KSRTC Bumper Offerಹುಬ್ವಳ್ಳಿ:ನಾಡಿನೆಲ್ಲಡೆ ಬೆಳಕಿನ ಹಬ್ಬ ದೀಪಾವಳಿ ಸ್ವಾಗತಿಸಲು ಭರ್ಜರಿಯಾಗಿ ತಯಾರಿ ನಡೆಯುತ್ತಿದ್ದು. ಸರಕಾರಿ ಬಸ್ , ರೈಲು ಓಡಾಟಗಳ ಸಂಖ್ಯೆ ಹೆಚ್ಚಿಸಲಾಗಿದೆ.
ಹಬ್ಬದ ಪ್ರಯುಕ್ತ ಪ್ರಯಾಣಿಕರ ಅನುಕೂಲಕ್ಕಾಗಿ ಬಸ್ ಗಳ ಸಂಖ್ಯೆ ಹೆಚ್ಚಿಸಲಾಗಿದ್ದು. ಉತ್ತರ ಕರ್ನಾಟಕ ಭಾಗದ ಮಂದಿಗೆ ಓಡಾಟ ಸುಲಭವಾಗಿಸಲು ಹೆಚ್ಚುವರಿ ಬಸ್ ಬಿಡಲಾಗಿದೆ. ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವತಿಯಿಂದ ಓಡಾಟ ನಡೆಸಲಾಗುವ ಹೆಚ್ಚುವರಿ ಬಸ್ ಗಳ (KSRTC Deepavali Extra Bus) ವಿವರ ಇಲ್ಲಿದೆ
ಹಬ್ಬದ ಪ್ರಯುಕ್ತ ಬಂದಿರುವ ಸಾಲು ಸಾಲು ರಜೆಗಳಿಂದಾಗಿ ಪ್ರಯಾಣಿಕರ ಅನುಕೂಲಕ್ಕಾಗಿ ಅಕ್ಟೋಬರ್ 21 ಹಾಗೂ 22 ರಂದು ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪುಣೆ, ಮುಂಬಯಿ ಮತ್ತು ರಾಜ್ಯದ ಹಾಗೂ ಅಂತರರಾಜ್ಯಗಳ ಪ್ರಮುಖ ನಗರಗಳಿಂದ ರಾಜ್ಯದ ವಿವಿಧ ಪ್ರದೇಶಗಳಿಗೆ ಊರುಗಳಿಗೆ ಹಬ್ಬಕ್ಕಾಗಿ ತೆರಳುವ ಸಾರ್ವಜನಿಕ ಪ್ರಯಾಣಿಕರ ಅನುಕೂಲಕ್ಕಾಗಿ ವಿಶೇಷ ಬಸ್ ಸೇವೆ ಒದಗಿಸಿಕೊಡಲಾಗಿದೆ.
ವಾಯವ್ಯ ಕರ್ನಾಟಕ ರಸ್ತೆ ಸಾರಿಗೆ ಸಂಸ್ಥೆಯ ವ್ಯಾಪ್ತಿಯ ಹುಬ್ಬಳ್ಳಿ, ಧಾರವಾಡ, ಗದಗ, ಬೆಳಗಾವಿ, ಚಿಕ್ಕೋಡಿ, ಉತ್ತರಕನ್ನಡ, ಹಾವೇರಿ ಮತ್ತು ಬಾಗಲಕೋಟೆ ವಿಭಾಗಗಳ ಪ್ರಮುಖ ಬಸ್ ನಿಲ್ದಾಣಗಳಿಂದ ಒಟ್ಟು 500 ಕ್ಕಿಂತ ಅಧಿಕ ಹೆಚ್ಚುವರಿ ವಿಶೇಷ ಸಾರಿಗೆ ಬಸ್ ಗಳ ಕಾರ್ಯಾಚರಣೆ ಗೊಳಿಸಲಾಗುತ್ತಿದೆ.
ಹಬ್ಬ ಮುಗಿದ ನಂತರ ತಮ್ಮ ಕರ್ತವ್ಯದ ಸ್ಥಳಗಳಿಗೆ ತೆರಳುವವರ ಸಂಖ್ಯೆ ಹೆಚ್ಚಿರುತ್ತದೆ. ಹೀಗಾಗಿ ಬೆಂಗಳೂರು, ಮಂಗಳೂರು, ಹೈದರಾಬಾದ್, ಪಣಜಿ, ಪೂಣೆ, ಮುಂಬಯಿ ಸೇರಿ ಇತರ ನಗರಗಳಿಗೆ ತೆರಳುವ ಪ್ರಯಾಣಿಕರಿಗಾಗಿ ಅಕ್ಟೋಬರ್ 26 ರಿಂದ 30ರ ವರೆಗೆ ಹೆಚ್ಚುವರಿ ಬಸ್ ಓಡಾಟ ನಡೆಸಲು ಸಾರಿಗೆ ಇಲಾಖೆಯು ನಿರ್ಧರಿಸಿದೆ. ಈ ಅವಧಿಯಲ್ಲಿ ಸಾರ್ವಜನಿಕರ ಬೇಡಿಕೆಗೆ ಅನುಗುಣವಾಗಿ ಬಸ್ ಸಂಖ್ಯೆ ಹೆಚ್ಚಿಸಲು ಇಲಾಖೆಯು ಮುಂದಾಗಿದೆ.
ಸಾರ್ವಜನಿಕರು ಸಂಸ್ಥೆಯ ಮುಂಗಡ ಟಿಕೆಟ್ ಬುಕ್ಕಿಂಗ್ ಗಾಗಿ KSRTC ಸಂಸ್ಥೆಯ ಅಧಿಕೃತ ವೆಬ್ಸೈಟ್ನಲ್ಲಿ ಬುಕ್ ಮಾಡಬಹುದಾಗಿದೆ.
ಮುಂಗಡ ಟಿಕೆಟ್ ಬುಕ್ KSRTC Mobile App ನಲ್ಲಿ ಮುಂಗಡವಾಗಿ ವೇಗದೂತ ಹಾಗೂ ಪ್ರತಿಷ್ಠಿತ ಸಾರಿಗೆಗಳಲ್ಲಿ ಟಿಕೆಟ್ ಗಳನ್ನು ಬುಕ್ಕಿಂಗ್ ಮಾಡಬಹುದಾಗಿದೆ.
KSRTC Bumper Offer- Bumper offer for passengers by KSRTC for festival