ಕ್ರಾಂತಿ ಚಿತ್ರದ ಟ್ರೇಲರ್ ಬಿಡುಗಡೆಗೆ ಡೇಟ್ ಫಿಕ್ಸ್…
ಹೊಸ ವರ್ಷದ ಪ್ರಯುಕ್ತ ಚಾಲೆಂಜಿಗ್ ಸ್ಟಾರ್ ದರ್ಶನ್ ಕ್ರಾಂತಿ ಚಿತ್ರದ ಕುರಿತು ಬಿಗ್ ಅಪ್ಡೇಟ್ ಕೊಟ್ಟಿದ್ದಾರೆ. ಅಭಿಮಾನಿಗಳಿಗೆ ನೂತನ ವರ್ಷದ ಶುಭಾಶಯ ತಿಳಿಸಿರುವ ದರ್ಶನ್ ತಮ್ಮ ಮುಂದಿನ ಚಿತ್ರದ ಟ್ರೇಲರ್ ಜನವರಿ 7 ರಂದು ಬಿಡುಗಡೆಯಾಗುತ್ತಿರುವುದಾಗಿ ತಿಳಿಸಿದ್ದಾರೆ.
ದರ್ಶನ್ ಅಭಿನಯದ 55 ನೇ ಚಿತ್ರ ಇದಾಗಿದ್ದು ಈಗಾಗಲೇ ಪ್ರೇಕ್ಷಕರಲ್ಲಿ ನಿರೀಕ್ಷೆ ಹೆಚ್ಚಾಗಿದೆ. ಗಣರಾಜ್ಯೋತ್ಸದ ಸಂದರ್ಭದಲ್ಲಿ ಚಿತ್ರದ ಬಿಡುಗಡೆಯಾಗುತ್ತಿದ್ದು ಅದಕ್ಕೂ ಮೊದಲು ಚಿತ್ರ ಪ್ರಚಾರ್ಥವಾಗಿ ರಾಜ್ಯದ ಒಂದೊಂದು ಕಡೆಗಳಲ್ಲಿ ಚಿತ್ರದ ಹಾಡುಗಳನ್ನ ಬಿಡುಗಡೆ ಮಾಡಲಾಗಿದೆ. ಚಿತ್ರದ ಹಾಡುಗಳು ಈಗಾಗಲೇ ಎಲ್ಲಾ ಮ್ಯೂಸಿಕ್ ಪ್ಲಾಟ್ ಫಾರ್ಮಗಳಲ್ಲಿ ಚೆನ್ನಾಗಿ ಓಡುತ್ತಿದೆ.
ಮ್ಯೂಸಿಕ್ ಡೈರೆಕ್ಟರ್ ಹರಿಕೃಷ್ಣ ಅವರು ಮೊದಲ ಭಾರಿಗೆ ದರ್ಶನ್ ಗೆ ಆಕ್ಷನ್ ಕಟ್ ಹೇಳುತ್ತಿದ್ದಾರೆ. ಶೈಲಜಾ ನಾಗ್ ಮತ್ತು ಬಿ ಸುರೇಶ್ ಅವರ ನಿರ್ಮಣದಲ್ಲಿ ದರ್ಶನ್ ಅವರ ಎರಡನೇ ಚಿತ್ರ ಇದಾಗಿದೆ. ಇದಕ್ಕೂ ಮೊದಲು ಯಜಮಾನ ಚಿತ್ರಕ್ಕೆ ಬಂಡವಾಳ ಹೂಡಿದ್ದರು.
Kranti : Kranti trailer release date fixed… Kranti : Kranti trailer release date fixed…