ಕ್ರಾಂತಿ ಡಬ್ಬಿಂಗ್ ಶುರು – ಅಭಿಮಾನಿಗಳಿಗೆ ಅಪ್ಡೇಟ್ ಕೊಟ್ಟ ಚಿತ್ರತಂಡ
ಚಾಲೆಂಜಿಗ್ ಸ್ಟಾರ್ ದರ್ಶನ್ ಅಭಿಮಾನಿಗಳಿಗೆ ಕ್ರಾಂತಿ ಚಿತ್ರದ ಕುರಿತು ಬಿಗ್ ಅಪ್ಡೇಟ್ ನೀಡಿದ್ದಾರೆ. ಕ್ರಾಂತಿ ಚಿತ್ರ ತಂಡ,ಇತ್ತೀಚೆಗೆ ಪೋಲ್ಯಾಂಡ್ ನಲ್ಲಿ ಚಿತ್ರೀಕರಣ ಮುಕ್ತಾಯಗೊಳಿಸಿದ್ದು, ಅಲ್ಲಿಂದ ವಾಪಸ್ ಆದ ಬಳಿಕ ನಟ ಚಾಲೆಂಜಿಂಗ್ ಸ್ಟಾರ್ ದರ್ಶನ್, ಚಿತ್ರಕ್ಕೆ ಡಬ್ಬಿಂಗ್ ಪ್ರಾರಂಭಿಸಿದ್ದಾರೆ.
ದರ್ಶನ್ ಡಬ್ಬಿಂಗ್ ಸ್ಟೂಡಿಯೋದಲ್ಲಿರುವ ಫೋಟೊವನ್ನ ಚಿತ್ರತಂಡ ಟ್ವೀಟ್ ಮಾಡಿದ್ದು, ವಾಯ್ಸ್ ಆಫ್ ಕ್ರಾಂತಿ ಎಂಬ ಶೀರ್ಷಿಕೆ ನೀಡಿದೆ. ವಿ ಹರಿಕೃಷ್ಣ ಮೊದಲ ಭಾರಿಗೆ ನಿರ್ದೇಶನದ ಕ್ಯಾಪ್ ತೊಟ್ಟಿದ್ದು,ಚಿತ್ರೀಕರಣ ಸಂಪೂರ್ಣವಾಗಿ ಮುಕ್ತಾಯಗೊಂಡಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ಚಾಲ್ತಿಯಲ್ಲಿವೆ.
.@dasadarshan enters dubbing studio for #Kranti The#Challengingstar starts dubbing for his role in the upcoming multilingual commercial entertainer from today. Film is helmed by @harimonium
prod @shylajanag & @bsuresha #MediaHouseStudio banner
* @TheRavichandraV @RachitaRamDQ pic.twitter.com/4Ppo5oyzUF— A Sharadhaa (@sharadasrinidhi) July 25, 2022
ಯಜಮಾನ, ರಾಬರ್ಟ್ ಚಿತ್ರಗಳ ಯಶಸ್ಸಿನ ಬಳಿಕ ದರ್ಶನ್ ನಟನೆಯ ಹೊಸ ಸಿನಿಮಾ ಕ್ರಾಂತಿಯ ಬಿಡುಗಡೆಗೆ ಅಭಿಮಾನಿಗಳು ಕಾತರದಿಂದ ಕಾಯುತ್ತಿದ್ದಾರೆ. ಸಿನಿಮಾವನ್ನು ಶೈಲಜಾ ನಾಗ್ ಹಾಗೂ ಬಿ ಸುರೇಶ ಮೀಡಿಯಾ ಹೌಸ್ ಸ್ಟೂಡಿಯೋ ಬ್ಯಾನರ್ ನ ಅಡಿಯಲ್ಲಿ ಸಿನಿಮಾ ನಿರ್ಮಾಣಗೊಂಡಿದೆ.
ಕ್ರಾಂತಿ ಚಿತ್ರದ ಮೂಲಕ ಮೂರನೇ ಬಾರಿಗೆ ರಚಿತಾ ರಾಮ್ ದರ್ಶನ್ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ. ಸುಮಲತಾ ಅಂಬರೀಷ್ ಹಾಗೂ ಕ್ರೇಜಿ ಸ್ಟಾರ್ ರವಿಚಂದ್ರನ್ ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.








