ಮತ್ತೆ ಎಡವಟ್ಟು ಮಾಡಿಕೊಂಡ ಕೆಪಿಎಸ್ ಸಿ : ವಿದ್ಯಾರ್ಥಿಗಳಿಗೆ ಸಂಕಷ್ಟ
ಬೆಂಗಳೂರು : ಕೆಪಿಎಸ್ ಸಿ ಮತ್ತೆ ತನ್ನ ಎಡವಟ್ಟು ಪರ್ವವನ್ನು ಮುಂದುವರಿಸಿದೆ. ಎಫ್ ಡಿ ಎ ಪರೀಕ್ಷೆ ಪೇಪರ್ ಲೀಕ್ ಹಿನ್ನಲೆ ಜನವರಿ 24 ನಡೆಯಬೇಕಿದ್ದ ಪರೀಕ್ಷೆಯನ್ನು ಫೆಬ್ರವರಿ 28 ಕ್ಕೆ ಮುಂದೂಡಿದೆ.
ಆದ್ರೆ ಅದೇ ದಿನ ಐಬಿಪಿಎಸ್ ಬ್ಯಾಂಕಿಂಗ್ ಪರೀಕ್ಷೆ ಕೂಡ ನಡೆಯಲಿದೆ. ಹೀಗಾಗಿ ಎರಡು ಪರೀಕ್ಷೆಗಳು ಒಂದೇ ದಿನ ನಡೆಯಲಿದೆ.
ಹೀಗಾಗಿ ಎರಡು ಪರೀಕ್ಷೆ ಬರೆಯಬೇಕಿರುವ ವಿದ್ಯಾರ್ಥಿಗಳಿಗೆ ಸಂಕಷ್ಟ ಎದುರಾಗಿದೆ. ಬ್ಯಾಂಕಿಂಗ್ ಎಕ್ಸಾಂ ಮೊದಲೇ ಫಿಕ್ಸ್ ಆಗಿದ್ದರೂ ಅಂದೇ ಎಫ್ ಡಿಎ ಎಕ್ಸಾಂ ನಡೆಸುವ ಅವಶ್ಯಕತೆ ಏನಿತ್ತು.
ಇದು ಕೆಪಿಎಸ್ ಸಿಯ ಬೇಜವಾಬ್ದಾರಿಗೆ ಹಿಡಿದ ಕೈಗನ್ನಡಿ. ಈಗ ಒಂದು ಪರೀಕ್ಷೆಯನ್ನು ಬರೆಯಬೇಕಾದರೇ ಇನ್ನೊಂದು ಪರೀಕ್ಷೆಗೆ ಗೈರಾಗಬೇಕಾಗುತ್ತದೆ. ಹೀಗಾಗಿ ಎಫ್ ಡಿ ಎ ಪರೀಕ್ಷೆಯನ್ನು ಮುಂದೂಡುವಂತೆ ವಿದ್ಯಾರ್ಥಿಗಳು ಮನವಿ ಮಾಡಿಕೊಂಡಿದ್ದಾರೆ.
ಅಂದಹಾಗೆ ಈ ಹಿಂದೆ ಅಂದ್ರೆ ಜನವರಿ 24 ರಂದು ಎಫ್ ಡಿಎ ಪರೀಕ್ಷೆ ನಿಗದಿಯಾಗಿತ್ತು. ಆದ್ರೆ ಕೆಲ ಕಿಡಿಗೇಡಿಗಳು ಪರೀಕ್ಷೆ ಪೇಪರ್ ಲೀಕ್ ಮಾಡಿದ್ದರು. ಇದರಿಂದ ಪರೀಕ್ಷೆಯನ್ನು ಫೆಬ್ರವರಿ 28ಕ್ಕೆ ನಿಗದಿ ಮಾಡಲಾಯಿತು.
Our Website : https://saakshatv.com/
Subscribe Now on YouTube
Like us on Facebook
Follow us on Twitter
Follow us on Instagram
Subscribe to our Telegram Channel