ಕಳೆದ ವರ್ಷಕ್ಕಿಂತ 10 ಅಡಿ ಕುಸಿತ ಕೆಆರ್ ಎಸ್ ನೀರಿನ ಮಟ್ಟ KRS
ಮಂಡ್ಯ : ಈ ವರ್ಷ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗದ ಹಿನ್ನೆಲೆಯಲ್ಲಿ ಕೆಆರ್ ಎಸ್ ಜಲಾಶಯದ ನೀರಿನ ಮಟ್ಟ ಕಳೆದ ವರ್ಷಕ್ಕಿಂತ 10 ಅಡಿ ಕುಸಿತ ಕಂಡಿದೆ ಎಂದು ವರದಿಯಾಗಿದೆ.
ಕೊಡಗು, ಹಾಸನ, ಮೈಸೂರು, ಮಂಡ್ಯ ಜಿಲ್ಲೆಗಳಿಗೆ ಮುಂಗಾರು ಪ್ರವೇಶ ಮಾಡಿ 15 ದಿನಗಳು ಕಳೆದಿದೆ.
ಆದ್ರೆ ಈವರೆಗೂ ನಿರೀಕ್ಷಿತ ಮಟ್ಟದಲ್ಲಿ ಮಳೆಯಾಗಿಲ್ಲ. ಈ ಕಾರಣಕ್ಕಾಗಿ ಕೆಆರ್ ಎಸ್ ಜಲಾಶಯ ಕಳೆದ ವರ್ಷಕ್ಕಿಂತ ಈ ವರ್ಷ 10 ಅಡಿಯಷ್ಟು ನೀರಿನ ಮಟ್ಟ ಕಡಿಮೆಯಾಗಿದೆ.
124.80 ಅಡಿ ಸಾಮಥ್ರ್ಯವಿರುವ ಕೆರ್ ಎಸ್ ಜಲಾಶಯ ಸದ್ಯ 82.54 ಅಡಿಯಷ್ಟು ಇದೆ. ಇದೇ ವೇಳೆ ಕಳೆದ ವರ್ಷ 92 ಅಡಿಯಷ್ಟು ಭರ್ತಿಯಾಗಿತ್ತು.
ಒಂದು ಮುಂದಿನ ದಿನಗಳಲ್ಲೂ ಸಹ ಮುಂಗಾರು ನಿರೀಕ್ಷಿತ ಪ್ರಮಾಣದಲ್ಲಿ ಸುರಿಯಲಿಲ್ಲ ಎಂದರೆ ಕೆಆರ್ ಎಸ್ ಅಣೆಕಟ್ಟೆಯಲ್ಲಿ ಮತ್ತಷ್ಟು ಅಡಿಗಳು ನೀರು ಕುಸಿತ ಕಾಣಲಿದೆ.