ADVERTISEMENT
Tuesday, August 4, 2026
  • Home
  • About Us
  • Contact Us
  • Privacy Policy
Cini Bazaar
Sports
Advertisement
ADVERTISEMENT
  • Home
  • Newsbeat
  • State
    • Samagra karnataka
    • Malenadu Karnataka
    • Kalyana karnataka
    • Coastal Karnataka
    • Hale Mysore
    • Mumbai Karnataka
  • Politics
  • National
  • International
  • Crime
  • Cinema
  • Sports
  • Astro
  • Health
  • More
    • Life Style
    • TECHNOLOGY
    • Saaksha Special
    • Marjala Manthana
    • Cooking
    • Bigg Boss 8
    • Viral News
    • IPL 2020
    • IPL 2021
    • GALLERY
No Result
View All Result
Home Newsbeat

ಕೃಷ್ಣ ಪರಿಪೂರ್ಣತೆಯ ಸಂಕೇತ..! ಕೃಷ್ಣ ಸದಾ ಕಾಲದಲ್ಲೂ ಪ್ರಚಲಿತ; ಯುಗಯುಗಗಳೇ ಉರುಳಿದರೂ ಪ್ರಸ್ತುತ

admin by admin
August 11, 2020
in Newsbeat, Saaksha Special, ಎಸ್ ಸ್ಪೆಷಲ್
Share on FacebookShare on TwitterShare on WhatsappShare on Telegram

ಕೃಷ್ಣ ಪರಿಪೂರ್ಣತೆಯ ಸಂಕೇತ..! ಕೃಷ್ಣ ಸದಾ ಕಾಲದಲ್ಲೂ ಪ್ರಚಲಿತ; ಯುಗಯುಗಗಳೇ ಉರುಳಿದರೂ ಪ್ರಸ್ತುತ

ಕೃಷ್ಣನಲ್ಲಿ ಏನಿಲ್ಲ..? ಕೃಷ್ಣನಲ್ಲಿ ಸರ್ವವೂ ಇದೆ. ಅಣು ರೇಣು ತೃಣ ಕಾಷ್ಟ ಎಲ್ಲದರ ಮರ್ಮ ಅರಿತವ ಮಾತ್ರ ಕೃಷ್ಣನಾಗುತ್ತಾನೆ. ಕೃಷ್ಣ ಸರ್ವ ವೇದಜ್ಞ ಸರ್ವ ಮಂತ್ರಜ್ಞ. ಸರ್ವ ತಂತ್ರಜ್ಞ. ಸರ್ವಾಂತರ್ಯಾಮಿ ಅವತಾರಿ.

Related posts

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

August 4, 2026
ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

August 4, 2026

ಕೃಷ್ಣ ಎಲ್ಲವೂ ಹೌದು! ಅವನಲ್ಲಿ ಬ್ರಹ್ಮಾಂಡದ ಸಮಸ್ತ ಚರಾಚರಗಳ ಚಲನೆಯಿದೆ, ಸ್ಥಿರತೆ ಇದೆ, ಸ್ಥಿತಿಯೂ ಇದೆ ಲಯವೂ ಇದೆ.

ಕೃಷ್ಣ ಯಾಕೆ ಪರಿಪೂರ್ಣ ಗೊತ್ತೇ!
ಅವನಲ್ಲಿ ಬುದ್ದಿವಂತಿಕೆ, ಚಾಣಾಕ್ಷತನ, ಸಮಯ ಪ್ರಜ್ಞೆ, ಅಂತಃಸತ್ವ, ಮೇಧಾವಂತಿಕೆ, ಆರ್ದ್ರ ಹೃದಯ, ತೀಕ್ಷ್ಣ ಪ್ರತಿಕ್ರಿಯೆ, ಆಳವಾದ ಒಳನೋಟ, ದೂರದೃಷ್ಟಿ ಎಲ್ಲವೂ ಇದೆ.

ಕೃಷ್ಣನೊಳಗೊಂದು ಭಾವ ಸಾಗರವಿದೆ ಆದರೂ ಕೃಷ್ಣ ಅದ್ಭುತ ರಾಜಕಾರಣಿ, ಕುಶಾಗ್ರಮತಿ,

ಪ್ರೇಮ, ಸರಸ, ಬಂಧ, ಲಾಲಿತ್ಯ, ಲಾಸ್ಯ, ಕಾವ್ಯ, ದೃಶ್ಯ, ವರ್ಣ, ಕರುಣೆ, ದಯೆ, ಶಾಂತಿ, ನಿರ್ಮಲತ್ವದ ಪ್ರತೀಕ ಕೃಷ್ಣ.

ಕೃಷಣ ನಿರಂಕುಶತ್ವ ಸರ್ವಾಧಿಕಾರಿಯೂ ಹೌದು ಅವನೇ ಕಾಲ, ಅವನೇ ಪ್ರಕೃತಿ, ಅವನೇ ನಿಯತಿ ಅವ ಜಗನ್ನಿಯಾಮಕ.

ಜಗತ್ತಿನಲ್ಲಿ ಘಟಿಸುವ ಎಲ್ಲಾ ಸಂಭವನೀಯ ಘಟನೆಗಳ ಕಾರ್ಯ ಕಾರಣ ಈ ಕೃಷ್ಣ ಕಾಯ.

ಕೃಷ್ಣ ಯಾರು? ಖೈದಿ, ಗೊಲ್ಲ, ತುಂಟ, ರಸಿಕ, ದೇವ, ನರ, ಯಕ್ಷ, ಕಿನ್ನರ, ಕಿಂಪುರುಷ, ಗಂಧರ್ವ, ನಾಗ, ಅಸುರ…?

ದೇವಕಿ ಗರ್ಭ ಸಂಜಾತ, ವಸುದೇವ ಸುತ,
ಯಶೋಧೆ ಮಡಿಲು ತುಂಬಿದ ನಂದ ಕಂದ,
ವ್ರಜದಲ್ಲಿ ಬೆಳೆದ, ಗೋವರ್ಧನ ಎತ್ತಿದ, ಬಾಲ್ಯದಲ್ಲೇ ರಕ್ಕಸರ ವಧಿಸಿದ, ಕಾಳಿಂಗ ಮರ್ಧಿಸಿದ, ವೃಷ್ಟಿಕ ಚಾಣೂರರಿಗೆ ಮೋಕ್ಷ ಕರುಣಿಸಿದ, ಕಂಸ ಮಾವನ ಕೊಂದ, ಜರಾಸಂಧನ ಕೊಲ್ಲಿಸಿದ, ಶಿಶುಪಾಲನ ತಲೆ ಕಡಿದ, ಕಾಲೆಯನ ಮೃತ್ಯುವಿಗೆ ಕಾರಣನಾದ, ರುಕ್ಮಿಣಿಯನ್ನು ಅಪಹರಿಸಿದ, ಮಥುರೆಯಿಂದ ಓಡಿ ಹೋದ, ದ್ವಾಪರ ಬೆಳಗಿದ,
ದ್ವಾರಕೆ ಕಟ್ಟಿದ.

ಕೃಷ್ಣ ಯಾರು?
ಪಲಾಯನಕ್ಕೂ ವ್ಯಾಖ್ಯಾನ ನೀಡಿದವ.
ರಾಧೆಯೊಡಲ ವಿರಹದುರಿಯ ಶಮನ ಮಾಡಿದವ.
ಗೋವಿನ ಸಾನಿಧ್ಯದಲ್ಲಿ ಜನನಿಯ ಕಂಡವ.
ಪೂತನಿಯೆಂಬ ವಿಷಕನ್ಯೆಯ ಮೊಲೆಯಲಿ ಅಮೃತ ಉಂಡವ.
ಮುರುಳಿ ನುಡಿಸಿ ಪ್ರಕೃತಿ ಮಾರ್ಧನಿಸಿದವ.

ಮಣ್ಣು ತಿಂದ ಬಾಯಲ್ಲಿ ಬ್ರಹ್ಮಾಂಡ ಕಾಣಿಸಿದ.
ಅಂಬೆಗಾಲಿಡುವಾಗ ಬೆಣ್ಣೆ ಕದ್ದ; ನಡೆದಾಡಲು ಶುರುಮಾಡಿದಾಗ ಗೋಪಿಕೆಯರ ಸೀರೆ ಕದ್ದ.
ಸಮಸ್ತ ಆರ್ಯಾವರ್ತ – ಬ್ರಹ್ಮಾವರ್ತಗಳ ಜನಗಳ ಮನಸೂ ಕದ್ದ; ರಾಜಕಾರಣ ಮಾಡುತ್ತಾ ಕ್ಷತ್ರಿಯ ರಾಜರ ನಿದ್ದೆ ಕದ್ದ.
ದ್ರೌಪತಿಗೆ ಅಕ್ಷಯ ವಸ್ತ್ರ ಕರುಣಿಸಿದ ; ವನವಾಸದ ಸಮಯದಲ್ಲಿ ಅದೇ ಪಾಂಚಾಲಿಗೆ ಅಕ್ಷಯ ಪಾತ್ರೆ ಕೊಟ್ಟ.
ದೂರ್ವಾಸರಿಂದ ಶಾಪಕ್ಕೆ ತುತ್ತಾದ; ಧರ್ಮಕ್ಕಾಗಿ ಮಾತು ತಪ್ಪಿ ಮೋಸಗಾರನೆನಿಸಿಕೊಂಡ.
ಪಾಂಚಜನ್ಯ ಊದಿ ಸಮರಕ್ಕೆ ನಾಂದಿ ಹಾಡಿದ; ವಿಶ್ವರೂಪ ತೋರಿಸಿ ನಿಮಿತ್ತ ಮಾತ್ರಂ ಭವ ಎಂದ.
ಧರ್ಮರಾಜನ ಬಾಯಲ್ಲಿ ಮಿಥ್ಯೆ ನುಡಿಸಿದ; ಕರ್ಣನ ದಾನ ಪಡೆದು ರಥಚಕ್ರ ಮುರಿಸಿದ
ಗಧಾಯುದ್ಧದಲಿ ದುರ್ಯೋಧನನ ತೊಡೆಮುರಿಸಿದ.
ಯಾದವೀ ಕಲಹ ತಡೆಯಲಾಗದೇ ಜರಾ ಶರದಿಂದ ಅವತಾರ ಮುಗಿಸಿದ.

ಕೃಷ್ಣನಿವನು…!
ಧರ್ಮಕ್ಷೇತ್ರವನ್ನು ಕುರುಕ್ಷೇತ್ರವನ್ನಾಗಿಸಿದವ.
ಅರ್ಜುನನಿಗೆ ನೀತಿ ಹೇಳಿದ ಗೀತಾಚಾರ್ಯ.
ಮಹಾಭಾರತವೆನ್ನುವ ಜಗನ್ನಾಟಕ ರಚಿಸಿದ ನಿರ್ದೇಶಕ.
ಅಂಧಕಾರದ ಸಮಾಜಕ್ಕೆ ಪ್ರಕಾಶ ಧಾರೆ ಎರೆದ ಜಗದ್ಗುರು.
ಮಾಯಾವಿ, ಅಸುರ, ಮೋಸಗಾರ, ತಂತ್ರಗಾರ ಅನ್ನುವ ಕಳಂಕಿತ.
ದೃತರಾಷ್ಟ್ರನ ಮೃತ್ಯು ಅಪ್ಪುಗೆಯಿಂದ ಭೀಮನ ಉಳಿಸಿದ ಚಾಣಾಕ್ಯ.
ಪಾಂಚಜನ್ಯ ಮೊಳಗಿಸಿ ಅಧರ್ಮ ನಿಗ್ರಹಿಸಿದವ.
ಸುದರ್ಶನ, ಕೌಮೇದಿನಿಗಳಿದ್ದರು ನಿಃಶಸ್ತ್ರನಾಗಿ 18 ದಿನದ ಕದನ ನಿರೂಪಿಸಿದವ.
ಗಾಂಧಾರಿಯ ಉಗ್ರ ಶಾಪವನ್ನುಂಡರೂ ನಸು ನಗುತ್ತಲೆ ನಿರ್ಯಾಣ ಹೊಂದಿದವ.

ಕೃಷ್ಣ ಸದಾ ಕಾಲದಲ್ಲೂ ಪ್ರಚಲಿತ; ಯುಗಯುಗಗಳೇ ಉರುಳಿದರೂ ಪ್ರಸ್ತುತ

ಹ್ಯಾಪಿ ಜನ್ಮಾಷ್ಠಮಿ

-(ವಿಭಾ) ವಿಶ್ವಾಸ್ ಭಾರದ್ವಾಜ್

Tags: hindu festkrishnaKrishna is the symbol of perfectionkrishna janmaastamiLord Krishna.mahabarathaperfection
ShareTweetSendShare
Join us on:

Related Posts

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

ಎಲ್ಲಾ ಹೋಟೆಲ್‌ಗಳಲ್ಲಿ ಬಿಸಿ ನೀರು ಕಡ್ಡಾಯಕ್ಕೆ ಆರೋಗ್ಯ ಇಲಾಖೆ ಸಜ್ಜು

by Shwetha
August 4, 2026
0

ರಾಜ್ಯದ ಸಾರ್ವಜನಿಕರ ಆರೋಗ್ಯ ರಕ್ಷಣೆಗೆ ಆರೋಗ್ಯ ಇಲಾಖೆ ಮತ್ತೊಂದು ಮಹತ್ವದ ಕ್ರಮಕ್ಕೆ ಮುಂದಾಗಿದೆ. ಶಾಲೆಗಳ ಸುತ್ತಮುತ್ತ ಜಂಕ್ ಫುಡ್ ಮಾರಾಟಕ್ಕೆ ನಿರ್ಬಂಧ ಹೇರಿದ ಬಳಿಕ, ಇದೀಗ ರಾಜ್ಯದ...

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

ಸಂಪುಟ ವಿಸ್ತರಣೆ ಬೆನ್ನಲ್ಲೇ ಕಾಂಗ್ರೆಸ್‌ನಲ್ಲಿ ಭುಗಿಲೆದ್ದ ಅಸಮಾಧಾನದ ಕಿಚ್ಚು: ತನ್ವೀರ್ ಸೇಠ್ ಮತ್ತು ಲಕ್ಷ್ಮಿ ಹೆಬ್ಬಾಳ್ಕರ್ ಬೆಂಬಲಿಗರಿಂದ ಬೀದಿಗಿಳಿದು ಪ್ರತಿಭಟನೆ

by Shwetha
August 4, 2026
0

ಬೆಂಗಳೂರು: ರಾಜ್ಯ ಸಚಿವ ಸಂಪುಟ ವಿಸ್ತರಣೆಯ ಬೆನ್ನಲ್ಲೇ ಆಡಳಿತಾರೂಢ ಕಾಂಗ್ರೆಸ್ ಪಕ್ಷದಲ್ಲಿ ಭಿನ್ನಮತ ಸ್ಫೋಟಗೊಂಡಿದೆ. ಸಚಿವ ಸ್ಥಾನದ ಆಕಾಂಕ್ಷಿಗಳಾಗಿದ್ದ ಹಿರಿಯ ಶಾಸಕರಿಗೆ ಮಂತ್ರಿಗಿರಿ ಕೈತಪ್ಪಿದ್ದರಿಂದ ರಾಜ್ಯದ ವಿವಿಧೆಡೆ...

ಕಾವೇರಿ ವಿವಾದ: ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

ಕಾವೇರಿ ವಿವಾದ: ನೀರು ಬಿಡುಗಡೆಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ ತಮಿಳುನಾಡು

by Shwetha
August 4, 2026
0

ಕಾವೇರಿ ನದಿ ನೀರು ಹಂಚಿಕೆ ವಿವಾದ ಮತ್ತೊಮ್ಮೆ ತೀವ್ರಗೊಂಡಿದ್ದು, ತಮಿಳುನಾಡು ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿದೆ. ಜುಲೈ 30ರಂದು ಕಾವೇರಿ ನೀರು ನಿರ್ವಹಣಾ ಪ್ರಾಧಿಕಾರ (CWMA)...

ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ವೀಕ್: ಆದಿಪುರುಷ್ ತಪ್ಪು ಮರುಕಳಿಸಿದರೆ ಸುಮ್ಮನಿರಲ್ಲ- ಯಶ್ ನಟನೆಯ ರಾಮಾಯಣ ಸಿನಿಮಾಗೆ ಎದುರಾಯ್ತು ಅಗ್ನಿಪರೀಕ್ಷೆ

ರಾಮನ ಪಾತ್ರದಲ್ಲಿ ರಣಬೀರ್ ಕಪೂರ್ ವೀಕ್: ಆದಿಪುರುಷ್ ತಪ್ಪು ಮರುಕಳಿಸಿದರೆ ಸುಮ್ಮನಿರಲ್ಲ- ಯಶ್ ನಟನೆಯ ರಾಮಾಯಣ ಸಿನಿಮಾಗೆ ಎದುರಾಯ್ತು ಅಗ್ನಿಪರೀಕ್ಷೆ

by Shwetha
August 4, 2026
0

ಮುಂಬೈ: ಬಾಲಿವುಡ್ ನಲ್ಲಿ ಭಾರಿ ಸದ್ದು ಮಾಡುತ್ತಿರುವ ನಿರ್ದೇಶಕ ನಿತೇಶ್ ತಿವಾರಿ ಅವರ ಕನಸಿನ ಯೋಜನೆ ರಾಮಾಯಣ ಸಿನಿಮಾ ಬಿಡುಗಡೆಗೂ ಮುನ್ನವೇ ವಿವಾದದ ಸುಳಿಗೆ ಸಿಲುಕಿದೆ. ಬರೋಬ್ಬರಿ...

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

ಬಿಜೆಪಿಯ ಭದ್ರಕೋಟೆ ಧೂಳೀಪಟ ಮಾಡಿದ ಪ್ರಶಾಂತ್ ಕಿಶೋರ್: ಮಣ್ಣು ಮುಕ್ಕಿದ ಬಿಜೆಪಿ ಮತ್ತು ಆರ್‌ಜೆಡಿ- ಬಂಕಿಪುರ ಉಪಚುನಾವಣೆಯಲ್ಲಿ ಜನ ಸುರಾಜ್ ಪಕ್ಷಕ್ಕೆ ಭರ್ಜರಿ ವಿಜಯ

by Shwetha
August 4, 2026
0

ಪಾಟ್ನಾ: ಚುನಾವಣಾ ತಂತ್ರಜ್ಞ ಪ್ರಶಾಂತ್ ಕಿಶೋರ್ ನೇತೃತ್ವದ ಜನ ಸುರಾಜ್ ಪಕ್ಷ ಬಿಹಾರ ರಾಜಕೀಯದಲ್ಲಿ ಹೊಸ ಇತಿಹಾಸ ಬರೆದಿದೆ. ಬಿಜೆಪಿಯ ಅಭೇದ್ಯ ಕೋಟೆ ಎಂದೇ ಪರಿಗಣಿಸಲ್ಪಟ್ಟಿದ್ದ ಬಂಕಿಪುರ...

Load More

Saakshatv News

  • Home
  • About Us
  • Contact Us
  • Privacy Policy

© 2026 SaakshaTV - All Rights Reserved | Powered by Kalahamsa Infotech Pvt. ltd.

No Result
View All Result
  • Home
  • Newsbeat
  • State
    • Kalyana karnataka
    • Karavali Karnataka
    • Malenadu Karnataka
    • Mumbai Karnataka
    • Samagra karnataka
    • Hale Mysore
  • Politics
  • National
  • International
  • Crime
  • Cinema
  • Sports
  • Astrology
  • Health
  • More
    • Business
    • Asia Cup 2022
    • Marjala Manthana
    • Cooking
    • Culture
    • GALLERY
    • Saaksha Special
    • Life Style
    • TECHNOLOGY
    • Travel
    • Viral News
    • Bigg Boss 8
    • IPL 2021
    • CPL 2020
    • IPL 2020

© 2026 SaakshaTV - All Rights Reserved | Powered by Kalahamsa Infotech Pvt. ltd.

  • →
  • Telegram