ಬಿಗ್ `ಸರ್ಪ್ರೈಸ್’ ಕೊಡಲು ಕುಮಾರ್.ಎಸ್.ವಿ ಅಂಡ್ ಟೀಂ ರೆಡಿ

1 min read
Surprise saaksha tv

ಬಿಗ್ `ಸರ್ಪ್ರೈಸ್’ ಕೊಡಲು ಕುಮಾರ್.ಎಸ್.ವಿ ಅಂಡ್ ಟೀಂ ರೆಡಿ

ಸ್ಯಾಂಡಲ್ ವುಡ್ ನಲ್ಲಿ ಹೊಸ ಪ್ರತಿಭೆಗಳಿಗೆ ಬರವೇ ಇಲ್ಲ. ಹೊಸ ಆಲೋಚನೆ.. ಹೊಸ ಕಥೆ.. ಹೊಸ ವಿಚಾರಗಳೊಂದಿಗೆ ಗಾಂಧಿನಗರದಲ್ಲಿ ಒಂದಲ್ಲಾ ಒಂದು ಸಿನಿಮಾ ಸೆಟ್ಟೇರುತ್ತಲೇ ಇರುತ್ತದೆ. ಹಾಗೇ ಸೆಟ್ಟೇರೋ ಸಾಕಷ್ಟು ಸಿನಿಮಾಗಳು ಪ್ರೇಕ್ಷಕರಿಗೆ `ಸರ್ಪ್ರೈಸ್’ ಕೊಟ್ಟಿವೆ. ನಿರೀಕ್ಷೆಗೂ ಮೀರಿ ಯಶಸ್ಸು ಕಂಡಿವೆ.

ಪ್ರತಿ ಬಾರಿ ಹೊಸಬರ ಸಿನಿಮಾ ಸೆಟ್ಟೇರುತ್ತಿದೆ ಅಂದ್ರೆ ಪ್ರೇಕ್ಷಕರು ಅಲ್ಲಿ ಹೊಸದೇನಿದೆ..? ಹೊಸಬರು `ಸರ್ಪ್ರೈಸ್’ ಕೊಡ್ತಾರಾ ಅಂತ ಯೊಚ್ನೆಯಲ್ಲಿ ತೊಡಗಿಕೊಂಡಿರುತ್ತಾರೆ. ಹಾಗೇ `ಸರ್ಪ್ರೈಸ್’ ಗಾಗಿ ಕಾಯುತ್ತಿರುತ್ತಾರೆ.

ಪ್ರತಿ ಸಿನಿಮಾದಲ್ಲಿ `ಸಪ್ರ್ರೈಸ್’ ಹುಡುಕೋ ಪ್ರೇಕ್ಷಕರರಿಗೆ ನಿಜವಾದ ಸರ್ಪ್ರೈಸ್ ನೀಡಲು ನಿರ್ದೇಶಕ ಕುಮಾರ್ ಎಸ್.ವಿ. ಅಂಡ್ ಟೀಂ ರೆಡಿಯಾಗಿದೆ.

Surprise saaksha tv

ಅಂದಹಾಗೆ ಈ ಸಿನಿಮಾದ ಟೈಟಲ್ ಸರ್ಪ್ರೈಸ್..! ಶೀರ್ಷಿಕೆ ಹೇಳುವಂತೆ ಇದೊಂದು ವಿಭಿನ್ನ ರೀತಿಯ ಕಥಾಹಂದರವನ್ನು ಹೊಂದಿರುತ್ತದೆ.

ಇದಕ್ಕೆ ಕುಮಾರ್ ಎಸ್.ವಿ. ಆಕ್ಷನ್ ಕಟ್ ಹೇಳುತ್ತಿದ್ದು, ಇದು ಇವರ ಚೊಚ್ಚಲ ಚಿತ್ರವಾಗಿದೆ.

ಸಿನಿಮಾದ ಕಥೆ, ಚಿತ್ರಕಥೆ ಬರೆದುಕೊಂಡಿರುವ ಕುಮಾರ್, ನಿರ್ದೇಶನವನ್ನೂ ಮಾಡುತ್ತಿರುವುದ ವಿಶೇಷವಾಗಿದೆ.

ಇನ್ನು ನಾನೊಂತರ ಸಿನಿಮಾದ ತಾರಕ್ ಈ ಚಿತ್ರದಲ್ಲಿ ನಾಯಕ ನಟನಾಗಿ ಬಣ್ಣ ಹಚ್ಚುತ್ತಿದ್ದಾರೆ.

Surprise saaksha tv

ಮನೋಜಿ ರೂಢಿಯ ಛಾಯಾಗ್ರಹಣ , ಆಕಾಶ್ ರವರ ಸಂಕಲನ ಮತ್ತು ಪ್ರದ್ಯೋತ್ತಮ್ ಸಂಗೀತ ಈ ಚಿತ್ರಕ್ಕಿದೆ. ಸಿನಿಮಾಗೆ ಲಿಂಗರಾಜು ವಾಡಕಿ ಬಂಡವಾಳ ಹೂಡುತ್ತಿದ್ದಾರೆ.

Leave a Reply

Your email address will not be published. Required fields are marked *

YOU MUST READ

Copyright © All rights reserved | SaakshaTV | JustInit DigiTech Pvt Ltd