ಅಮಿತಾಬ್ ಬಚ್ಚನ ಬಂಗಲೆಯಲ್ಲಿ ಬಾಡಿಗೆಗೆ ಇರುವ ‘ಪರಮಸುಂದರಿ’ : ರೆಂಟ್ ಕೇಳಿದ್ರೆ ಹುಬ್ಬೇರಿಸ್ತೀರಾ..!
ಮುಂಬೈ : ಬಾಲಿವುಡ್ ನ ಬಿಗ್ ಬಿ ಅಮಿತಾಬ್ ಬಚ್ಚನ್ ಅವರ ಐಶಾರಾಮಿ ಬಂಗಲೆಯಲ್ಲಿ ಬಾಲಿವುಡ್ ನ ಪರಮ ಸುಂದರಿ ಬಾಡಿಗೆಗೆ ಇದ್ದಾರೆ..
ಈ ಬಂಗಲೆಯಲ್ಲೇ ವಾಸವಾಗಿದ್ದಾರೆ.. ಈ ಬಾಗಲೆಯ ಬಾಡಿಗೆ ತಿಂಗಳಿಗೆ 10 ಲಕ್ಷ ರೂಪಾಯಿಯಂತೆ..
ಹೌದು, ಮುಂಬೈನಲ್ಲಿರುವ ಅಂಧೇರಿ ಬಂಗಲೆಯಲ್ಲಿ ಕೃತಿ ಸನೊನ್ ವಾಸ ಮಾಡುವ ಸಲುವಾಗಿ ರೆಂಟ್ ಗೆ ಪಡೆದುಕೊಂಡಿದ್ದಾರೆ..
ಈ ಬಂಗಲೆಯ ಮಾಲೀಕರು ಬಾಲಿವುಡ್ ಬಿಗ್ ಬಿ..
ಮೂಲಗಳ ಪ್ರಕಾರ , ನಟಿ ಕೃತಿ ಸನೊನ್ 2 ವರ್ಷದ ಅವಧಿಗೆ ಬಂಗಲೆಯನ್ನು ಬಾಡಿಗೆಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಆ ಬಂಗಲೆಗೆ ಪ್ರತಿ ತಿಂಗಳು 10 ಲಕ್ಷ ರೂ. ಕಟ್ತಾರೆ ಎಂದು ವರದಿಯಾಗಿದೆ..
2021ರ ಅಕ್ಟೋಬರ್ 16ರಿಂದ 2023ರ ಅಕ್ಟೋಬರ್ 15ರವರೆಗೆ ಅಂದರೆ 2 ವರ್ಷದ ಅವಧಿಗೆ ಬಾಡಿಗೆ ಒಪ್ಪಂದ ಮಾಡಿಕೊಂಡಿದ್ದಾರೆ.
ಬಂಗಲೆಯನ್ನು ಬಾಡಿಗೆಗೆ ಪಡೆದಿರುವುದಕ್ಕೆ ನಟಿ 60 ಲಕ್ಷ ರೂ. ಭದ್ರತಾ ಠೇವಣಿ ಕೂಡ ನೀಡಿದ್ದಾರೆ.
ಪಶ್ಚಿಮ ಅಂಧೇರಿಯ ಲೋಖಂಡವಾಲಾ ರಸ್ತೆಯಲ್ಲಿನ ಅಟ್ಲಾಂಟಿಸ್ ಕಟ್ಟಡದ 27 ಮತ್ತು 28ನೇ ಮಹಡಿಯಲ್ಲಿ ಈ ಬಂಗಲೆ ಇದೆ.
ನಾಲ್ಕು ಕಾರು ಪಾರ್ಕಿಂಗ್ ಮಾಡುವ ವ್ಯವಸ್ಥೆ ಕೂಡ ಇದೆ.








