Koppal: ಕನಕದಾಸ ವೃತಕ್ಕೆ ಬಸ್ ಡಿಕ್ಕಿ | ತಪ್ಪಿದ ಭಾರಿ ದುರಂತ 

1 min read
Koppal Saaksha Tv

ಕನಕದಾಸ ವೃತಕ್ಕೆ ಬಸ್ ಡಿಕ್ಕಿ | ತಪ್ಪಿದ ಭಾರಿ ದುರಂತ

ಕೊಪ್ಪಳ: ಚಾಲಕನ ನಿಯಂತ್ರಣ ತಪ್ಪಿ KSRTC ಬಸ್ ಕನಕದಾಸ ವೃತಕ್ಕೆ ಡಿಕ್ಕಿ ಹೊಡೆದ ಘಟನೆ ಕೊಪ್ಪಳದಲ್ಲಿ ನಡೆದಿದೆ.

ತಡರಾತ್ರಿ ಘಟನೆ ಸಂಭವಿಸಿದ್ದು, ಬಸ್ ಗೆ ಬೈಕ್ ಸವಾರ ಅಡ್ಡಲಾಗಿ ಬಂದ ಪರಿಣಾಮ ಘಟನೆ ಸಂಭವಿಸಿದೆ. ಅಪಘಾತದಲ್ಲಿ ಕನಕದಾಸ ವೃತ್ತ ಸಂಪೂರ್ಣ ಹಾನಿಯಾಗಿದ್ದು, ಯಾವುದೆ ಪ್ರಾಣಾಪಾಯ ಸಂಭವಿಸಿಲ್ಲ. ಅಲ್ಲದೇ ಅದೃಷ್ಟ ವಶಾತ್ ಎದುರಿಗೆ ಇದ್ದ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ಬಸ್ ಡಿಕ್ಕಿಯಾಗುವುದನ್ನು ತಪ್ಪಿಸಿದ ಚಾಲಕ ಸಂಭಾವ್ಯ ಅಪಘಾತವನ್ನು ತಡೆದಿದ್ದಾರೆ.

ರಾಯಚೂರಿನಿಂದ ಕೊಪ್ಪಳಕ್ಕೆ ಹೊರಟಿದ್ದ ಸಾರಿಗೆ ಸಂಸ್ಥೆಯ ವಾಹನ ಮಧ್ಯರಾತ್ರಿ 2.30ಕ್ಕೆ ಗಂಗಾವತಿಗೆ ಬಂದಾಗ ಈ ಘಟನೆ ಸಂಭವಿಸಿದೆ. ಘಟನೆಯಲ್ಲಿ ಕೊಪ್ಪಳ ಘಟಕದ ಚಾಲಕ ವೆಂಕಪ್ಪ ಸೇರಿದಂತೆ ನಾಲ್ವರು ಪ್ರಯಾಣಿಕರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಗಾಯಾಳುಗಳಿಗೆ ಇಲ್ಲಿನ ಸರ್ಕಾರಿ ಉಪ ವಿಭಾಗ ಆಸ್ಪತ್ರೆಯಲ್ಲಿ ಚಿಕಿತ್ಸೆ ಕೊಡಲಾಗಿದೆ. ಸಾರಿಗೆ ವಾಹನದ ಮುಂಭಾಗ ಸಂಪೂರ್ಣ ನಜ್ಜುಗುಜ್ಜಾಗಿದೆ.

ಒಂದು ವೇಳೆ ವಿದ್ಯುತ್ ಟ್ರಾನ್ಸ್ ಫಾರ್ಮರ್ ಗೆ ವಾಹನ ಡಿಕ್ಕಿಯಾಗಿದ್ದರೆ ಸಾವು-ನೋವು ಸಂಭವಿಸುವ ಸಾಧ್ಯತೆ ಇತ್ತು ಎಂದು ಸಾರಿಗೆ ಸಂಸ್ಥೆಯ ಅಧಿಕಾರಿಗಳು ತಿಳಿಸಿದ್ದಾರೆ.

Leave a Reply

Your email address will not be published.

YOU MUST READ

Copyright © All rights reserved | SaakshaTV | JustInit DigiTech Pvt Ltd