ಮಹಾರಾಷ್ಟ್ರ ಮೊಹರಿರುವ ಟಿಕೆಟ್ ನೀಡಿ KSRTC ಯಡವಟ್ಟು
ಕರ್ನಾಟಕದ ವಾಯುವ್ಯ ಸಾರಿಗೆ ಸಂಸ್ಥೆಯ ಬಸ್ ಅಲ್ಲಿ ಪ್ರಯಾಣಿಕರಿಗೆ ಜೈ ಮಹಾರಾಷ್ಟ್ರ ಎಂಬ ಮೊಹರಿರುವ ಟಿಕೆಟ್ ಹಂಚಲಾಗಿದ್ದು ವಿವಾದಕ್ಕೆ ಕಾರಣವಾಗಿದೆ.
ಮುಂಡರಗಿ ತಾಲೂಕಿನ ಡೋಣಿ ಗ್ರಾಮದಿಂದ ಗದಗ ನಗರಕ್ಕೆ ರುವ ಬಸ್ಸಿನ ಟಿಕೆಟ್ನಲ್ಲಿ ಮಹಾರಾಷ್ಟ್ರ ರಾಜ್ಯ ಪರಿವಾಹನ, ಅಂತಾ ಮುದ್ರಣ ಇದೆ. ಅದಲ್ಲದೆ, ಜಯ ಮಹಾರಾಷ್ಟ್ರ ಎಂಬ ಮೊಹರು ಹೊಂದಿರುವ ಟಿಕೆಟ್ ರೋಲ್ ಬಳಕೆಯಾಗಿದೆ.
ಇದರಿಂದ ನಾಡ ಹಬ್ಬದ ದಿನವೇ ನಾಡಿಗೆ ಅಪಮಾನವಾಗಿದೆ ಎಂದು ಕನ್ನಡ ಪರ ಸಂಘಟೆನೆಗಳು ಆಕ್ರೋಶ ವ್ಯಕ್ತಪಡಿಸಿವೆ. ಮಹಾರಾಷ್ಟ್ರ ಮೊಹರು ಹೊಂದಿರುವ ರೋಲ್ ಬಳಸಿದ ಡಿಪೋ ಅಧಿಕಾರಿ ಮತ್ತು ನಿರ್ವಾಕರ ವಿರುದ್ಧ ಕನ್ನಡ ಪರ ಸಂಘಟನೆಗಳು ಕ್ರಮಕ್ಕೆ ಆಗ್ರಹಿಸಿವೆ.
ಆಂಧ್ರದ ವಿಶಾಖಪಟ್ಟಣಂ ನಿಂದ ಟಿಕೆಟ್ ರೋಲ್ ಗಳು ಪ್ರಿಂಟ್ ಆಗಿ ಮಹಾರಾಷ್ಟ್ರ, ಕರ್ನಾಟಕಕ್ಕೆ ಪೂರೈಕೆಯಾಗುತ್ತೆ. ಮಹಾರಾಷ್ಟ್ರ ಡಿಪೊಗೆ ಪೂರೈಕೆಯಾಗಬೇಕಿದ್ದ ಎರಡು ಬಾಕ್ಸ್ ಗಳು ಗದಗ ಡಿಪೊಗೆ ಬಂದಿವೆ.
KSRTC Ticket – KSRTC blundered by issuing Maharashtra stamped tickets