ಮಸಾಜ ಮಾಡಲು ಬಂದು ವೃದ್ಧೆಯ ಚಿನ್ನದ ಸರ ಕದ್ದ ಕಳ್ಳಿಯರು
ಬೆಂಗಳೂರು: ಮಹಿಳೆಯರು ಮಸಾಜ ಮಾಡಲು ಬಂದು ವೃದ್ಧೆಯ ಚಿನ್ನಾಭರಣ ಕದ್ದು ಪರಾರಿಯಾಗಿರುವ ಘಟನೆ ಬೆಂಗಳೂರಿನ ವಿಜಯನಗರದ ಹೊಸಹಳ್ಳಿಯಲ್ಲಿ ನಡೆದಿದೆ.
ಮಾಯಮ್ಮ ವಂಚನೆಗೆ ಒಳಗಾದ ವೃದ್ಧೆ. ಪ್ರಕರಣ ಸಂಬಂಧ ವಿಜಯನಗರ ಪೊಲೀಸರು ಠಾಣೆಯಲ್ಲಿ ಪ್ರಕರಣದಲ್ಲಿ ದಾಖಲಾಗಿದೆ.
ನಡೆದಿದ್ದೇನು? ಮಾಯಮ್ಮ ಇದೇ ತಿಂಗಳು 19 ರಂದು ಮನೆಗೆ ದಿನಚರಿ ವಸ್ತುಗಳನ್ನು ಕರೀದಿಸಲು ಹೊರ ಬಂದಿದ್ದರು. ಆಗ ಮಾರ್ಗಮಧ್ಯೆ ಇಬ್ಬರು ಮಹಿಳೆಯರು ವೃದ್ಧೆಯನ್ನು ಮಾತನಾಡಿಸಿದ್ದಾರೆ. ಮಾತಿನ ಮಧ್ಯೆ ತಾವು ಕಾಲು ನೋವು ಸೇರಿದಂತೆ ಇನ್ನೀತರ ನೋವುಗಳಿಗೆ ಮಸಾಜ ಮಾಡುತ್ತೇವೆ ಎಂದು ವೃದ್ಧೆ ತಿಳಿಸಿದ್ದಾರೆ.
ಇದನ್ನು ನಂಬಿದ ವೃದ್ಧೆ ತನಗೂ ಕಾಲವುನೋವು ಇದೆ ಎಂದು ಮಹಿಳೆಯರನ್ನು ಮನಗೆ ಕರದೆಕೊಂಡು ಹೋಗಿದ್ದಾರೆ. ನಂತರ ಮನೆಯಲ್ಲಿ ವೃದ್ಧೆಗೆ ಕೊರಳಲ್ಲಿ ಇದ್ದ ಚಿನ್ನದ ಸರ ತೆಗದು ಇಡುವಂತೆ ಹೇಳಿದ್ದಾರೆ. ಅವರ ಮಾತಿನಂತೆ ವೃದ್ಧೆ ಸರವನ್ನು ತೆಗೆದಿಟ್ಟಿದ್ದಾರೆ.
ನಂತರ ಮಹಿಳೆಯರು ವೃದ್ಧೆಯ ಗಮನ ಬೇರೆಡೆ ಸೆಳೆದು, ವೃದ್ಧೆಯ ಗಮನಕ್ಕೆ ಬಾರದೆ ಸರವನ್ನು ಕಳವು ಮಾಡಿ ಕಳ್ಳಿಯರು ಕಾಲ್ಕಿತ್ತಿದ್ದಾರೆ. ಈ ಸಂಬಂಧ ವೃದ್ದೆಯ ಮೊಮ್ಮಗ ಚೇತನ್ ಸುಮಾರು 60 ಗ್ರಾಂ ಚಿನ್ನದ ಸರ ಕಳವು ಮಾಡಿರುವುದಾಗಿ ಆರೋಪಿಸಿ ವಿಜಯನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಿದ್ದಾರೆ.