Koppala : ಜನಾರ್ಧನ್ ರೆಡ್ಡಿ ರಾಜಕೀಯ ಎಂಟ್ರಿ ಹಿನ್ನಲೆ – ಅಭಿಮಾನಿಯಿಂದ 101 ಟಗರು ಗಿಫ್ಟ್…
ಮಾಜಿ ಸಚಿವ ಮತ್ತು ಗಣಿಧಣಿ ಜನಾರ್ಧನರೆಡ್ಡಿ ಸಕ್ರಿಯ ರಾಜಕಾರಣಕ್ಕೆ ಮತ್ತೆ ಎಂಟ್ರಿ ಕೊಡುತ್ತಿರುವ ಹಿನ್ನಲೆ ಜನಾರ್ಧನ್ ರೆಡ್ಡಿ ಅಭಿಮಾನಿಯೊಬ್ಬರು 101 ಟಗರುಗಳನ್ನ ಕಾಣಿಕೆ ನೀಡುವ ಘೊಷಣೆ ನೀಡಿದ್ದಾರೆ.
ಗಂಗಾವತಿಯ ಯಮನೂರಪ್ಪ ಪುಂಡಗೌಡ ಎಂಬವವರು ಗಂಗಾವತಿಯಲ್ಲಿ ಮನೆ ಮಾಡಿರುವ ರೆಡ್ಡಿಯವರಿಗೆ ಡಿ 21 ರಂದು ಒಂದು ಟಗರು ಮತ್ತು ಚುನಾವಣೆ ಸಮಯದಲ್ಲಿ 100 ಟಗರು ಗಿಫ್ಟ್ ನೀಡುವುದಾಗಿ ಹೇಳಿದ್ದಾರೆ.
ಜನಾರ್ಧನ್ ರೆಡ್ಡಿಯವರು ಗಂಗಾವತಿಯಿಂದ ಸ್ಪರ್ಧಿಸಬೇಕು, ಬಿಜೆಪಿಯಿಂದ ಸ್ಪರ್ಧಿಸಿದರೂ ಸರಿ ಪಕ್ಷೇತರರಾಗಿ ಸ್ಪರ್ಧಿಸಿದರೂ ಸರಿಯೇ ಗಂಗಾವತಿ ಕ್ಷೇತ್ರ ದಿಂದ ಸ್ಪರ್ಧಿಸಲಿ ಎಂದಿರುವ ಅಭಿಮಾನಿ ಯಮನೂರಪ್ಪ ತಿಳಿಸಿದ್ದಾರೆ.
Koppala: Background to Janardhan Reddy’s political entry – 101 gifts from a fan…








