KRS | ಕೆಆರ್ ಎಸ್ ಡ್ಯಾಂ ಸಂಪೂರ್ಣ ಭರ್ತಿಗೆ ಕ್ಷಣಗಣನೆ
ಮಂಡ್ಯ : ಕೆಆರ್ ಎಸ್ ಡ್ಯಾಂ ಸಂಪೂರ್ಣ ಭರ್ತಿಗೆ ಕ್ಷಣಗಣನೆ ಶುರುವಾಗಿದ್ದು, ಇನ್ನು 1 ಟಿಎಂಸಿ ನೀರು ತುಂಬಿದ್ರೆ ಡ್ಯಾಂ ಸಂಪೂರ್ಣವಾಗಿ ಭರ್ತಿಯಾಗಲಿದೆ.
ರಾಜ್ಯದಲ್ಲಿ ಕಳೆದ ಒಂದು ವಾರದಿಂದ ಭಾರಿ ಮಳೆ ಸುರಿಯುತ್ತಿದೆ.
ಪರಿಣಾಮ ಕೆಆರ್ ಎಸ್ ಡ್ಯಾಂ ಗೆ ಸಾಕಷ್ಟು ಪ್ರಮಾಣದಲ್ಲಿ ನೀರು ಹರಿದು ಬರುತ್ತಿದೆ.

ಕೆಆರ್‌ಎಸ್ ಡ್ಯಾಂನಲ್ಲಿ 124.80 ಅಡಿ ಸಂಗ್ರಹ ಸಾಮರ್ಥ್ಯವಿದ್ದು, ಈಗಾಗಲೇ ಡ್ಯಾಂ 124.00 ಅಡಿ ಭರ್ತಿಯಾಗಿದೆ.
ಡ್ಯಾಂಗೆ 65,635 ಕ್ಯೂಸೆಕ್ ಒಳಹರಿವು ಮತ್ತು 46,518 ಕ್ಯೂಸೆಕ್ ನೀರು ಹೊರಹರಿವು ಇದೆ.
ಡ್ಯಾಂನಲ್ಲಿ 49.452 ಟಿಎಂಸಿ ಸಾಂದ್ರತೆ ಇದೆ. ಸದ್ಯ 48.336 ಟಿಎಂಸಿ ಸಂಗ್ರಹವಾಗಿದೆ ಎಂದು ತಿಳಿದು ಬಂದಿದೆ.