ಗುಲಾಮಗಿರಿ ಕಾಂಗ್ರೆಸ್ ನವರಿಗೆ ಮಾತ್ರ ಸೀಮಿತ, ಬಿಜೆಪಿ ಅಲ್ಲ : ಈಶ್ವರಪ್ಪ
ಬೆಳಗಾವಿ : ರಾಜ್ಯ ಬಿಜೆಪಿ ಸಂಸದರು ಕೇಂದ್ರದ ಗುಲಾಮರಂತೆ ವರ್ತಿನೆ ಮಾಡುತ್ತಿದ್ದಾರೆ ಎಂಬ ಸಿದ್ದರಾಮಯ್ಯ ಹೇಳಿಕೆಗೆ ರಾಜ್ಯ ಬಿಜೆಪಿ ನಾಯಕರ ಪಿತ್ತನೆತ್ತಿಗೇರುವಂತೆ ಮಾಡಿದೆ. ಕಾಂಗ್ರೆಸ್ ಮುಖಂಡರಿಗೆ ಸೋನಿಯಾ ಗಾಂಧಿ, ರಾಹುಲ್ ಗಾಂಧಿ ಗುಲಾಮರಾಗಿ ಆ ಪದ ತಲೆಯಲ್ಲಿ ಉಳಿದುಕೊಂಡಿದೆ. ಗುಲಾಮಗಿರಿ ಕಾಂಗ್ರೆಸ್ ನವರಿಗೆ ಮಾತ್ರ ಸೀಮಿತ, ಬಿಜೆಪಿಗೆ ಅಲ್ಲ ಎಂದು ಸಿದ್ದರಾಮಯ್ಯರಿಗೆ ಈಶ್ವರಪ್ಪ ಟಾಂಗ್ ನೀಡಿದ್ದಾರೆ.
ಬೆಳಗಾವಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಈಶ್ವರಪ್ಪ, ಸಿಡಿ ಪ್ರಕರಣದ ಕುರಿತು ಪ್ರತಿಕ್ರಿಯೆ ನೀಡಿ, ಈ ಕೇಸ್ ನಲ್ಲಿ ಡಿ.ಕೆ.ಶಿವಕುಮಾರ್ ತಪ್ಪಿತಸ್ಥರು ಅನ್ನುವ ಬಗ್ಗೆ ಸಿದ್ದರಾಮಯ್ಯನವರೇ ಏನೂ ಹೇಳುತ್ತಿಲ್ಲ. ಹೀಗಿರುವಾಗ ನಾನು ಏನಂತ ಹೇಳಲಿ. ಸಿಡಿ ವಿಚಾರದ ಬಗ್ಗೆ ನಾನು ಏನೂ ಹೇಳುವುದಿಲ್ಲ ಎಂದು ಹೇಳಿದರು.
ಇನ್ನು ಕಾಂಗ್ರೆಸ್ ನಲ್ಲಿ ಎರಡು ಬಣಗಳಿದ್ದು, ಒಂದು ಸಿದ್ದರಾಮಯ್ಯ ಬಣ, ಮತ್ತೊಂದು ಡಿ.ಕೆ.ಶಿವಕುಮಾರ್ ಬಣ. ಇವರಿಬ್ಬರ ಮಧ್ಯೆ ಗುದ್ದಾಟ ನಡೆಯುತ್ತಿರೋದು ಮೈಸೂರು ಮೇಯರ್ ಚುನಾವಣೆಯಲ್ಲಿ ಬಹಿರಂಗವಾಗಿ ಬೆತ್ತಲಾಗಿದೆ. ಈಗ ಬೈ ಎಲೆಕ್ಷನ್ ನಿಂದಾಗಿ ನಾವು ಒಂದಾಗಿದ್ದೇವೆ ಎಂದು ತೇಪೆ ಹಾಕುತ್ತಿದ್ದಾರೆ, ಅವರು ಯಾವುದೇ ಕಾರಣಕ್ಕೂ ಒಂದಾಗುವುದಿಲ್ಲ ಎಂದು ವಾಗ್ದಾಳಿ ನಡೆಸಿದರು.
