ಲಡಾಖ್ – ಪಾಂಗೊಂಗ್ ತ್ಸೊದ ಫಿಂಗರ್ 4 ಪ್ರದೇಶವನ್ನು ವಶಪಡಿಸಿಕೊಂಡ ಭಾರತೀಯ ಸೇನೆ
ಲಡಾಖ್, ಸೆಪ್ಟೆಂಬರ್02: ಭಾರತೀಯ ಸೇನೆಯ ವಿಶೇಷ ಘಟಕವು ಲಡಾಖ್‌ನ ಪಾಂಗೊಂಗ್ ತ್ಸೊದ ಉತ್ತರ ನದಿ ದಂಡೆಯ ಫಿಂಗರ್ 4 ರ ಉದ್ದಕ್ಕೂ ಇರುವ ಹಾದಿಗಳಲ್ಲಿ ತನ್ನ ಪ್ರಾಬಲ್ಯ ಮೆರೆದಿದೆ ಮತ್ತು ಫಿಂಗರ್ 4 ಪ್ರದೇಶದಲ್ಲಿ ತನ್ನ ಪೋಸ್ಟ್‌ಗಳನ್ನು ಸ್ಥಾಪಿಸಿವೆ ಎಂದು ವರದಿಗಳು ತಿಳಿಸಿವೆ.
ಭಾರತೀಯ ಸೈನ್ಯದ ಮತ್ತೊಂದು ವಿಶೇಷ ಘಟಕಗಳು ದಕ್ಷಿಣದ ನದಿ ದಂಡೆಯಲ್ಲಿ ಚೀನೀ ಸೈನ್ಯವು ಭಾರತದ ಗಡಿ ಪ್ರದೇಶಗಳನ್ನು ವಶಪಡಿಸಿಕೊಳ್ಳುವ ಕಾರ್ಯಚರಣೆಯನ್ನು ವಿಫಲಗೊಳಿಸಿರುವುದರ ಜೊತೆಗೆ ಭಾರತೀಯ ಸೈನ‌್ಯದ ಇನ್ನೊಂದು ತಂಡ ಅತೀ ಎತ್ತರದ ಫಿಂಗರ್ 4 ಪ್ರದೇಶವನ್ನು ವಶಪಡಿಸಿಕೊಂಡಿರುವುದು ಚೀನಿಯರನ್ನು ಆಶ್ಚರ್ಯಚಕಿತಗೊಳಿಸಿದೆ. ಚೀನಾ ಪ್ರಸ್ತುತ ಫಿಂಗರ್ 4 ಮತ್ತು ಫಿಂಗರ್ 8 ನಡುವಿನ ಪ್ರದೇಶಗಳಲ್ಲಿ ಪ್ರಾಬಲ್ಯ ಹೊಂದಿದೆ, ಇದು ಎಲ್ ಎಸಿಯ ಭಾರತದ ಪ್ರದೇಶದಿಂದ ಸುಮಾರು 8 ಕಿ.ಮೀ ದೂರದಲ್ಲಿದೆ. ಈಗಾಗಲೇ ಭಾರತೀಯ ಸೇನೆಯು ದಕ್ಷಿಣ ದಂಡೆಯ ಪ್ರಮುಖ ರಿಡ್ಜ್ ಪಾಯಿಂಟ್ ಗಳಲ್ಲದೆ ಸಂಪೂರ್ಣ ಪ್ಯಾಂಗಾಂಗ್ ದಕ್ಷಿಣ ವಲಯವನ್ನು ತನ್ನ ನಿಯಂತ್ರಣದಲ್ಲಿರಿಸಿಕೊಂಡಿದೆ.
ಸೇನೆಯ ಮೂಲಗಳು ಭಾರತೀಯ ಸೇನೆಯು ಲಡಾಖ್ ಗಡಿಯಲ್ಲಿ ಈ ವಾರ ಮತ್ತಷ್ಟು ಯೋಧರನ್ನು ನಿಯೋಜನೆ ಮಾಡಲಾಗಿತ್ತು ಮತ್ತು ಸೈನಿಕರು ಅತಿ ಎತ್ತರದ ಫಿಂಗರ್ 4 ಪ್ರದೇಶವನ್ನು ಯಶಸ್ವಿಯಾಗಿ ತಲುಪಿ, ಪೋಸ್ಟ್ ಗಳನ್ನು ಸ್ಥಾಪಿಸಿದರು ಎಂದು ತಿಳಿಸಿವೆ. ಶತ್ರುಗಳು ಉತ್ತುಂಗದಲ್ಲಿದ್ದಾಗ ನಾವು ಸುಮ್ಮನೆ ಕುಳಿತುಕೊಳ್ಳುವುದರಲ್ಲಿ ಅರ್ಥವಿಲ್ಲ. ಇವು ಎಲ್‌ಎಸಿಯ ಭಾರತೀಯ ಪ್ರದೇಶದ ಮುನ್ನೆಚ್ಚರಿಕೆ ನಿಯೋಜನೆಗಳಾಗಿವೆ ಎಂದು ಮೂಲಗಳು ತಿಳಿಸಿವೆ ಎಂದು ವರದಿಯಾಗಿದ್ದು ಈ ಬಗ್ಗೆ ಹೆಚ್ಚಿನ ಮಾಹಿತಿ ನೀಡಲು ಭಾರತೀಯ ಸೈನ್ಯದ ಉನ್ನತ ಮೂಲಗಳು ನಿರಾಕರಿಸಿದೆ ಎಂದು ಹೇಳಲಾಗಿದೆ.