ಮಂಡ್ಯ: ಕೊಡಗಿನಲ್ಲಿ ಮಳೆ ಆರ್ಭಟ ಕಡಿಮೆಯಾದ ಹಿನ್ನೆಲೆ ಕೆಆರ್ ಎಸ್ ಜಲಾಶಯದಲ್ಲೂ ಒಳಹರಿವು ತಗ್ಗಿದೆ. 77ಸಾವಿರದಿಂದ 70 ಸಾವಿರಕ್ಕೆ ಒಳಹರಿವಿನ ಪ್ರಮಾಣದಲ್ಲಿ ಇಳಿಳಿಕೆಯಾಗಿರುವುದು ಕಂಡುಬಂದಿದೆ. ಜಲಾಶಯದ ಹೊರ ಹರಿವಿನಲ್ಲಿ ಗಣನೀಯವಾಗಿ ಇಳಿಕೆಯಾಗಿದೆ. 74 ಸಾವಿರ ಕ್ಯೂಸೆಕ್ ನಿಂದ 27 ಸಾವಿರ ಕ್ಯೂಸೆಕ್ ಗೆ ಹೊರ ಹರಿವಿನ ಪ್ರಮಾಣದಲ್ಲಿ ಕಡಿಮೆಯಾಗಿರುವ ಪರಿಣಾಮ ನದಿ ತೀರದ ಜನರಲ್ಲಿ ಪ್ರವಾಹದ ಆತಂಕ ಕಡಿಮೆಯಾಗಿದೆ. ಆದರೂ ಸಹ ಮುಂಜಾಗ್ರತಾ ಕ್ರಮವಾಗಿ ನದಿಯತ್ತ ಸುಳಿಯಂತೆ ಜನರಿಗೆ ಜಿಲ್ಲಾಡಳಿತ ಎಚ್ಚರಿಕೆ ನೀಡಿದೆ.
ರಾಜೀನಾಮೆ ಹಾದಿಯಲ್ಲಿ ಮತ್ತಷ್ಟು ಎಐಎಡಿಎಂಕೆ ಶಾಸಕರು..!
ತಮಿಳುನಾಡು ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿರುವ ಎಐಎಡಿಎಂಕೆ ಶಾಸಕರ ರಾಜೀನಾಮೆ ಪ್ರಕರಣ ಮತ್ತಷ್ಟು ಗಂಭೀರ ಸ್ವರೂಪ ಪಡೆದುಕೊಳ್ಳುತ್ತಿದೆ. ಈಗಾಗಲೇ ಮೂವರು ಎಐಎಡಿಎಂಕೆ ಶಾಸಕರು ತಮ್ಮ ಸ್ಥಾನಕ್ಕೆ ರಾಜೀನಾಮೆ...








