D.K.Sivakumar | ಬಿಜೆಪಿ ಸರ್ಕಾರ ಬಂದ ಮೇಲೆ ಜನರ ಬದುಕಿಗೆ ತೊಂದರೆ
ಮೈಸೂರು : ಬಿಜೆಪಿ ಸರ್ಕಾರ ಬಂದ ಮೇಲೆ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗಿದೆ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಆರೋಪಿಸಿದ್ದಾರೆ.
ಮೈಸೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮಾತನಾಡಿದ ಡಿ.ಕೆ.ಶಿವಕುಮಾರ್, ಬಿಜೆಪಿ ಸರ್ಕಾರ ಬಂದ ಮೇಲೆ ಸಾಮಾನ್ಯ ಜನರ ಬದುಕಿಗೆ ತೊಂದರೆ ಆಗಿದೆ.
ಬೈ ಎಲೆಕ್ಷನ್ ಸೋತ ಮೇಲೆ ಸ್ವ ಇಚ್ಛೆಯಿಂದ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ಕೊಟ್ರು. ನಂತರ ನಾನು ಅಧ್ಯಕ್ಷ ಹಾಗೂ ಸಿದ್ದರಾಮಯ್ಯ ಪ್ರತಿಪಕ್ಷ ನಾಯಕ ಎಂದು ಮಾಡಲಾಯಿತು.
5 ಜನ ಕಾರ್ಯಾಧ್ಯಕ್ಷರ ಜತೆಗೆ ನನ್ನ ಅಧ್ಯಕ್ಷ ಮಾಡಿ ಈ ಟೀಂ ಮಾಡಿದ್ದಾರೆ. ಅಧ್ಯಕ್ಷೆ ಸೋನಿ ಗಾಂಧಿ, ನಾಯಕರಾದ ಸಿದ್ದರಾಮಯ್ಯ ಎಲ್ಲ ಸೇರಿ ಈ ಟೀಂ ಮಾಡಿದ್ದೇವೆ.
ಇವತ್ತಿಗೂ ಕೋವಿಡ್‌ನಿಂದ ಸತ್ತವರಿಗೆ ಈಗಲೂ ಸರಿಯಾಗಿ ಪರಿಹಾರ ಸಿಕ್ಕಿಲ್ಲ. ಇದೆಲ್ಲವನ್ನೂ ನಾವು ಬೆಳಕಿಗೆ ತಂದಿದ್ದೇವೆ ಎಂದು ವಿವರಿಸಿದರು.
ಕೇಂದ್ರ ಸರ್ಕಾರ 20 ಲಕ್ಷ ಕೋಟಿ ರೂ. ಪರಿಹಾರ ಹಣ ಎಲ್ಲಿಗೆ ಕೊಟ್ಟಿದೆ ಅಂತ ಹೇಳಲು ಆಗುತ್ತಿಲ್ಲ. ಬಿಜೆಪಿ ಸರ್ಕಾರದಲ್ಲಿ ಹುದ್ದೆಗಳು ಬಹಿರಂಗವಾಗಿ ಮಾರಾಟ ಆಗುತ್ತಿದೆ.
ಐಪಿಎಸ್ ಹಗರಣದಂತ ದಂತೆ ಪ್ರಪಚದಲ್ಲಿ ಎಲ್ಲೂ ನಡೆದಿಲ್ಲ. ಇದು ಪೊಲೀಸ್ ಇಲಾಖೆಯಲ್ಲ, ಬೇರೆ ಇಲಾಖೆಯಲ್ಲೂ ನಡೆದಿದೆ. ಗುಲ್ಬರ್ಗಾ ಚಾರ್ಜ್ ಶೀಟ್ ನಲ್ಲಿ ಆರೋಪಿಗಳು ಹೇಳಿದ್ದಾರೆ.
40% ಕಮಿಷನ್ ಕೇಸ್ ಮುಚ್ಚಿ ಹಾಕಲಾಗ್ತಿದೆ. ಇಡೀ ದೇಶದಲ್ಲಿ ರಾಜ್ಯ ಸರ್ಕಾರ ಬಹುದೊಡ್ಡ ಭ್ರಷ್ಟ ಸರ್ಕಾರ ಅಂತ ಹೆಸರು ಬಂದಿದೆ.
ಅವರ ಪಕ್ಷದವರೇ ಭ್ರಷ್ಟಾಚಾರದ ಬಗ್ಗೆ ಮಾತನಾಡಿದ್ರೆ ನೋಟಿಸ್ ಇಲ್ಲ. ಕೇವಲ ಪ್ರಿಯಾಂಕಾ ಖರ್ಗೆಗೆ ನೋಟಿಸ್ ಯಾಕೆ ಎಂದು ಡಿ.ಕೆ.ಶಿವಕುಮಾರ್ ಪ್ರಶ್ನೆ ಮಾಡಿದರು.