Shivamogga: ನದಿಯ ನಡುಗಡ್ಡೆಯಲ್ಲಿ ನಡೆಯುವ ಜಾತ್ರೆ

1 min read
Shivamogga Saaksha Tv

ನದಿಯ ನಡುಗಡ್ಡೆಯಲ್ಲಿ ನಡೆಯುವ ಜಾತ್ರೆ

ಶಿವಮೊಗ್ಗ: ವಸಂತ ಮಾಸದ ಚಂದ್ರಮಾನ ಯುಗಾದಿ ನಂತರ, ನಾಡಿನ ವಿವಿಧಡೆ ಜಾತ್ರೆಗಳು ಪ್ರಾರಂಭವಾಗುತ್ತೆವೆ. ಅದರಂತೆ ಶಿವಮೊಗ್ಗ ತಾಲೂಕಿನ ತಾಲೂಕಿನ ಕೂಡ್ಲಿ ಗ್ರಾಮದ ಸಂಗಮೇಶ್ವರ ಜಾತ್ರೆಗೆ ನಿನ್ನೆ (ಶನಿವಾರ) ಚಾಲನೆ ದೊರೆತಿದೆ.

ತುಂಗ ಮತ್ತು ಭದ್ರಾ ನದಿಗಳ ಸಂಗಮವಾದ ಪವಿತ್ರ ಕ್ಷೇತ್ರ ಕ್ಲೂಡಿ ಗ್ರಾಮ. ಈ ಗ್ರಾಮದ ದೇವಸತೆಯಾದ ಸಂಗಮೇಶ್ವರ ಜಾತ್ರೆಗೆ ಚಾಲನೆ ದೊರೆತಿದ್ದು, ಈ ಜಾತ್ರೆ ಮೂರು ದಿನಗಳ ಕಾಲ ನಡೆಯುತ್ತದೆ.

ಈ ಜಾತ್ರೆಯ 2ನೇ ದಿನ ಸಂಗಮೇಶ್ವರನ ರಥೋತ್ಸವ ನಡೆಯುತ್ತದೆ. ಈ ದಿನ ಕೂಡ್ಲಿ ಸುತ್ತಮುತ್ತಲಿನ ನೂರಾರು ಗ್ರಾಮದ ದೇವತೆಗಳು ಆಗಮಿಸಿ ತುಂಗ ಭದ್ರಾ ಸಂಗಮದಲ್ಲಿ ಪೂಜೆ ಸಲ್ಲಿಸಿ, ಸಂಗಮೇಶ್ವರನ ದರ್ಶನ ಪಡೆದು ವಾಪಸ್ ಆಗುತ್ತಾರೆ ಎನ್ನುವುದು ಜನರ ನಂಬಿಕೆ.

ಸಂಗಮದಲ್ಲಿ ನಡೆಯುವ ಜಾತ್ರೆ ಜನರನ್ನು ಆಕರ್ಷಿಸುವುದು ಇಲ್ಲಿ ನಡೆಯುವ ನಡುಗಡ್ಡೆಯ ಜಾತ್ರೆಯಿಂದ. ಜಾತ್ರೆಗೆ ಬರುವವರು ತೆಪ್ಪದಲ್ಲಿ ಸಾಗುತ್ತಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd