‘ಊ… ಅಂಟಾವಾ ಮಾವ’ ಅಂದ ಸ್ಯಾಮ್ ವಿರುದ್ಧ ತಿರುಗಿ ಬಿದ್ದ ಪುರುಷರು..!
ದೇಶದಲ್ಲಿ ಸದ್ಯ ‘ಪುಷ್ಪ’ದ್ದೇ ಹವಾ. ಅಲ್ಲು ಅರ್ಜುನ್ ದೇ ಮೇನಿಯಾ… ಪುಷ್ಪ ಸಿನಿಮಾದ ಹಾಡುಗಳಂತೂ ಯೂಟ್ಯೂಬ್ ಗೆ ಬೆಂಕಿ ಹಚ್ಚಿವೆ.. ಅದ್ರಲ್ಲೂ ಕ್ಯೂಟ್ ಬೆಡಗಿ ಸಮಂತಾ ಫಾರ್ ದ ಫಸ್ಟ್ ಟೈಮ್ ಹಾಟ್ ಐಟಮ್ ಸಾಂಗ್ ಗೆ ಹೆಜ್ಜೆ ಹಾಕಿ ಯುವಕರ ನಿದ್ದೆ ಗೆಡಿಸಿದ್ದಾರೆ.. ‘ಊ.. ಅಂಟಾವಾ ಮಾವ ಊಹೂ ಅಂಟಾವಾ’ ಅಂತ ಅಲ್ಲು ಜೊತೆ ಸ್ಟೆಪ್ ಹಾಕಿದ್ದಾರೆ.. ಈ ಹಾಡು ಸಿಕ್ಕಾಪಟ್ಟೆ ಸೌಂಡ್ ಏನೋ ಮಾಡ್ತಿದೆ.. ಆದ್ರೆ ಪುರುಷರ ಸಂಘ ಸಮಂತಾ ಹಾಗೂ ಸಿನಿಮಾ ತಂಡದ ವಿರುದ್ಧ ತಿರುಗಿ ಬಿದ್ದಿದೆ.. ಹಾಡಿನ ವಿರುದ್ಧ , ಸಮಂತಾ ವಿರುದ್ಧ ಕೇಸ್ ದಾಖಲು ಮಾಡಿದೆ..
ಪುರುಷರ ಸಂಘವು ಆಂಧ್ರಪ್ರದೇಶದ ನ್ಯಾಯಾಲಯದಲ್ಲಿ ಈ ಹಾಡನ್ನ ನಿಷೇಧಿಸಿಬೇಕೆಂದು ಒತ್ತಾಯಿಸಿದೆ.. ಆದ್ರೆ ಈ ಪ್ರಕರಣ ಇನ್ನೂ ನ್ಯಾಯಾಲಯದಲ್ಲಿ ಇತ್ಯರ್ಥವಾಗಬೇಕಿದೆ.. ಸಾಹಿತ್ಯ ಹಾಗೂ ಕೆಲ ದೃಶ್ಯಗಳಿಂದಾಗಿ ಈ ಹಾಡು ಈಗ ವಿವಾದಕ್ಕೆ ಸಿಲುಕಿದೆ.. ಸುಕುಮಾರ್ ನಿರ್ದೇಶಿಸಿ ಅಲ್ಲು ಅರ್ಜುನ್ ಅಭಿನಯಿಸಿರುವ ಪುಷ್ಪ ಸಿನಿಮಾ ಇದೇ ಡಿಸೆಂಬರ್ 17 ರಂದು ರಿಲೀಸ್ ಆಗಬೇಕಿದೆ.. ಈಗಾಗಲೇ ಪುಷ್ಪ ಜಾತ್ರೆ ಎಲ್ಲೆಡೆ ಶುರುವಾಗಿದೆ.. ಆದ್ರೆ ಈ ಸಂಭ್ರಮದ ನಡುವೆ ಹಾಡಿನ ಬಗ್ಗೆ ವಿವಾದವೆದ್ದಿರುವುದು ಸಿನಿಮಾತಂಡಕ್ಕೆ ಕೊಂಚ ತಲೆನೋವಿನ ಸಂಗತಿಯೇ.. ಬಹು ಭಾಷೆಗಳಲ್ಲಿ ಬಿಡುಗಡೆಯಾಗಿರುವ ಈ ಹಾಡನ್ನು ದೇವಿ ಶ್ರೀ ಪ್ರಸಾದ್ ರಚಿಸಿದ್ದು, ಸಾಹಿತ್ಯವನ್ನು ವಿವೇಕ ಮತ್ತು ಚಂದ್ರಬೋಸ್ ಬರೆದಿದ್ದಾರೆ.
ಹಾಲಿ ವಿಶ್ವ ಸುಂದರಿಗೆ ಅಭಿನಂದಿಸಿದ ಮಾಜಿ ವಿಶ್ವ ಸುಂದರಿಯರು
ಅದಿತ್ಯ ಮ್ಯೂಸಿಕ್ ಯೂಟ್ಯೂಬ್ ಚಾನೆಲ್‌ನಲ್ಲಿ ‘ಊ ಅಂತಾವಾ ಮಾವಾ.. ಊ ಅಂಟಾವಾ ಮಾವಾ ಎಂಬ ಸಾಲಿನ ಲಿರಿಕಲ್ ಹಾಡು ಬಿಡುಗಡೆಯಾಗಿದ್ದು, ಯೂಟ್ಯೂಬ್‌ನಲ್ಲಿ ಧೂಳೆಬ್ಬಿಸಿದೆ. ಬಿಡುಗಡೆಯಾದ ಕೆಲವೇ ಗಂಟೆಗಳಲ್ಲಿ 2 ಮಿಲಿಯನ್‌ಗೂ ಹೆಚ್ಚು ವೀವ್ಸ್ ಪಡೆದು ಕೊಮಡಿದೆ.. ಈ ಸಿನಿಮಾವನ್ನ ಮೈತ್ರಿ ಮೂವೀ ಮೇಕರ್ಸ್ ನಿರ್ಮಿಸಿದೆ. ತೆಲುಗು, ಕನ್ನಡ, ಮಲಯಾಳಂ, ತಮಿಳು ಮತ್ತೆ ಹಿಂದಿಯಲ್ಲಿ ಸಿನಿಮಾ ಬಿಡುಗಡೆಯಾಗಲಿದೆ. ಈ ಸಿನಿಮಾದಲ್ಲಿ ರಶ್ಮಿಕಾ ಮಂದಣ್ಣ ನಾಯಕಿಯಾಗಿದ್ದಾರೆ.. ಉಳಿದಂತೆ ಡಾಲಿ ಧನಂಜಯ್ ಸೇರಿದಂತೆ ದೊಡ್ಡ ತಾರಾಬಳಗವಿದೆ..