆ ಮತ್ತು ಡಿಜಿಟಲ್ ಆಪ್ಟಿಮೈಸೇಶನ್ ಸಂಸ್ಥೆಯಾಗಿದೆ. ಈ ವರದಿಯು ‘ಶೀಘ್ರವಾಗಿ ಬೆಳೆಯುತ್ತಿರುವ ಉತ್ಪನ್ನಗಳನ್ನು’ ಆಯ್ಕೆ ಮಾಡುತ್ತದೆ. ‘ಭವಿಷ್ಯದ ಜನಪ್ರಿಯ ಕಂಪನಿ’ಗಳನ್ನು ಗುರುತಿಸಲು ತಿಂಗಳ ಬಳಕೆದಾರರ ದತ್ತಾಂಶವನ್ನು ಇದು ವಿಶ್ಲೇಷಿಸುತ್ತದೆ.

Koo saaksha tv

ಅತ್ಯುತ್ತಮ ಡಿಜಿಟಲ್ ಅನುಭವವನ್ನು ಒದಗಿಸುವ ಕಂಪನಿಗಳ ತಿಂಗಳ ಬಳಕೆದಾರರ ಹೆಚ್ಚಳವನ್ನು ಪರಿಗಣಿಸಿ ಆಂಪ್ಲಿಟ್ಯೂಡ್ ವರದಿಗಳನ್ನು ನೀಡುತ್ತದೆ. ಜೂನ್ 2020 ರಿಂದ ಜೂನ್ 2021 ರವರೆಗಿನ ಒಟ್ಟು 13-ತಿಂಗಳ ಅವಧಿಯಲ್ಲಿ ಸಕ್ರಿಯ ಬಳಕೆದಾರರ ಒಟ್ಟು ಸಂಖ್ಯೆಯಲ್ಲಿ ಕ್ಷಿಪ್ರ ಬೆಳವಣಿಗೆಯನ್ನು ಗುರುತಿಸಿ Koo(ಕೂ) ಅಪ್ಲಿಕೇಶನ್ ಅನ್ನು ಈ ವರದಿಯಲ್ಲಿ ಉಲ್ಲೇಖಿಸಲಾಗಿದೆ.

ಕೂ ಬಗ್ಗೆ: Koo(ಕೂ) ಮಾರ್ಚ್ 2020 ರಲ್ಲಿ ಭಾರತೀಯ ಭಾಷೆಗಳನ್ನೊಳಗೊಂಡ ಮೈಕ್ರೋ-ಬ್ಲಾಗಿಂಗ್ ವೇದಿಕೆಯಾಗಿ ಸ್ಥಾಪಿತವಾಯಿತು, ಇದು ಅನೇಕ ಭಾರತೀಯ ಭಾಷೆಗಳಲ್ಲಿ ಲಭ್ಯವಿದೆ. ಇಲ್ಲಿ ಭಾರತದ ವಿವಿಧ ಪ್ರದೇಶಗಳ ಜನರು ತಮ್ಮ ಮಾತೃಭಾಷೆಯಲ್ಲಿಯೇ ತಮ್ಮ ಮನದಾಳವನ್ನು ವ್ಯಕ್ತಪಡಿಸಿಕೊಳ್ಳಬಹುದು. ಕೇವಲ 10% ಜನರು ಇಂಗ್ಲಿಷ್ ಮಾತನಾಡುವ ಭಾರತ ದೇಶದಲ್ಲಿ, ಭಾರತೀಯ ಬಳಕೆದಾರರಿಗೆ ಮನಮುಟ್ಟುವಂತೆ ಭಾಷಾ ಅನುಭವಗಳನ್ನು ತಲುಪಿಸಬಲ್ಲ ಮತ್ತು ಪರಸ್ಪರ ಸಂಪರ್ಕ ಸಾಧಿಸಲು ಸಹಾಯ ಮಾಡುವ ಸಾಮಾಜಿಕ ಜಾಲತಾಣ ವೇದಿಕೆ ಅತ್ಯವಶ್ಯವಾಗಿದೆ. ಭಾರತೀಯ ಭಾಷೆಗಳಿಗೆ ಆದ್ಯತೆ ನೀಡುವ ಭಾರತೀಯರ ಧ್ವನಿಗಳಿಗೆ Koo(ಕೂ) ಒಂದು ವೇದಿಕೆಯನ್ನು ಒದಗಿಸುತ್ತದೆ.

ಆಂಪ್ಲಿಟ್ಯೂಡ್ ಬಗ್ಗೆ: ಡಿಜಿಟಲ್ ಆಪ್ಟಿಮೈಸೇಶನ್‌ನ ಪ್ರವರ್ತಕರಾದ ಆಂಪ್ಲಿಟ್ಯೂಡ್‌ನ ಪರಂಪರೆಯು, ಡಿಜಿಟಲ್ ಉತ್ಪನ್ನಗಳು, ಡೇಟಾ-ಚಾಲಿತ ಉತ್ಪನ್ನಗಳ ವಿಶ್ಲೇಷಣೆ, ಡಿಜಿಟಲ್ ಉತ್ಪನ್ನದ ಅಳವಡಿಕೆ, ಉತ್ಪನ್ನದಲ್ಲಿನ ನಡವಳಿಕೆ ಮತ್ತು ಡಿಜಿಟಲೀಕರಣಕ್ಕೆ ಆದ್ಯತೆ ನೀಡುವ ಜಗತ್ತಿನಲ್ಲಿನ ಚಾಲನಾ ತಂತ್ರಗಳ ಕುರಿತು ಅಪ್ರತಿಮ ಅಭಿಪ್ರಾಯಗಳನ್ನು ನೀಡುತ್ತದೆ.

Tags: #Saaksha TVAPACAsiakoo
ShareTweetSendShare
Join us on:

Related Posts

To get good marks in exams, chant this one-line mantra in the ears of your children every day

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ.

by admin
February 11, 2026
0

ಪರೀಕ್ಷೆಯಲ್ಲಿ ಉತ್ತಮ ಅಂಕಗಳನ್ನು ಪಡೆಯಲು ಮಕ್ಕಳ ಕಿವಿಯಲ್ಲಿ ಪ್ರತಿದಿನ ಈ ಒಂದು ಸಾಲಿನ ಮಂತ್ರವನ್ನು ಪಠಿಸಿ. ದಡ್ಡ ಮಕ್ಕಳನ್ನೂ ಅಧ್ಯಯನದಲ್ಲಿ ಉತ್ಕೃಷ್ಟಗೊಳಿಸಲು ಪ್ರಬಲ ಮಂತ್ರ. ನಾವು ನಮ್ಮ...

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ಕುರಿತು ಸ್ಪೀಕರ್ ಏನು ಹೇಳಿದರು?

ಪ್ರತಿಪಕ್ಷಗಳ ಅವಿಶ್ವಾಸ ನಿರ್ಣಯ ಕುರಿತು ಸ್ಪೀಕರ್ ಏನು ಹೇಳಿದರು?

by Shwetha
February 11, 2026
0

ತಮ್ಮ ವಿರುದ್ಧ ಪ್ರತಿಪಕ್ಷಗಳು ಮಂಡಿಸಿರುವ ಅವಿಶ್ವಾಸ ನಿರ್ಣಯಕ್ಕೆ ಸಂಬಂಧಿಸಿ ಲೋಕಸಭಾ ಸ್ಪೀಕರ್ ಓಂ ಬಿರ್ಲಾ ಪ್ರತಿಕ್ರಿಯೆ ನೀಡಿದ್ದಾರೆ. ಅವಿಶ್ವಾಸ ನಿರ್ಣಯದ ನೋಟಿಸ್‌ನ್ನು ಪ್ರಾಥಮಿಕವಾಗಿ ಪರಿಶೀಲಿಸಿದ ಬಳಿಕ, ಮುಂದಿನ...

ಪ್ಯಾನ್ ಕಾರ್ಡ್ ಬಳಕೆದಾರರೇ ಗಮನಿಸಿ: ನಗದು  ಏಪ್ರಿಲ್ 1ರಿಂದ ನಗದು ವ್ಯವಹಾರ ಮತ್ತು ಮಿತಿಯಲ್ಲಿ ಭಾರೀ ಬದಲಾವಣೆ

ಪ್ಯಾನ್ ಕಾರ್ಡ್ ಬಳಕೆದಾರರೇ ಗಮನಿಸಿ: ನಗದು ಏಪ್ರಿಲ್ 1ರಿಂದ ನಗದು ವ್ಯವಹಾರ ಮತ್ತು ಮಿತಿಯಲ್ಲಿ ಭಾರೀ ಬದಲಾವಣೆ

by Shwetha
February 11, 2026
0

ನವದೆಹಲಿ: ಆದಾಯ ತೆರಿಗೆ ಪಾವತಿದಾರರಿಗೆ ಮತ್ತು ಸಾಮಾನ್ಯ ಜನರಿಗೆ ಕೇಂದ್ರ ಸರ್ಕಾರ ಭರ್ಜರಿ ಸಿಹಿ ಸುದ್ದಿ ನೀಡುವ ಸಾಧ್ಯತೆಯಿದೆ. ಬ್ಯಾಂಕ್ ವಹಿವಾಟು, ವಾಹನ ಖರೀದಿ, ಮತ್ತು ಹೋಟೆಲ್...

ನ್ಯಾಯಾಂಗವನ್ನು ರಾಜಕೀಯ ವಿವಾದಗಳ ವೇದಿಕೆ ಮಾಡಬೇಡಿ: ಸಿಜೆಐ

ನ್ಯಾಯಾಂಗವನ್ನು ರಾಜಕೀಯ ವಿವಾದಗಳ ವೇದಿಕೆ ಮಾಡಬೇಡಿ: ಸಿಜೆಐ

by Shwetha
February 11, 2026
0

ಅಸ್ಸಾಂ ಮುಖ್ಯಮಂತ್ರಿ ಹಿಮಂತ ಬಿಶ್ವ ಶರ್ಮ ಅವರ ಗನ್ ವಿಡಿಯೋ ಪ್ರಕರಣಕ್ಕೆ ಸಂಬಂಧಿಸಿದಂತೆ ಕ್ರಮ ಕೈಗೊಳ್ಳಬೇಕು ಎಂದು ಕಮ್ಯುನಿಸ್ಟ್ ಪಕ್ಷಗಳು ಸಲ್ಲಿಸಿದ್ದ ಅರ್ಜಿಗೆ ಸುಪ್ರೀಂ ಕೋರ್ಟ್ ತೀವ್ರ...

ದೆಹಲಿಯಲ್ಲಿ ದೋಸ್ತಿ ಕರುನಾಡಿನಲ್ಲಿ ಕುಸ್ತಿ: ಮೈತ್ರಿ ವಿರುದ್ಧ ಸಿಡಿದೆದ್ದ ಕಮಲ ಕಲಿಗಳು

ದೆಹಲಿಯಲ್ಲಿ ದೋಸ್ತಿ ಕರುನಾಡಿನಲ್ಲಿ ಕುಸ್ತಿ: ಮೈತ್ರಿ ವಿರುದ್ಧ ಸಿಡಿದೆದ್ದ ಕಮಲ ಕಲಿಗಳು

by Shwetha
February 11, 2026
0

ಬೆಂಗಳೂರು: ರಾಜ್ಯ ರಾಜಕೀಯದಲ್ಲಿ ಆಡಳಿತರೂಢ ಕಾಂಗ್ರೆಸ್ ಪಕ್ಷವನ್ನು ಮಣಿಸಲು ಒಂದಾಗಿರುವ ಬಿಜೆಪಿ ಮತ್ತು ಜೆಡಿಎಸ್ ಮೈತ್ರಿಕೂಟದಲ್ಲಿ, ಒಗ್ಗಟ್ಟಿನ ಮಂತ್ರಕ್ಕಿಂತ ಭಿನ್ನಮತದ ರಾಗವೇ ಜೋರಾಗಿ ಕೇಳಿಬರುತ್ತಿದೆ. 2028ರ ವಿಧಾನಸಭಾ...

Load More

POPULAR NEWS

  • ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    ನೀವು ಅಂದುಕೊಂಡ ಕೆಲಸ ಆಗಬೇಕೆಂದರೆ ಕಾರ್ಯಸಿದ್ದಿ ಗಣಪತಿ ದೇವರಿಗೆ ಈ ಸ್ತೋತ್ರವನ್ನು ಹೇಳಿಕೊಂಡು ಪೂಜೆ ಮಾಡಿ ನಿಮ್ಮ ಜೀವನದಲ್ಲಿ ಅದ್ಬುತ ಬದಲಾವಣೆಗಳು ಆಗುತ್ತವೆ…!!

    0 shares
    Share 0 Tweet 0
  • ನಿಮ್ಮ ಶತ್ರುಗಳು ಮೆತ್ತಗಾಗಿ ಮೂಲೆ ಗುಂಪು ಸೇರಬೇಕೆಂದು ಕೊಂಡಿದ್ದೀರಾ ಹಾಗಾದ್ರೆ ಈ ಒಂದು ಚಿಕ್ಕ ತಂತ್ರಸಾರ ಮಾಡಿ ಸಾಕು..!!!

    0 shares
    Share 0 Tweet 0
  • ದೋಷಗಳನ್ನು ಪರಿಹಾರ ಮಾಡುವ ಶ್ರೀ ಸುಬ್ರಹ್ಮಣ್ಯ ಸ್ತೋತ್ರಂ ಭಕ್ತಿಯಿಂದ ಪ್ರಾರ್ಥಿಸಿ ಮನೋಕಾಮನೆಗಳು ಈಡೇರುತ್ತದೆ

    0 shares
    Share 0 Tweet 0
  • ಯಂತ್ರ, ಮಂತ್ರ,ತಂತ್ರಸಾರದ, ಶ್ರೀ ಸಿಗಂದೂರ ಚೌಡೇಶ್ವರೀ ತಾಯಿಯಿಂದ ನಮಗೆ ಶ್ರೀ ರಕ್ಷೇ ಪ್ರಾಪ್ತಿ…

    0 shares
    Share 0 Tweet 0
  • Astrology – ಯಾವ ಯಾವ ರಾಶಿಯವರಿಗೆ ಯಾವ ನಕ್ಷತ್ರ ಬರುತ್ತದೆ ಗೋತ್ತಾ ನಿಮಗೆ..??

    0 shares
    Share 0 Tweet 0

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram