Kranti : ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ ಡಿ ಬಾಸ್ ಕ್ರಾಂತಿ…
“ನನ್ನ ಹೊಡೆಯೋಕೆ ಒಬ್ಬ ಕಾಯುತ್ತಿದ್ದರೆ , ನನ್ನ ಕಾಯೋದಕ್ಕೆ ಒಂದು ಸೈನ್ಯೆನೇ ಇದೆ..” ಇದು ಬಿಡುಗಡೆಯಾದ ಕ್ರಾಂತಿ ಸಿನಿಮಾದ ಟ್ರೇಲರ್ ನಲ್ಲಿ ಬರುವ ಡೈಲಾಗ್ ಝಲಕ್. ಕೊನೆಗೂ ಫ್ಯಾನ್ಸ್ ಕಾತರದಿಂದ ಕಾಯುತ್ತಿದ್ದ ಚಾಲೆಂಜಿಂಗ್ ಸ್ಟಾರ್ ದರ್ಶನ್ ನಟನೆಯ ಕ್ರಾಂತಿ ಟ್ರೇಲರ್ ಜನವರಿ 7 ರಂದು ರಿಲೀಸ್ ಆಗಿದ್ದು , ಯೂಟ್ಯೂಬ್ ನಲ್ಲಿ ಧೂಳೆಬ್ಬಿಸುತ್ತಿದೆ..
ಟ್ರೇಲರ್ ನಲ್ಲಿ ‘ಗಜ’ಗಾಂಭೀರ್ಯ ನೋಡಿ ಫ್ಯಾನ್ಸ್ ಸಖತ್ ಥ್ರಿಲ್ ಆಗಿದ್ದಾರೆ.. ಸ್ಯೂಟ್ ನಲ್ಲಿ ಡಿ ಬಾಸ್ ಸಖತ್ ಡೇರಿಂಗ್ ಅಂಡ್ ಡ್ಯಾಶಿಂಗ್ ಆಗಿ ಕಂಡಿದ್ದಾರೆ.. ಟ್ರೇಲರ್ ಗೆ ಪ್ರೇಕ್ಷಕರಿಂದ ಬಾರೀ ಮೆಚ್ಚುಗೆ ವ್ಯಕ್ತವಾಗಿದೆ. ಅಲ್ಲದೆ, ವಿ. ಹರಿಕೃಷ್ಣ ಅವರ ಮ್ಯಾಜಿಕ್ ಮೋಡಿ ಮಾಡಿದೆ. ಕ್ಲಾಸ್ ಮತ್ತು ಮಾಸ್ ಅವತಾರದಲ್ಲಿ ಮಿಂಚಿರುವ ದರ್ಶನ್ ಲುಕ್ ಗೆ ಫ್ಯಾನ್ಸ್ ಫಿದಾ ಆಗಿದ್ದಾರೆ.
ಶೈಲಜಾ ನಾಗ್ ನಿರ್ಮಾಣದಲ್ಲಿ ರಚಿತ ರಾಮ್ ನಾಯಕಿಯಾಗಿ ನಟಿಸಿದ್ದು ಈ ಚಿತ್ರ ಜನವರಿ ಇಪ್ಪತ್ತಾರರಂದು ಗಣರಾಜ್ಯೋತ್ಸವದಲ್ಲಿ ಬಿಡುಗಡೆಯಾಗುತ್ತಿದೆ. ವಿ ಹರಿಕೃಷ್ಣ ಸಿನಿಮಾ ನಿರ್ದೇಶನದೊಂದಿಗೆ ಸಂಗೀತ ನಿರ್ದೇಶನವನ್ನ ಮಾಡುತ್ತಿದ್ದಾರೆ.
Kranti: D Bass Kranti is gathering dust on YouTube…








