Koppala | ಮನಿರಾಬಾದ್ ಜಲಾಶಯ ಭರ್ತಿ – ಜನರ ಹುಚ್ಚಾಟ
ಕೊಪ್ಪಳ : ಜಿಲ್ಲೆಯಲ್ಲಿ ವರುಣನ ಆರ್ಭಟ ಜೋರಾಗಿದ್ದು, ಮುನಿರಾಬಾದ್ ನ ಜಲಾಶಯ ಸಂಪೂರ್ಣವಾಗಿ ಭರ್ತಿಯಾಗಿದೆ.
ಜಲಾಶಯಕ್ಕೆ ಅಪಾರ ಪ್ರಮಾಣದ ನೀರು ಹರಿದು ಬರುತ್ತಿದ್ದು, ಸೇತುವೆಗಳ ಮೇಲೆ ನೀರು ಹರಿಯುತ್ತಿದೆ.
ಇದನ್ನ ನೋಡಲು ಜನರು ತಂಡೋಪ ತಂಡವಾಗಿ ಆಗಮಿಸುತ್ತಿದ್ದು, ಸೆಲ್ಫಿ ಶೋಕಿಗೆ ಬಿದ್ದಿದ್ದಾರೆ.
ಕ್ರಸ್ಟ್ ಗೇಟ್ ಕೂಗಳತೆ ದೂರದ ಡೇಂಜರ್ ಸೇತುವೆ ಮೇಲೆ ನಿಂತು ಸೆಲ್ಫಿ ಕ್ಲಿಕ್ಕಿಸಿಕೊಳ್ಳುತ್ತಿದ್ದಾರೆ.
ಹಳೆ ಸೇತುವೆ ಮೇಲೆ ಜನರ ಹುಚ್ಚಾಟ ಕ್ಯಾಮೆರಾದಲ್ಲಿ ಸೆರೆಯಾಗಿದೆ.

ಅಂದಹಾಗೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮವಾಗಿ ಬ್ಯಾರಿಕೇಡ್, ಮುಳ್ಳಿನ ಬೇಲಿ ಕಟ್ಟಿ ಬಂದೋಬಸ್ತ್ ಮಾಡಿದೆ.
ಆದ್ರೂ ಇದಕ್ಕೆ ಜನರು ಡೋಂಟ್ ಕೇರ್ ಎಂದು ಬೇಲಿ ದಾಟಿ ಮುಂದೆ ಸಾಗಿದ್ದಾರೆ.
ಐದು ದಿನಗಳ ಹಿಂದೆ ಇಇ ಶಿವಶಂಕರ್ ಯುವಕನಿಗೆ ಕಪಾಳಮೋಕ್ಷ ಮಾಡಿದ್ರು.
ನೀರಿನ ಬಳಿ ತೆರಳದಂತೆ ಎಚ್ಚರಿಕೆ ನೀಡಿದ್ದರು.
ಈ ವಿಷಯ ತಿಳಿದ್ರೂ ಕೂಡ ಜನರು ಮೊಂಡಾಟ ಬಿಡದೇ ಆಡಿದ್ದೇ ಆಟ ಎಂಬಂತೆ ನೀರಿನತ್ತ ಸಾಗುತ್ತಿದ್ದಾರೆ.
ಇದರಿಂದ ಅಧಿಕಾರಿಗಳ ತಲೆ ಬಿಸಿ ಶುರುವಾಗಿದೆ. ಸದ್ಯ ಡ್ಯಾಂನಿಂದ 1 ಲಕ್ಷ 55 ಸಾವಿರ ಕ್ಯೂಸೆಕ್ ಹೊರಹರಿವಿದೆ