ಇನ್ಮುಂದೆ ಕೆಎಸ್ ಆರ್ ಟಿಸಿ ನಮ್ದಲ್ಲ : ಕೆಎಸ್ ಆರ್ ಟಿಸಿ ಕೇರಳ ಪಾಲಾಗಿದ್ದೇಗೆ..?
ಬೆಂಗಳೂರು : ಇನ್ಮುಂದೆ ಕೆಎಸ್ ಆರ್ ಟಿಸಿ ನಮ್ದಲ್ಲ..! ಕೆಎಸ್‍ಆರ್ ಟಿಸಿ, ಲೋಗೋ ಮತ್ತು ಆನವಂಡಿ ಎಂಬ ಸಂಕ್ಷಿಪ್ತ ರೂಪ ಈಗ ದೇವರ ನಾಡು ಕೇರಳ ಪಾಲಾಗಿದೆ.
ಹಲವಾರು ವರ್ಷಗಳ ಕಾನೂನು ಹೋರಾಟಗಳ ಬಳಿಕ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಕೇರಳ ರಾಜ್ಯ ರಸ್ತೆ ಸಾರಿಗೆ ನಿಗಮಗಳೆರಡೂ ಬಳಸುತ್ತಿದ್ದ ಕೆಎಸ್‍ಆರ್‍ಟಿಸಿ ಟ್ರೇಡ್ ಮಾರ್ಕ್ ಅನ್ನು ಇನ್ಮುಂದೆ ಕೇರಳದಲ್ಲಿ ಮಾತ್ರ ಬಳಸಬಹುದು ಅನ್ನೊ ಆದೇಶ ಹೊರಬಿದ್ದಿದೆ.
ಎರಡೂ ರಾಜ್ಯಗಳು ಹಲವಾರು ವರ್ಷಗಳಿಂದ ಸಾರ್ವಜನಿಕ ಸಾರಿಗೆ ಸೇವೆಗಳಲ್ಲಿ ಕೆಎಸ್‍ಆರ್ ಟಿಸಿ ಹೆಸರನ್ನು ಬಳಸುತ್ತಿವೆ. ಆದರೆ 2014 ರಲ್ಲಿ ಕರ್ನಾಟಕವು ಕೆಎಸ್ ಆರ್ ಟಿಸಿ ಕರ್ನಾಟಕಕ್ಕೆ ಸೇರಿದ್ದು, ಅದನ್ನು ಕೇರಳ ಸಾರಿಗೆಯಿಂದ ಬಳಸಬಾರದು ಎಂದು ನೋಟಿಸ್ ನೀಡಿತ್ತು.
ಆಗ ಕೇರಳ ಸಾರಿಗೆಯ ಸಿಎಂಡಿ ಆಗಿದ್ದ ದಿವಂಗತ ಆಂಥೋನಿ ಚಾಕೊ ಅವರು ಕೇರಳಕ್ಕೆ ಕೇಂದ್ರ ಸರ್ಕಾರದ ಅಡಿಯಲ್ಲಿ ಟ್ರೇಡ್ ಮಾರ್ಕ್ ಗಳ ರಿಜಿಸ್ಟ್ರಾರ್‍ಗೆ ಅರ್ಜಿ ಸಲ್ಲಿಸಿದರು. ನಂತರ ಹಲವಾರು ವರ್ಷಗಳ ಕಾನೂನು ಹೋರಾಟಗಳು ನಡೆದವು.
ಅಂತಿಮವಾಗಿ, ಟ್ರೇಡ್ ಮಾರ್ಕ್ ಗಳ ಕಾಯ್ದೆ 1999 ರ ಅಡಿಯಲ್ಲಿ, ಕೆಎಸ್‍ಆರ್ ಟಿಸಿ ಟ್ರೇಡ್ ಮಾರ್ಕ್ ಮತ್ತು ಆನವಂಡಿ ಎಂಬ ಸಂಕ್ಷೇಪಣವನ್ನು ಕೇರಳ ರಸ್ತೆ ಸಾರಿಗೆ ನಿಗಮಕ್ಕೆ ಟ್ರೇಡ್ ಮಾರ್ಕ್ ಅಥಾರಿಟಿ ಆಫ್ ಇಂಡಿಯಾ ಮಂಜೂರು ಮಾಡಿದೆ.
ಅಂದಹಾಗೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ನಿಗಮ ಹಾಗೂ ಕೇರಳ ರಸ್ತೆ ಸಾರಿಗೆ ನಿಗಮ ಇವೆರಡೂ ಕೆಎಸ್‍ಆರ್‍ಟಿಸಿ ಟ್ರೇಡ್ ಮಾರ್ಕ್ ಬಳಸಿಕೊಳ್ಳುತ್ತಿರುವ ಬಗ್ಗೆ ಎರಡೂ ರಾಜ್ಯಗಳ ನಡುವೆ ಹಲವು ವರ್ಷಗಳಿಂದ ವಿವಾದ ತಲೆದೋರಿತ್ತು.
ಆನ್‍ಲೈನ್ ಮೂಲಕ ಕೇರಳ ರಸ್ತೆ ಸಾರಿಗೆ ನಿಗಮದ ಬಸ್ ಟಿಕೆಟ್ ಕಾದಿರಿಸುವವರಿಗೆ ಕರ್ನಾಟಕದ ಕೆಎಸ್‍ಆರ್‍ಟಿಸಿ ಬಸ್ ಸೇವೆಯ ವಿವರಗಳು ಲಭ್ಯವಾಗುತ್ತಿದ್ದು, ಗೊಂದಲಕ್ಕೆ ಕಾರಣವಾಗುತ್ತಿದ್ದುದಾಗಿ ಕೇರಳದ ಆಕ್ಷೇಪವಾಗಿತ್ತು.
ಕರ್ನಾಟಕ 2014ರಲ್ಲಿ ಕೇಂದ್ರ ಟ್ರೇಡ್ ಮಾರ್ಕ್ ನೋಂದಣಿ ಸಂಸ್ಥೆಯ ಮೆಟ್ಟಲೇರಿ ಕೆಎಸ್‍ಆರ್‍ಟಿಸಿ ಎಂಬ ಟ್ರೇಡ್‍ಮಾರ್ಕ್ ಅನ್ನು ತಾನು ಮಾತ್ರವೇ ಬಳಸಲು ಅನುಮತಿ ನೀಡಬೇಕೆಂದು ಮನವಿ ಸಲ್ಲಿಸಿತ್ತು. ಇದಕ್ಕೆ ಪ್ರತಿಯಾಗಿ ಕೇರಳವು ಪ್ರತಿದೂರು ಸಲ್ಲಿಸಿದ್ದುದು ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿತ್ತು.
ಅಲ್ಲದೇ 1937ರಲ್ಲಿ ತಿರುವಾಂಕೂರು ರಾಜಮನೆತನವು ಸಾರ್ವಜನಿಕ ರಸ್ತೆ ಸಾರಿಗೆ ಸಂಸ್ಥೆಯನ್ನು ಆರಂಭಿಸಿತ್ತು. ಕೇರಳ ರಾಜ್ಯ ರೂಪುಗೊಂಡ ಬಳಿಕ 1965ರಲ್ಲಿ ಅದಕ್ಕೆ ಕೆಎಸ್‍ಆರ್‍ಟಿಸಿ ಎಂದು ನಾಮಕರಣ ಮಾಡಲಾಯಿತು.
ಕರ್ನಾಟಕವು 1973ರಿಂದ ತನ್ನ ಸಾರ್ವಜನಿಕ ರಸ್ತೆ ಸಾರಿಗೆ ಸಂಸ್ಥೆಗೆ ಕೆಎಸ್‍ಆರ್‍ಟಿಸಿ ಎಂಬ ಟ್ರೇಡ್‍ಮಾರ್ಕ್ ಬಳಸಲು ಆರಂಭಿಸಿದೆ ಎಂದು ಟ್ರೇಡ್‍ಮಾರ್ಕ್ ನೋಂದಣಿ ಸಂಸ್ಥೆಗೆ ಮನವರಿಕೆ ಮಾಡಿಕೊಟ್ಟು ಕಾನೂನು ಸಮರದಲ್ಲಿ ಯಶಸ್ವಿಯಾಗಿದೆ.
ಅಂತಿಮವಾಗಿ ಏಳು ವರ್ಷಗಳ ಕಾನೂನು ಹೋರಾಟದಲ್ಲಿ ಕೊನೆಗೆ ಕೆಎಸ್ ಆರ್ ಟಿಸಿ ಕರ್ನಾಟಕದ ಕೈತಪ್ಪಿ, ಕೇರಳ ಪಾಲಾಗಿದೆ.