ಲಹರಿ ಆಡಿಯೋ ಸಂಸ್ಥೆಗೆ ‘ಡೈಮೆಂಡ್ ಪ್ಲೇ ಬಟನ್’ ಕೊಟ್ಟ ಯೂಟ್ಯೂಬ್
1.18 ಕೋಟಿ ಚಂದಾದಾರರನ್ನ ಹೊಂದಿರುವ , ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಮಂದಿ ಸಬ್ಸ್ಕ್ರೈಬರ್ಸ್ ಹೊಂದಿರುವ ಹೆಗ್ಗಳಿಕೆ ಹೊಂದಿರುವ , ದಕ್ಷಿಣ ಭಾರತದ ನಂಬರ್ ಆಡಿಯೋ ಸಂಸ್ಥೆ ಲಹರಿ ಆಡಿಯೋ ಸಂಸ್ಥೆ..
ಹತ್ತು ವರ್ಷದ ಹಿಂದೆಯೇ ಯೂಟ್ಯೂಬ್ ಚಾನೆಲ್ ತೆರೆದಿರುವ ಲಹರಿ ಆಡಿಯೋಗೆ ಕೋಟ್ಯಾಂತರ ಸಬ್ಕ್ರೈಬರ್ಸ್ ಇದ್ದು, ಲಹರಿ ಸಂಸ್ಥೆ ದೊಡ್ಡ ದೊಡ್ಡ ಹೈ ಬಜೆಟ್ ಸಿನಿಮಾಗಳ ,ಮ್ಯೂಸಿಕ್ ರೈಟ್ಸ್ ಕೊಂಡುಕೊಳ್ಳುತ್ತದೆ.. ಅದ್ರಲ್ಲೂ ತೀರ ಇತ್ತೀಚೆಗೆ ಭಾರತೀಯ ಸಿನಿಮಾರಂಗದ ಬಹುನಿರೀಕ್ಷೆಗೆ ಬಹುಕೋಟಿ ಬಜೆಟ್ ನ ಸಿನಿಮಾವಾದ ಕೆಜಿಎಫ್ ಚಾಪ್ಟರ್ 2 ಸಿನಿಮಾದ ಹಾಡುಗಳ ರೈಟ್ಸ್ ಪಡೆದುಕೊಂಡಿದೆ,, ಅದು ಕೂಡ ದಾಖಲೆ ಮಟ್ಟದ ರಾಯಧನ ನೀಡಿದೆ..
ಹೌದು.. ಬಾಹುಬಲಿಗಿಂತಲೂ ಹೆಚ್ಚಿನ ಹಣಕ್ಕೆ ಕೆಜಿಎಫ್ ಚಾಪ್ಟರ್ 2 ಹಾಡುಗಳನ್ನ ಲಹರಿ ಮ್ಯೂಸಿಕ್ಸ್ ಕೊಂಡುಕೊಳ್ಳುವ ಮೂಲಕ ಎಲ್ಲಾ ರೆಕಾರ್ಡ್ ಗಳನ್ನ ಪೀಸ್ ಪೀಸ್ ಮಾಡಿದೆ. ಇದೀಗ ಪ್ರತಿಸ್ಠಿತ ಆಡಿಯೋ ಸಂಸ್ಥೆಯಾದ ಲಹರಿ ಯೂಟ್ಯೂಬ್ ಚಾನೆಲ್ ಗೆ ಯೂಟ್ಯೂಬ್ ಸಂಸ್ಥೆಯು ಡೈಮೆಂಡ್ ಪ್ಲೇ ಬಟನ್ ಅನ್ನು ನೀಡಿದೆ..
‘ದಯವಿಟ್ಟು ನನ್ನ ತಟ್ಟೆಯ ಅನ್ನವನ್ನ ಕಸಿದುಕೊಳ್ಳಬೇಡಿ, ಅಪಪ್ರಚಾರ ಮಾಡಬೇಡಿ’ : ವಿನೋದ್ ಪ್ರಭಾಕರ್
ಹೌದು.. ಯೂಟ್ಯೂಬ್ ಸಂಸ್ಥೆಯು ಯೂಟ್ಯೂಬ್ ಚಾನೆಲ್ ಮಾಲೀಕರಿಗೆ ವಿವಿಧ ಪ್ಲೇ ಬಟನ್ಗಳನ್ನು ಬಹುಮಾನದ ರೂಪದಲ್ಲಿ ನೀಡುತ್ತದೆ. ಈ ಹಿಂದೆ ಲಹರಿಗೆ ಸಿಲ್ವರ್, ಗೋಲ್ಡ್ ಪ್ಲೇ ಬಟನ್ ಪಡೆದಿರುವ ಲಹರಿ ಆಡಿಯೋ ಸಂಸ್ಥೆಗೆ ಈಗ ಡೈಮೆಂಡ್ ಪ್ಲೇ ಬಟನ್ ಅನ್ನು ಯೂಟ್ಯೂಬ್ ನೀಡಿದೆ.
ಯೂಟ್ಯೂಬ್ ನೀಡಿರುವ ಡೈಮೆಂಡ್ ಪ್ಲೇ ಬಟನ್ ಹಿಡಿದು ಸಿಬ್ಬಂದಿಯ ಜೊತೆ ಫೊಟೊಕ್ಕೆ ಫೋಸು ನೀಡಿದ್ದಾರೆ ಲಹರಿ ವೇಲು. ಜನರ ಆಶೀರ್ವಾದದಿಂದ, ಹಾಡುಗಾರರು, ಸಂಗೀತಗಾರರು, ಸಂಗೀತ ನಿರ್ದೇಶಕರುಗಳು ನಮ್ಮೊಂದಿಗೆ ಕೈಜೋಡಿಸಿದ ನಟ-ನಟಿಯರು, ನಿರ್ಮಾಕರಿಂದ ಇದು ಸಾಧ್ಯವಾಯಿತು ಎಂದಿದ್ದಾರೆ.
ಲಹರಿ ಆಡಿಯೋ ಸಂಸ್ಥೆಯು ಕರ್ನಾಟಕ ಆಡಿಯೋ ಸಂಸ್ಥೆಯಾಗಿದ್ದು ದಕ್ಷಿಣ ಭಾರತ ಚಿತ್ರರಂಗದಲ್ಲಿ ತನ್ನ ಪ್ರಭಾವ ಹೊಂದಿದೆ. ಕನ್ನಡದ, ಪ್ರೇಮಲೋಕ, ರಣಧೀರ, ರಣರಂಗ ಇನ್ನೂ ಹಲವಾರು ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಹೊಂದಿರುವ ಲಹರಿ ಇತ್ತೀಚೆಗೆ ಕೆಜಿಎಫ್ 2 ಸಿನಿಮಾದ ಆಡಿಯೋ ಹಕ್ಕನ್ನು ಬರೋಬ್ಬರಿ 7.20 ಕೋಟಿ ಹಣ ತೆತ್ತು ಖರೀದಿ ಮಾಡಿದೆ. ‘ಕೆಜಿಎಫ್ 2’ನ ಎಲ್ಲ ಭಾಷೆಯ ಆಡಿಯೋ ಹಕ್ಕುಗಳು ಲಹರಿ ಬಳಿಯೇ ಇವೆ.
ಕನ್ನಡ ಮಾತ್ರವಲ್ಲದೆ ತೆಲುಗು, ತಮಿಳು, ಮಲಯಾಳಂ ಸಿನಿಮಾಗಳ ಆಡಿಯೋ ಹಕ್ಕುಗಳನ್ನು ಸಹ ಲಹರಿ ಖರೀದಿಸಿದೆ. ಈ ಹಿಂದೆ 3.5 ಕೋಟಿ ಮೊತ್ತಕ್ಕೆ ಬಾಹುಬಲಿ 2 ಸಿನಿಮಾದ ಆಡಿಯೋ ಹಕ್ಕುಗಳನ್ನು ಲಹರಿ ಖರೀದಿಸಿತ್ತು.
‘ನಾನು ಲಸಿಕೆ ಪಡೆದುಕೊಂಡಿಲ್ಲ, ಅಮೆರಿಕಾದ ವ್ಯಾಕ್ಸಿನ್ ಗೆ ಕಾಯುತ್ತಾ ಇದ್ದೇನೆ’ : ರಮ್ಯಾ